AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕರ್ತನಿಗೆ ಕಪಾಳಮೋಕ್ಷ: ‘ಹೆಗಲ ಮೇಲೆ ಕೈ ಹಾಕೋದು ಅಂದ್ರೆ ಏನರ್ಥ?’ ಸ್ಪಷ್ಟನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ವರ್ತನೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಧಾನ ತಂದಿತ್ತು. ಈ ಹಿಂದೆ ಸೆಲ್ಫಿಗೆ ಬರುವ ಕಾರ್ಯಕರ್ತರಿಗೂ ಡಿ.ಕೆ.ಶಿವಕುಮಾರ್ ಬಾರಿಸಿದ್ದರು. ಮೊಬೈಲ್​ನಲ್ಲಿ ವಿಡಿಯೋ ಮಾಡ್ತಿರುವುದನ್ನು ನೋಡಿ ಹೆಗಲ ಮೇಲೆ ಕೈ ಹಾಕ್ತಿಯಾ, ಕಾಮನ್ಸೆನ್ಸ್ ಇಲ್ವಾ ಅಂತ ಡಿ.ಕೆ.ಶಿವಕುಮಾರ್ ಗದರಿದ್ದರು.

ಕಾರ್ಯಕರ್ತನಿಗೆ ಕಪಾಳಮೋಕ್ಷ: ‘ಹೆಗಲ ಮೇಲೆ ಕೈ ಹಾಕೋದು ಅಂದ್ರೆ ಏನರ್ಥ?’ ಸ್ಪಷ್ಟನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕಾರ್ಯಕರ್ತನ ತಲೆಗೆ ಹೊಡೆದ ಡಿ.ಕೆ.ಶಿವಕುಮಾರ್
TV9 Web
| Updated By: guruganesh bhat|

Updated on:Jul 10, 2021 | 3:18 PM

Share

ಬೆಂಗಳೂರು: ಕಾರ್ಯಕರ್ತನ ಮೇಲೆ ಕೈ ಮಾಡಿರುವ ವಿಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ‘ಹೆಗಲ ಮೇಲೆ ಕೈ ಹಾಕೋದು ಅಂದ್ರೆ ಏನ್ ಅರ್ಥ? ಹೆಗಲ ಮೇಲೆ ಕೈಹಾಕಿದರೆ ನೋಡುವವರು ಏನಂದುಕೊಳ್ಳುತ್ತಾರೆ? ಇದಕ್ಕೆಲ್ಲಾ ಅವಕಾಶ ಕೊಡಲು ಆಗುತ್ತಾ ? ಎಂದು ವ್ಯಾಖ್ಯಾನಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಲಮೋಕ್ಷ ಮಾಡಿದ ಕುರಿತು ಸ್ಪಷ್ಟನೆ ನೀಡಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.

ಪಕ್ಕದಲ್ಲಿ ಬಂದು ನಿಂತ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಥಳಿಸಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿತ್ತು. ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಡಿ.ಕೆ.ಶಿವಕುಮಾರ್ ಕೆ.ಎಂ.ದೊಡ್ಡಿಗೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಹಿಂಭಾಗದಲ್ಲಿ ಬರುತ್ತಿದ್ದ. ಅಲ್ಲದೇ ಹಿಂಭಾಗದಿಂದ ಬಂದು ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿದ ಆರೋಪ ಕೇಳಿಬಂದಿದ್ದು, ಕಾರ್ಯಕರ್ತನ ತಲೆ ಮೇಲೆ ಪಟಾರ್ ಅಂತ ಡಿಕೆಶಿ ಬಾರಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಕೊಟ್ಟ ಏಟಿಗೆ ಕಾರ್ಯಕರ್ತರು ತಬ್ಬಿಬ್ಬಾಗಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ವರ್ತನೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಧಾನ ತಂದಿತ್ತು. ಈ ಹಿಂದೆ ಸೆಲ್ಫಿಗೆ ಬರುವ ಕಾರ್ಯಕರ್ತರಿಗೂ ಡಿ.ಕೆ.ಶಿವಕುಮಾರ್ ಬಾರಿಸಿದ್ದರು. ಮೊಬೈಲ್​ನಲ್ಲಿ ವಿಡಿಯೋ ಮಾಡ್ತಿರುವುದನ್ನು ನೋಡಿ ಹೆಗಲ ಮೇಲೆ ಕೈ ಹಾಕ್ತಿಯಾ, ಕಾಮನ್ಸೆನ್ಸ್ ಇಲ್ವಾ ಅಂತ ಡಿ.ಕೆ.ಶಿವಕುಮಾರ್ ಗದರಿದ್ದರು.

ಒದ್ದು ಹೊರಗೆ ಹಾಕುವೆ ಎಂದಿದ್ದ ಡಿಕೆಶಿ ಜೂನ್ 12 ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ ಆಗಿದ್ದರು. ನಾನು ಮಾತಾಡುವಾಗ ಮಧ್ಯ ಮಾತಾಡಿದರೆ ಒದ್ದು ಹೊರಗೆ ಹಾಕುವೆ. ನಾನು ಕತ್ತೆ ಕಾಯೋಕೆ ಇಲ್ಲಿಗೆ ಬಂದಿಲ್ಲವೆಂದು ಡಿಕೆಶಿ ಆಕ್ರೋಶ ಹೊರಹಾಕಿ, ಕಾರ್ಯಕರ್ತರಿಗೆ ಶಿಸ್ತು ಕಲಿಸಿ ಎಂದು ಜಿಲ್ಲಾಧ್ಯಕ್ಷ ತಾಜ್ ಪೀರ್ಗೆ ಸೂಚನೆ ನೀಡಿದ್ದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮಾತನಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಮಧ್ಯದಲ್ಲಿ ಮಾತನಾಡಿದ್ದರು. ಇದಕ್ಕೆ ಸಿಟ್ಟಾದ ಡಿಕೆಶಿ ಕಾರ್ಯಕರ್ತರ ವಿರುದ್ಧ ಗರಂ ಆಗಿದ್ದರು.

ಇದನ್ನೂ ಓದಿ: 

ಟಿವಿ9 ವಿಶೇಷ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಂದರ್ಶನ: ‘ಎಲ್ಲರೂ ಕಾಂಗ್ರೆಸ್ ಮುಖ್ಯಮಂತ್ರಿಯ ಮಾತಾಡುವಂತೆ ಪಕ್ಷವನ್ನು ಬೆಳೆಸಿದ್ದೇವೆ

ಪಕ್ಕದಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಥಳಿಸಿದ ಡಿ.ಕೆ.ಶಿವಕುಮಾರ್

(KPCC President DK Shivakumar clarifies about her hit the congress worker in Mandya)

Published On - 3:17 pm, Sat, 10 July 21