ಹತ್ತನೇ ತರಗತಿವರೆಗೂ ಕನ್ನಡ ಕಲಿಕೆ ಕಡ್ಡಾಯಕ್ಕೆ ವಲಸಿಗ ಪೋಷಕರ ವಿರೋಧ; ಸಹಿ ಸಂಗ್ರಹ ಅಭಿಯಾನ ಆರಂಭ
ಈ ವರ್ಷ 10ನೇ ತರಗತಿಯಲ್ಲಿ ಇರುವವರು ಪರೀಕ್ಷೆ ಎದುರಿಸುವುದು ಹೇಗೆ? ಮೊದಲ ಹಂತದಿಂದ ಕನ್ನಡ ಕಲಿತು ಬೋರ್ಡ್ ಎಕ್ಸಾಂ ಎದುರಿಸುವುದು ಹೇಗೆ? ವಿದ್ಯಾರ್ಥಿಗಳ ಫಲಿತಾಂಶಕ್ಕೆ ಇದರಿಂದ ಸಾಕಷ್ಟು ಹಿನ್ನೆಡೆಯಾಗುತ್ತದೆ ಎಂದು ವಲಸಿಗ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಹತ್ತನೇ ತರಗತಿಯವರೆಗೂ ಕನ್ನಡ ಕಲಿಕೆ ಕಡ್ಡಾಯಕ್ಕೆ ಪೋಷಕರ ವಿರೋಧ ವ್ಯಕ್ತವಾಗಿದೆ. ಕನ್ನಡ ಕಲಿಕೆ ವಿರೋಧಿಸಿ ಅರ್ಜಿ ಸಲ್ಲಿಸಲು ಸಹಿ ಸಂಗ್ರಹ ಅಭಿಯಾನವನ್ನು ವಲಸಿಗ ಪೋಷಕರು ಈಗಾಗಲೇ ಆರಂಭಿಸಿದ್ದಾರೆ. ಈಗಾಗಲೇ ವಲಸಿಗ ಪೋಷಕರಿಂದ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಯಲಹಂಕ ಪ್ರೆಸಿಡೆನ್ಸಿ ಶಾಲೆ ಪೋಷಕರಿಂದ ಸಹಿ ಸಂಗ್ರಹ ನಡೆಯುತ್ತಿದೆ.
ಕನ್ನಡ ಭಾಷೆಯ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಶೈಕ್ಷಣಿಕವಾಗಿ ಕನ್ನಡ ಕಡ್ಡಾಯವಾದರೆ ಕಷ್ಟವಾಗುತ್ತದೆ. ಕನ್ನಡದ ಪರಿಚಯ ಇಲ್ಲದ ಹೈಸ್ಕೂಲ್ ಮಕ್ಕಳ ಪಾಡೇನು? ಈ ವರ್ಷ 10ನೇ ತರಗತಿಯಲ್ಲಿ ಇರುವವರು ಪರೀಕ್ಷೆ ಎದುರಿಸುವುದು ಹೇಗೆ? ಮೊದಲ ಹಂತದಿಂದ ಕನ್ನಡ ಕಲಿತು ಬೋರ್ಡ್ ಎಕ್ಸಾಂ ಎದುರಿಸುವುದು ಹೇಗೆ? ವಿದ್ಯಾರ್ಥಿಗಳ ಫಲಿತಾಂಶಕ್ಕೆ ಇದರಿಂದ ಸಾಕಷ್ಟು ಹಿನ್ನೆಡೆಯಾಗುತ್ತದೆ ಎಂದು ವಲಸಿಗ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೀಗ ಪೋಷಕರು ಚೇಂಜ್ ಆರ್ಗನೈಸೇಶನ್ ವೆಬ್ಸೈಟ್ನಲ್ಲಿ ಸಹಿ ಮಾಡುವ ಅಭಿಯಾನ ಆರಂಭಿಸಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಹತ್ತನೇ ತರಗತಿವರೆಗು ಕನ್ನಡ ಕಡ್ಡಾಯ ಮಾಡಲಾಗಿದೆ. ಈ ಶೈಕ್ಷಣಿಕ ವರ್ಷದಿಂದ ಈ ನಿಯಮ ಆರಂಭವಾಗಲಿದೆ. ಈಗ ಓದಲು ಶುರು ಮಾಡಿರುವ ಮಕ್ಕಳಿಗೆ ಇದರಿಂದ ತೊಂದರೆ ಆಗುವುದಿಲ್ಲ. ಆದರೆ, ಮೊದಲಿಂದಲೂ ಕನ್ನಡದ ಪರಿಚಯವೇ ಇಲ್ಲದ ಹೈಸ್ಕೂಲ್ ಮಕ್ಕಳ ಪಾಡೇನು? ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಈಗಾಗ್ಲೇ ನೂರಾರು ವಲಸಿಗ ಪೋಷಕರು ಈ ಪಿಟಿಷನ್ಗೆ ಸಹಿ ಮಾಡಿದ್ದಾರೆ. ಮತ್ತೊಂದೆಡೆ, ಹಾಗಾದ್ರೆ ಕನ್ನಡ ಕಲಿಯಲು ಮಾತಾನಾಡಲು ಇಚ್ಛಿಸದವರು ಕರ್ನಾಟಕದಲ್ಲಿರಬೇಕ? ಕರ್ನಾಟಕದಲ್ಲಿ ಶಿಕ್ಷಣ ಪಡೆಯುತ್ತಿದ್ದರು ಕನ್ನಡದ ವಿರೋಧ ಏಕೆ? ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.
ಈ ರಾಜ್ಯದಲ್ಲಿರಬೇಕಾದರೆ ಕನ್ನಡ ಭಾಷಾ ಜ್ಞಾನವಿರಬೇಕು. ಆದರೆ ಶೈಕ್ಷಣಿಕವಾಗಿ ಕನ್ನಡ ಕಡ್ಡಾಯವಾದರೆ ಕಷ್ಟವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ, ಹರಿಪ್ರಿಯ ರಾಮಕೃಷ್ಣ ಎನ್ನುವವರು ಪಿಟಿಷನ್ ಶುರು ಮಾಡಿದ್ದಾರೆ. ಎರಡೂವರೆ ಸಾವಿರ ಸಹಿಗಳಾದರೆ ಅರ್ಜಿ ಮುಖ್ಯಮಂತ್ರಿ ಬಳಿ ಹೋಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಕನ್ನಡಿಗ, ಕರ್ನಾಟಕ ಸಂಬಂಧ ವಿಷಯಗಳಲ್ಲಿ ಹೋರಾಡೋಣ; ಬೇರೆಲ್ಲಾ ವಿಷಯ ಉಪೇಕ್ಷಿಸೋಣ -ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಕರೆ
ಮೇಕೆದಾಟು ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ