ಮೈಸೂರು: ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಂಪೂರ್ಣ ಬೆಂಬಲವಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಘೋಷಿಸಿದ್ದಾರೆ. ಕೆಆರ್ಎಸ್ ಭಾಗದಲ್ಲಿ ಗಣಿಗಾರಿಕೆ ನಿಷೇಧದ ಬಗ್ಗೆ ಸಾಕಷ್ಟು ಮನವಿ ಮಾಡಿದ್ದೇವೆ. ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದವರಿಗೆ ಪ್ರಾಣ ಬೆದರಿಕೆ ಇದೆ. ಗಣಿಗಾರಿಕೆಗೆಯಿಂದ ಮುಂದೆ ಕೆಆರ್ಎಸ್ ಡ್ಯಾಂಗೆ ಅಪಾಯ ಇದೆ. ಹೆಚ್ಡಿಕೆ, ಜೆಡಿಎಸ್ ಶಾಸಕರು ಗಂಭೀರವಾಗಿ ಯೋಚಿಸಬೇಕು ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ಲಕ್ಷಾಂತರ ರೈತರು ಕೆಆರ್ಎಸ್ ಜಲಾಶಯ ಅವಲಂಬಿಸಿದ್ದಾರೆ. ಕಳೆದ 20 ವರ್ಷದಿಂದ ಈವರೆಗೂ ಜಲಾಶಯಕ್ಕೆ ಅಪಾಯವಿದೆ. ಮಂಡ್ಯ ಜಿಲ್ಲೆಯ ಸಾಮಾನ್ಯ ಜನರಿಗೂ ಈ ಬಗ್ಗೆ ಅನುಮಾನ ಇದೆ. ಜಿಲ್ಲೆಯಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧ ಆಗಬೇಕು. ಹೀಗಾಗಿ ಸುಮಲತಾ ಹೋರಾಟಕ್ಕೆ ರೈತ ಸಂಘದ ಬೆಂಬಲವಿದೆ ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಹೋರಾಟ ಮುಂದುವರಿಯುತ್ತದೆ ಎಂದ ಸುಮಲತಾ
ನಾನು ಯಾರ ವಿರುದ್ಧ ಹೋರಾಟ ಮಾಡಿಲ್ಲ. ನನ್ನ ಹೋರಾಟ ಅಕ್ರಮ ಗಣಿಗಾರಿಕೆ ವಿರುದ್ಧ ಅಷ್ಟೆ. ನಾನು ಯಾರನ್ನೂ ಟಾರ್ಗೆಟ್ ಮಾಡಿ ಪಾಲಿಟಿಕ್ಸ್ ಮಾಡಿಲ್ಲ. ಈಗಾಗಲೇ 2 ಬಾರಿ ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿದ್ದೇನೆ. ಇನ್ನು ಮುಂದೆ ಮತ್ತಷ್ಟು ಹೆಚ್ಚಾಗಿ ವಿಚಾರ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದ ಸಂಸದೆ ಸುಮಲತಾ, ಅಕ್ರಮ ಗಣಿಗಾರಿಕೆ ತಡೆಯುವುದು ಕಷ್ಟ ಎಂಬುದು ಗೊತ್ತಿದೆ. ಆದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ
ಅಕ್ರಮ ಗಣಿಗಾರಿಕೆ ತಡೆಯುವುದು ಕಷ್ಟ, ಆದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ; ಸಂಸದೆ ಸುಮಲತಾ
ಸುಮಲತಾ, ಕುಮಾರಸ್ವಾಮಿ ವಾಕ್ ಸಮರ; ಅಂಬಿ ಅಭಿಮಾನಿಗಳಿಂದ ಪ್ರತಿಭಟನೆ
(Badagalapura Nagendra said Karnataka Rajya Raitha Association would support the Sumalatha struggle)