ಗಣೇಶ ಮೆರವಣಿಗೆ ವೇಳೆ ಹಸಿರು ಧ್ವಜ ತಂದು ಮುಸ್ಲಿಂ ಯುವಕ ಗಲಾಟೆ: ಹಿಂದೂ ಯುವಕನಿಗೆ ಚಾಕು ಇರಿತ

11ನೇ ದಿನ ಎಲ್ಲೆಡೆ ಗಣೇಶ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ನಡೆದಿವೆ. ಶಿವಮೊಗ್ಗ, ರಾಯಚೂರು, ಹುಬ್ಬಳ್ಳಿ ಸೇರಿದಂತೆ ವಿವಿದೆಡೆ ಪ್ರತಿಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ನಿನ್ನೆ 11ನೇ ದಿನಕ್ಕೆ ಭವ್ಯ ಶೋಭಾಯಾತ್ರೆಯಲ್ಲಿ ವಿವಿಧ ವಾದ್ಯಗಳಿಗೆ ಯುವಕರು ಕುಣಿದು ಕುಪ್ಪಳಿಸಿ ವಿಸರ್ಜನೆ ಮಾಡಿದ್ದಾರೆ. ಆದ್ರೆ, ಬಾಗಲಕೋಟೆಯಲ್ಲಿ ಗಣೇಶ ಮೆರವಣಿಗೆ ವೇಳೆ ಮುಸ್ಲಿಂ ಯುವಕ ಕಾಲು ಕೆದರಿ ಗಲಾಟೆ ಮಾಡಿಲ್ಲದೇ ಹಿಂದೂ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.

ಗಣೇಶ ಮೆರವಣಿಗೆ ವೇಳೆ ಹಸಿರು ಧ್ವಜ ತಂದು ಮುಸ್ಲಿಂ ಯುವಕ ಗಲಾಟೆ: ಹಿಂದೂ ಯುವಕನಿಗೆ ಚಾಕು ಇರಿತ
ಆಸಿಪ್ (ನಿಂತುಕೊಂಡವ) ನವೀನ್ ಮಲಗಿದ್ದವ)
Updated By: ರಮೇಶ್ ಬಿ. ಜವಳಗೇರಾ

Updated on: Sep 07, 2025 | 12:55 PM

ಬಾಗಲಕೋಟೆ, (ಸೆಪ್ಟೆಂಬರ್ 07): ಗಣೇಶ ಮೈರ್ತಿ ಮೆರವಣಿಗೆ (ganesh idol immersion) ವೇಳೆ ಮುಸ್ಲಿಂ (Muslim) ಯುವಕನೋರ್ವ ಹಸಿರು ಧ್ವಜ (green flag) ತಂದು ಗಲಾಟೆ ಸೃಷ್ಟಿಸಿದ್ದು, ಈ ವೇಳೆ ಹಿಂದೂ (Hindu) ಯುವಕನಿಗೆ ಚಾಕುವಿನಿಂದ ಹಲ್ಲೆ ಹಲ್ಲೆ ಮಾಡಿದ್ದಾನೆ. ನಿನ್ನೆ(ಸೆಪ್ಟೆಂಬರ್ 06) ಬಾಗಲಕೋಟೆ (Bagalkot) ತಾಲ್ಲೂಕಿನ ಹೊಸಮುರನಾಳ ಗ್ರಾಮದಲ್ಲಿ (hosamuranala Village) ನಡೆದಿದೆ. ಗ್ರಾಮದಲ್ಲಿ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ಆಸಿಪ್ ಬೆಳಗಾಂವಕರ್(21) ಎನ್ನುವ ಯುವಕ ಹಸಿರು ಧ್ವಜ ತಂದಿದ್ದಾನೆ. ಇದಕ್ಕೆ ಹಿಂದೂ ಯವಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನವೀನ ಕೂಡ್ಲೆಪ್ಪನವರ(22) ಎನ್ನುವ ಯುವಕನಿಗೆ ಚಾಕುವಿನಿಂದ ಇರಿದಿದ್ದಾನೆ.

ಬಾಗಲಕೋಟೆ ತಾಲ್ಲೂಕಿನ ಹೊಸಮುರನಾಳ ಗ್ರಾಮದಲ್ಲಿ ವೀರ ಸಾವರ್ಕರ್ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು, ನಿನ್ನೆ(ಸೆಪ್ಟೆಂಬರ್ 06) 11ನೇ ದಿನವಾಗಿದ್ದರಿಂದ ಗಣೇಶ ವಿಸರ್ಜನೆಗೂ ಮುನ್ನ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಶೋಭಾಯಾತ್ರೆಯಲ್ಲಿ ಯುವಕರು ಕುಣಿದು ಕುಪ್ಪಿಸುತ್ತಿದ್ದರು. ಇನ್ನು ಕೆಲ ಯುವಕರು ಕೇಸರಿ ಧ್ವಜ ಹಿಡಿದು ಡ್ಯಾನ್ಸ್ ಮಾಡುತ್ತಿದ್ದರು. ಆದ್ರೆ, ಈ ವೇಳೆ ಮುಸ್ಲಿಂ ಯುವಕನೋರ್ವ ಹಸಿರು ಧ್ವಜ ಹಿಡಿದುಕೊಂಡು ಮೆರವಣಿಗೆಯಲ್ಲಿ ಕುಣಿಯಲು ಬಂದಿದ್ದಾನೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡಿಜೆಗೆ ಪಿಎಸ್​ಐ ಸಖತ್ ಡ್ಯಾನ್ಸ್, ವಿಡಿಯೋ ವೈರಲ್

ಈ ವೇಳೆ ಹಿಂದೂ ಯುವಕರು ಹಸಿರು ಧ್ವಜ ಹಾರಿಸಬೇಡ ಎಂದು ಆಸಿಪ್ ತಿಳಿಸಿ ಹೇಳಿದ್ದಾರೆ. ಆದರೂ ಆಸಿಫ್ ಯಾರ ಮಾತ ಸಹ ಕೇಳಿಲ್ಲ. ಕೊನೆಗೆ ಈ ಸಂಬಂಧ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಆಸಿಪ್, ನವೀನ್ ಬೆನ್ನಿಗೆ ಹಾಗೂ ಕೈಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಗಾಯಗೊಂಡ ನವೀನ್​​ ಸದ್ಯ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಲಾದಗಿ ಠಾಣಾ ಪ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸತು ಪರಿಶೀಲನೆ ನಡೆಸಿದ್ದಾರೆ.

ಆಸಿಪ್ ಬೇಕಂತಲೇ ಗಲಾಟೆ ಸೃಷ್ಟಿಸಲೆಂದೇ ಹಸಿರು ಧ್ವಜದ ಜೊತೆ ಚಾಕು ತೆಗೆದುಕೊಂಡು ಬಂದಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಯಾಕಂದ್ರೆ, ಗಣಪತಿ ಮೆರವಣಿಗೆ ವೇಳೆ ಹಸಿರು ಧ್ವಜ ತರುವ ಅವಶ್ಯಕತೆ ಏನು ಇತ್ತು? ಹಾಗೇ ಮೆರವಣಿಗೆಗೆ ಆಸಿಪ್ ಚಾಕು ಇಟ್ಟುಕೊಂಡು ಬಂದಿದ್ಯಾಕೆ ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸಿವೆ. ಈ ಬಗ್ಗೆ ಪೊಲೀಸರು ಕೂಲಂಕುಷ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:15 pm, Sun, 7 September 25