ಬಾಗಲಕೋಟೆ, ಜನವರಿ 5: ಬಾಗಲಕೋಟೆ (Bagalkot) ಜಿಲ್ಲೆ ಇಳಕಲ್ ನಗರದ ಬಳಿ ಆಕ್ರಮವಾಗಿ ಸ್ಪೋಟಕ ವಸ್ತು ಸಾಗಿಸುತ್ತಿದ್ದ ಬೊಲೆರೊ ಪಿಕ್ಅಪ್ ವಾಹನವನ್ನು ಇಳಕಲ್ ಪೊಲೀಸರು (Ilkal Police) ಜಪ್ತಿ ಮಾಡಿದ್ದಾರೆ. ಸದರಿ ವಾಹನವು ವಿಜಯಪುರ ಜಿಲ್ಲೆ ಸಿಂದಗಿಯಿಂದ ಬರುತ್ತಿತ್ತು. ಇಳಕಲ್ ಗೆ ಬರುತ್ತಿದ್ದಂತೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ವಾಹನವನ್ನು ಹಿಡಿದಿದ್ದಾರೆ. ಆ ವೇಳೆ ಬೊಲೇರೊ ಪಿಕಪ್ ವಾಹನಲ್ಲಿ ಸ್ಪೋಟಕ ವಸ್ತುಗಳು (Explosives) ಸಾಗಿಸುತ್ತಿರುವುದು ಪತ್ತೆಯಾಗಿದೆ.
ಒಂದೇ ವಾಹನದಲ್ಲಿ ಜಲೆಟಿನ್, ಡೆಟೋನೆಟರ್ಸ್, ಡಿಕಾರ್ಡ್ ವೈರ್ ಸ್ಪೋಟಕಗಳು ಪತ್ತೆಯಾಗಿವೆ. ಸುಮಾರು ೫ ಲಕ್ಷ ರೂ ಮೌಲ್ಯದ ಸ್ಪೋಟಕಗಳು ಇವಾಗಿದ್ದು, ೨,೮೦೦ ಜಿಲೆಟಿನ್ ಕಡ್ಡಿ, ೧,೩೦೦ ಡೆಟೋನೇಟರ್ಸ್ ವಶಪಡಿಸಿಕೊಳ್ಳಲಾಗಿದೆ. ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read: ಶಕ್ತಿ ಯೋಜನೆ ಎಫೆಕ್ಟ್ – ಹಳೆಯ ಬಸ್ಸುಗಳ ಸರ್ವಿಸ್- ರಿಪೇರಿ ಮಾಡಿಸುತ್ತಿಲ್ಲ, ನಿತ್ಯ ಹೆಚ್ಚುತ್ತಿವೆ ಅಪಘಾತಗಳು
ವಾಹನ ಚಾಲಕ ಸಚಿನಕುಮಾರ ಸೇರಿದಂತೆ ಬಸನಗೌಡ ಬಿರಾದಾರ, ರವಿ ಬಿರಾದಾರ, ಮಂಜು ಎಂಬುವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ಸಚಿನಕುಮಾರ, ಬಸನಗೌಡ ಅವರನ್ನು ಬಂಧಿಸಲಾಗಿದೆ. ಗ್ರಾನೈಟ್ ಕಲ್ಲು ಸ್ಪೋಟಕ್ಕೆ ಈ ಸ್ಪೋಟಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ