ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ; ಕಾಂಗ್ರೆಸ್ಸಿಗರ ಸಂಸ್ಕೃತಿ ಏನೆಂಬುದು ಇದರಿಂದ ತಿಳಿಯುತ್ತೆ ಎಂದ ನಳಿನ್ ಕುಮಾರ್ ಕಟೀಲು
ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು. ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲ್ಲ. ಆದ್ರೆ ಸಮಾಜ ನಮ್ಮನ್ನು ಗಮನಿಸುತ್ತಿರುತ್ತದೆ. ಕಾರ್ಯಕರ್ತರು, ಜನರು ನಮ್ಮಿಂದ ಅಪೇಕ್ಷೆ ಪಡುತ್ತಾರೆ. -ನಳಿನ್ ಕುಮಾರ್ ಕಟೀಲು
ಮಂಗಳೂರು: ಕಾಂಗ್ರೆಸ್ ಕಾರ್ಯಕರ್ತನಿಗೆ ಡಿಕೆ ಶಿವಕುಮಾರ್ ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಯಾವುದೇ ರಾಜಕಾರಣಿ ಎಲ್ಲೇ ಮೀರಿ ವರ್ತಿಸಬಾರದು. ಕಾಂಗ್ರೆಸ್ಸಿಗರ ಸಂಸ್ಕೃತಿ ಏನೆಂಬುದು ಇದರಿಂದ ತಿಳಿಯುತ್ತೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಡಿಕೆ ಶೀವಕುಮಾರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ನಳಿನ್ ಕುಮಾರ್ ಕಟೀಲು, ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು. ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲ್ಲ. ಆದ್ರೆ ಸಮಾಜ ನಮ್ಮನ್ನು ಗಮನಿಸುತ್ತಿರುತ್ತದೆ. ಕಾರ್ಯಕರ್ತರು, ಜನರು ನಮ್ಮಿಂದ ಅಪೇಕ್ಷೆ ಪಡುತ್ತಾರೆ. ಅವರು ಬಂದಾಗ ಗೌರವಯುತವಾಗಿ ನಡೆಸಿಕೊಳ್ಳಬೇಕು. ಯಾವುದೇ ರಾಜಕಾರಣಿ ಎಲ್ಲೇ ಮೀರಿ ವರ್ತಿಸಬಾರದು. ಕಾಂಗ್ರೆಸ್ಸಿಗರ ಸಂಸ್ಕೃತಿ ಏನೆಂಬುದು ಇದರಿಂದ ತಿಳಿಯುತ್ತೆ. ಕಾಂಗ್ರೆಸ್ಸಿಗರು ಇದೇ ಮೊದಲಲ್ಲ ಹಲ್ಲೆ ಮಾಡುತ್ತಿರೋದು. ಸಿದ್ದರಾಮಯ್ಯ ತೊಡೆತಟ್ಟಿ ವಿಧಾನಸೌಧದೊಳಗೆ ಹೊಕ್ಕಿದವ್ರು. ಕಾಂಗ್ರೆಸ್ ರೌಡಿಗಳ ಪಕ್ಷ ಅಲ್ಲ ಎಂದು ಯಾರೂ ಹೇಳಲ್ಲ. ಅವರ ವ್ಯಕ್ತಿತ್ವದಲ್ಲೇ ಅದು ಕಾಣುತ್ತದೆ. ಅವರ ಇತಿಹಾಸ ತೆಗೆದು ನೋಡಿ, ರೌಡಿ ಮಾತ್ರವಲ್ಲ, ಈ ದೇಶದಲ್ಲಿ ಎಲ್ಲಾ ಕೆಟ್ಟ ಕೆಲಸಗಳಿಗೆ ಪ್ರೇರಣೆ ಅವರೇ ಎಂದರು.
ಅವನು ನಮ್ಮ ಹುಡಗ, ನನ್ನ ಸಂಬಂಧಿಕ ಇನ್ನು ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್.. ಅವನು ನಮ್ಮ ಹುಡಗ, ನನ್ನ ಸಂಬಂಧಿಕ. ಏನೋ ಹೆಗಲ ಮೇಲೆ ಕೈಹಾಕಲು ಬರ್ತಿದ್ದೀಯಾ ಎಂದಿದ್ದೆ. ನೋಡಿದವರು ಏನಂತಾರೆ ಎಲ್ಲ ಅವನಿಗೆ ತಿಳಿಹೇಳಿದ್ದೆ ಅಷ್ಟೆ. ಹೆಗಲ ಮೇಲೆ ಕೈಹಾಕಲು ಬಂದಿದ್ದಕ್ಕೆ ಎರಡೇಟು ಹೊಡೆದಿದ್ದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ನಡೆದದ್ದೇನು? ಪಕ್ಕದಲ್ಲಿ ಬಂದು ನಿಂತ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಥಳಿಸಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿತ್ತು. ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಡಿ.ಕೆ.ಶಿವಕುಮಾರ್ ಕೆ.ಎಂ.ದೊಡ್ಡಿಗೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಹಿಂಭಾಗದಲ್ಲಿ ಬರುತ್ತಿದ್ದ. ಅಲ್ಲದೇ ಹಿಂಭಾಗದಿಂದ ಬಂದು ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿದ ಆರೋಪ ಕೇಳಿಬಂದಿದ್ದು, ಕಾರ್ಯಕರ್ತನ ತಲೆ ಮೇಲೆ ಪಟಾರ್ ಅಂತ ಡಿಕೆಶಿ ಬಾರಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಕೊಟ್ಟ ಏಟಿಗೆ ಕಾರ್ಯಕರ್ತರು ತಬ್ಬಿಬ್ಬಾಗಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ವರ್ತನೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಧಾನ ತಂದಿತ್ತು. ಈ ಹಿಂದೆ ಸೆಲ್ಫಿಗೆ ಬರುವ ಕಾರ್ಯಕರ್ತರಿಗೂ ಡಿ.ಕೆ.ಶಿವಕುಮಾರ್ ಬಾರಿಸಿದ್ದರು. ಮೊಬೈಲ್ನಲ್ಲಿ ವಿಡಿಯೋ ಮಾಡ್ತಿರುವುದನ್ನು ನೋಡಿ ಹೆಗಲ ಮೇಲೆ ಕೈ ಹಾಕ್ತಿಯಾ, ಕಾಮನ್ಸೆನ್ಸ್ ಇಲ್ವಾ ಅಂತ ಡಿ.ಕೆ.ಶಿವಕುಮಾರ್ ಗದರಿದ್ದರು.
ಒದ್ದು ಹೊರಗೆ ಹಾಕುವೆ ಎಂದಿದ್ದ ಡಿಕೆಶಿ ಜೂನ್ 12 ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ ಆಗಿದ್ದರು. ನಾನು ಮಾತಾಡುವಾಗ ಮಧ್ಯ ಮಾತಾಡಿದರೆ ಒದ್ದು ಹೊರಗೆ ಹಾಕುವೆ. ನಾನು ಕತ್ತೆ ಕಾಯೋಕೆ ಇಲ್ಲಿಗೆ ಬಂದಿಲ್ಲವೆಂದು ಡಿಕೆಶಿ ಆಕ್ರೋಶ ಹೊರಹಾಕಿ, ಕಾರ್ಯಕರ್ತರಿಗೆ ಶಿಸ್ತು ಕಲಿಸಿ ಎಂದು ಜಿಲ್ಲಾಧ್ಯಕ್ಷ ತಾಜ್ ಪೀರ್ಗೆ ಸೂಚನೆ ನೀಡಿದ್ದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮಾತನಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಮಧ್ಯದಲ್ಲಿ ಮಾತನಾಡಿದ್ದರು. ಇದಕ್ಕೆ ಸಿಟ್ಟಾದ ಡಿಕೆಶಿ ಕಾರ್ಯಕರ್ತರ ವಿರುದ್ಧ ಗರಂ ಆಗಿದ್ದರು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಪಾಳಮೋಕ್ಷಗೈದದ್ದು ಕಾಂಗ್ರೆಸ್ ಕಾರ್ಯಕರ್ತನಿಗಲ್ಲ, ಜೆಡಿಎಸ್ ಕಾರ್ಯಕರ್ತನಿಗೆ!
(Nalin kumar kateel slams dk shivakumar and congress over DKS slapping worker)
Published On - 12:07 pm, Sun, 11 July 21