ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಪಾಳಮೋಕ್ಷಗೈದದ್ದು ಕಾಂಗ್ರೆಸ್ ಕಾರ್ಯಕರ್ತನಿಗಲ್ಲ, ಜೆಡಿಎಸ್ ಕಾರ್ಯಕರ್ತನಿಗೆ!
‘ನಮ್ಮ ಒಕ್ಕಲಿಗ ನಾಯಕ ಬರುತ್ತಿದ್ದಾರೆ ಎಂದು ಪಕ್ಷ ಮರೆತು ಹೋಗಿದ್ದೆ. ಅವರನ್ನು ನೋಡಿದಾಗ ಅಭಿಮಾನ ಪ್ರೀತಿ ಹೆಚ್ಚಾಗಿತು. ಈ ವೇಳೆ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಕೈಯನ್ನು ಹಿಂದೆ ಇಡಲು ಹೋದೆ. ಅಷ್ಟಕ್ಕೇ ಅವರು ನನ್ನ ಮೇಲೆ ಕೈ ಮಾಡಿದರು: ಜೆಡಿಎಸ್ ಕಾರ್ಯಕರ್ತ ಡಿ.ಸಿ.ತಮಣ್ಣ
ಮಂಡ್ಯ: ಅಚ್ಚರಿಯ ಮತ್ತು ಕುತೂಹಲಕರ ಬೆಳವಣಿಗೆಗಳಲ್ಲಿ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತನ ಮೇಲಲ್ಲ, ಬದಲಿಗೆ ಜೆಡಿಎಸ್ ಕಾರ್ಯಕರ್ತನ ಮೇಲೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಒಕ್ಕಲಿಗ ನಾಯಕ ಎಂಬ ಅಭಿಮಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿಗೆ ಹೋದ ಜೆಡಿಎಸ್ ಕಾರ್ಯಕರ್ತನಿಗೆ ಡಿ.ಕೆ.ಶಿವಕುಮಾರ್ರಿಂದ ಕಪಾಳಮೋಕ್ಷ ಪ್ರಾಪ್ತವಾಗಿತ್ತು. ಕಪಾಳಮೋಕ್ಷ ಪಡೆದವರು ಜೆಡಿಎಸ್ ಕಾರ್ಯಕರ್ತ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊರೆಬೊಮ್ಮನಹಳ್ಳಿ ಉಮೇಶ್ ಎಂಬುದು ಇದೀಗ ಬಯಲಿಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವರ್ತನೆಗೆ ಜೆಡಿಎಸ್ ಕಾರ್ಯಕರ್ತ ಉಮೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಮ್ಮ ಒಕ್ಕಲಿಗ ನಾಯಕ ಬರುತ್ತಿದ್ದಾರೆ ಎಂದು ಪಕ್ಷ ಮರೆತು ಹೋಗಿದ್ದೆ. ಅವರನ್ನು ನೋಡಿದಾಗ ಅಭಿಮಾನ ಪ್ರೀತಿ ಹೆಚ್ಚಾಗಿತು. ಈ ವೇಳೆ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಕೈಯನ್ನು ಹಿಂದೆ ಇಡಲು ಹೋದೆ. ಅಷ್ಟಕ್ಕೇ ಅವರು ನನ್ನ ಮೇಲೆ ಕೈ ಮಾಡಿದರು. ಅವರು ಕೈ ಮಾಡಿದ್ದು ಸರಿಯಲ್ಲ. ಅವರ ಹೆಗಲ ಮೇಲೆ ಕೈ ಹಾಕುವಂತಹ ಸಣ್ಣ ಮನುಷ್ಯ ನಾನು ಅಲ್ಲ. ನಾನು ಕೂಡ ಪ್ರಜ್ಞೆ ಇರುವ ವ್ಯಕ್ತಿ. ನಾನು ಜೆಡಿಎಸ್ ಕಾರ್ಯಕರ್ತ ಡಿ.ಸಿ.ತಮಣ್ಣ ಅವರ ಪಕ್ಕ ಅಭಿಮಾನಿ. ಡಿ.ಕೆ.ಶಿವಕುಮಾರ್ ನನ್ನ ಸಂಬಂಧಿ ಕೂಡ ಆಗಬೇಕು. ನಮ್ಮ ಜನಾಂಗದ ನಾಯಕ ಎಂಬ ಅಭಿಮಾನಕ್ಕೆ ನಾನು ಹೋದೆ. ಬೇರೆ ವ್ಯಕ್ತಿ ನನ್ನ ಮೇಲೆ ಕೈ ಮಾಡಿದ್ರೆ ನಾನು ಅಲ್ಲೆ ಪ್ರತಿಭಟನೆ ಮಾಡುತ್ತಿದ್ದೆ. ಅವರ ಮೇಲಿನ ಸ್ಥಾನಮಾನಕ್ಕೆ ಬೆಲೆ ಕೊಟ್ಟು ನಾನು ಸುಮ್ಮನೆ ಇದ್ದೀನಿ. ಡಿಕೆಶಿ ಅವರ ವರ್ತನೆ ಸರಿ ಇಲ್ಲ. ಅವರ ಅಧ್ಯಕ್ಷಗಿರಿಗೆ ಇದು ಶೋಭೆ ತರುವುದಿಲ್ಲ. ವರ್ತನೆಯನ್ನು ಅವರು ಬಿಡಬೇಕು ಎಂದು ಕಪಾಳಮೋಕ್ಷಕ್ಕೆ ಪ್ರಾಪ್ತವಾದ ಜೆಡಿಎಸ್ ಕಾರ್ಯಕರ್ತ ಟಿವಿ9ಗೆ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಈ ಘಟನೆ ನಡೆದಿತ್ತು. ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಡಿ.ಕೆ.ಶಿವಕುಮಾರ್ ಕೆ.ಎಂ.ದೊಡ್ಡಿಗೆ ಆಗಮಿಸಿದ್ದರು.
‘ಹೆಗಲ ಮೇಲೆ ಕೈ ಹಾಕೋದು ಅಂದ್ರೆ ಏನರ್ಥ?’ ಸ್ಪಷ್ಟನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಾರ್ಯಕರ್ತನ ಮೇಲೆ ಕೈ ಮಾಡಿರುವ ವಿಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ‘ಹೆಗಲ ಮೇಲೆ ಕೈ ಹಾಕೋದು ಅಂದ್ರೆ ಏನ್ ಅರ್ಥ? ಹೆಗಲ ಮೇಲೆ ಕೈಹಾಕಿದರೆ ನೋಡುವವರು ಏನಂದುಕೊಳ್ಳುತ್ತಾರೆ? ಇದಕ್ಕೆಲ್ಲಾ ಅವಕಾಶ ಕೊಡಲು ಆಗುತ್ತಾ ? ಎಂದು ವ್ಯಾಖ್ಯಾನಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಕುರಿತು ಸ್ಪಷ್ಟನೆ ನೀಡಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.
ಇದನ್ನೂ ಓದಿ:
ಪಕ್ಕದಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಥಳಿಸಿದ ಡಿ.ಕೆ.ಶಿವಕುಮಾರ್
( KPCC president DK Shivakumar hits not a congress worker but he is JDS Worker)
Published On - 8:17 pm, Sat, 10 July 21