ಶಕ್ತಿ ಯೋಜನೆ ಎಫೆಕ್ಟ್: ಹಳೆಯ ಬಸ್ಸುಗಳ ಸರ್ವಿಸ್- ರಿಪೇರಿ ಮಾಡಿಸುತ್ತಿಲ್ಲ, ನಿತ್ಯ ಹೆಚ್ಚುತ್ತಿವೆ ಅಪಘಾತಗಳು
ಶಕ್ತಿ ಯೋಜನೆ ಆರಂಭ ಆದಾಗಿನಿಂದ ಪ್ರವಾಸಿ ತಾಣ ಹಾಗೂ ದೇವಸ್ಥಾನಗಳಿಗೆ ಭೇಟಿ ಕೊಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧ ಆಗಿರುವ ಉತ್ತರ ಕನ್ನಡ ಜಿಲ್ಲೆಗಂತೂ ನಿತ್ಯ ಸಾವಿರಾರು ಜನ ಭೇಟಿ ಕೋಡುತ್ತಿದ್ದಾರೆ. ಜನರ ಅವಶ್ಯಕತೆಗೆ ಅನುಗುಣವಾಗಿ ಅನಿವಾರ್ಯವಾಗಿ ಹಳೆಯ ಬಸ್ ಓಡಿಸಲಾಗುತ್ತಿದ್ದೂ, ಚಾಲಕರು ಹಾಗೂ ಪ್ರಯಾಣಿಕರು ಭಯದಿಂದ ಪ್ರಯಾಣಿಸುವಂತಾಗಿದೆ
ಉಚಿತ ಬಸ್ ಒದಗಿಸುವ ಶಕ್ತಿ ಯೋಜನೆ (Shakti scheme) ಆರಂಭದ ಬಳಿಕ ರಾಜ್ಯದ ಪ್ರವಾಸಿ ತಾಣ ಹಾಗೂ ದೇವಸ್ಥಾನಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಗಂತೂ (Uttara Kannada) ನಿತ್ಯ ಸಾವಿರಾರೂ ಮಹಿಳೆಯರು ಉಚಿತವಾಗಿ ಬರುತ್ತಿದ್ದಾರೆ. ಹಾಗಾಗಿ ಎಲ್ಲ ಬಸ್ ಗಳು ಆಲ್ಮೋಸ್ಟ್ ರಶ್ ಆಗಿ ಓಡುತ್ತಿವೆ. ಆದ್ರೆ ಬಸ್ ಗಳನ್ನ ಸರ್ವಿಸ್ ಮಾಡದೆ ಹಾಗೂ ಹಳೆಯ ಬಸ್ (Bus) ಗಳನ್ನು ರಿನೊವೆಷನ್ ಮಾಡದೆ ಇರುವುದರಿಂದ ಇಂತಹ ಅವಘಡಗಳು (Bus Accidents) ನಿತ್ಯ ಆಗುತ್ತಿವೆ.
ಶಕ್ತಿ ಯೋಜನೆ ಆರಂಭ ಆದಾಗಿನಿಂದ ಪ್ರವಾಸಿ ತಾಣ ಹಾಗೂ ದೇವಸ್ಥಾನಗಳಿಗೆ ಭೇಟಿ ಕೊಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧ ಆಗಿರುವ ಉತ್ತರ ಕನ್ನಡ ಜಿಲ್ಲೆಗಂತೂ ನಿತ್ಯ ಸಾವಿರಾರು ಜನ ಭೇಟಿ ಕೋಡುತ್ತಿದ್ದಾರೆ. ಜನರ ಅವಶ್ಯಕತೆಗೆ ಅನುಗುಣವಾಗಿ ಅನಿವಾರ್ಯವಾಗಿ ಹಳೆಯ ಬಸ್ ಓಡಿಸಲಾಗುತ್ತಿದ್ದೂ, ಚಾಲಕರು ಹಾಗೂ ಪ್ರಯಾಣಿಕರು ಭಯದಿಂದ ಪ್ರಯಾಣಿಸುವಂತಾಗಿದೆ ಈ ಕುರಿತ ವರದಿ ಇಲ್ಲಿದೆ ನೋಡಿ. ನಡು ರಸ್ತೆಯಲ್ಲೆ ಚಾಸೀಸ್ ಕಟ್ ಆಗಿ ನಿಂತಿರುವ ಬಸ್.. ಆತಂಕದಿಂದ ಬಸ್ ದಿಂದ ಇಳಿಯುತ್ತಿರುವ ಪ್ರಯಾಣಿಕರು.. ರಸ್ತೆ ಬಿಟ್ಟು ಕಾಲುವೆಗೆ ಇಳಿದಿರುವ ಬಸ್.. ಈ ದೃಶ್ಯಗಳನ್ನ ನೋಡಿದ್ರೆ ಎಂತಹವರಿಗಾದ್ರೂ ಆಶ್ಚರ್ಯ ಆಗುತ್ತೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಕ್ಕೊಂದು ಇಂತಹ ಪ್ರಕರಣಗಳು ನಡೆಯುತ್ತಲೆ ಇವೆ.
ಹೌದು ನಿನ್ನೆ ಗುರುವಾರ ಬೆಳಿಗ್ಗೆ ಕಾರವಾರದಿಂದ ನೌಕಾ ನೆಲೆಗೆ ಗುತ್ತಿಗೆ ನೌಕರರನ್ನು ಕರೆದೊಯ್ಯುತ್ತಿದ್ದ ಕೆ.ಎಸ್.ಆರ್.ಟಿ. ಸಿ ಬಸ್ ಒಮ್ಮಿಂದ ಒಮ್ಮೆಲೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆ ಇಳಿದಿದ್ದು, ಚಾಲಕನಿಗೆ ಮುಖ ಹಾಗೂ ಕೈ ಕಾಲಿಗೆ ಪೆಟ್ಟಾಗಿದೆ, ಜೊತೆಗೆ ಪ್ರಯಾಣಿಕರಿಗೆ ಕೂಡ ಚಿಕ್ಕ ಪುಟ್ಟ ಗಾಯ ಆಗಿದೆ.
ಇನ್ನು 2 ದಿನದ ಹಿಂದೆ ಕಾರಾವಾರದಿಂದ ಕೈಗಾ ಕಡೆಗೆ ಹೊರಟಿದ್ದ ಬಸ್, ಮಾರ್ಗ್ ಮಧ್ಯೆ ಹಿಂದಿನ ಚಕ್ರದ ಚಾಸಿಸ್ ಕಟ್ ಆಗಿ ನಡು ರಸ್ತೆಯಲ್ಲೆ ಪಲ್ಟಿ ಆಗುತಿತ್ತು. ಅಷ್ಟೊತ್ತಿಗಾಗಲೆ ಎಚ್ಚೆತ್ತ ಚಾಲಕ ನಿಧಾನವಾಗಿ ಪ್ರಯಾಣಿಕರನ್ನ ಕೆಳಗಿಳಿಸಿ. ಬಸ್ಸಲ್ಲಿದ್ದ ಪ್ರಯಾಣಿಕರೇ ಉರುಳಿತಿದ್ದ ಬಸ್ ನ್ನು ಹಿಡಿದು ನಿಲ್ಲಿಸುವಂತೆ ಸೂಚಿಸಿದಾಗ ದೊಡ್ಡ ಅನಾಹುತ ತಪ್ಪಿದೆ. ಆದ್ರೆ ಇಂತಹ ಪ್ರಕರಣಗಳು ನಿತ್ಯ ನಡೆಯುತ್ತಿರುವುದರಿಂದ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸುವಂತಾಗಿದೆ.
Also Read: ಕಾರವಾರ -ಚಾರ್ಸಿ ತುಂಡಾಗಿ ರಸ್ತೆಯಲ್ಲೇ ಪಲ್ಟಿಯಾದ ಬಸ್, ಹಲವರಿಗೆ ಗಾಯ
ಇನ್ನು ಶಕ್ತಿ ಯೋಜನೆ ಆರಂಭದ ಬಳಿಕ ರಾಜ್ಯದ ಪ್ರವಾಸಿ ತಾಣ ಹಾಗೂ ದೇವಸ್ಥಾನಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಗಂತೂ ನಿತ್ಯ ಸಾವಿರಾರೂ ಜನ ಬರುತ್ತಿದ್ದಾರೆ. ಹಾಗಾಗಿ ಎಲ್ಲ ಬಸ್ ಗಳು ಆಲ್ಮೋಸ್ಟ್ ರಶ್ ಆಗಿ ಓಡುತ್ತಿವೆ. ಆದ್ರೆ ಬಸ್ ಗಳನ್ನ ಸರ್ವಿಸ್ ಮಾಡದೆ ಹಾಗೂ ಹಳೆಯ ಬಸ್ ಗಳನ್ನು ರಿನೊವೆಷನ್ ಮಾಡದೆ ಇರುವುದರಿಂದ ಇಂತಹ ಅವಘಡಗಳು ನಿತ್ಯ ಆಗುತ್ತಿವೆ. ಉತ್ತರ ಕನ್ನಡ ಜಿಲ್ಲೆ ಮೊದಲೇ ಕಾಡು, ಘಟ್ಟ ಪ್ರದೇಶಗಳನ್ನ ಹೊಂದಿರುವ ಜಿಲ್ಲೆ ಆಗಿರುವುದರಿಂದ ಉತ್ತಮ ಕಂಡಿಶನ್ ಬಸ್ ಬೇಕಾಗಿರುವುದು ಅವಶ್ಯಕವಾಗಿದೆ. ಇಲ್ವಾದ್ರೆ ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ.
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಗೆ ಆದಷ್ಟು ಬೇಗ ಉತ್ತಮ ಗುಣಮಟ್ಟದ ಬಸ್ ಪೂರೈಸುವ ಕೆಲಸವನ್ನು ಸಾರಿಗೆ ಇಲಾಖೆ ಮಾಡಬೇಕಿದೆ. ಯಾವಾಗಲೂ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಂದ ರಶ್ ಆಗಿ ಓಡಾಡುವ ಬಸ್ ಏನಾದ್ರೂ ಸ್ವಲ್ಪ ಎಡವಟ್ಟಾದ್ರೂ ದೊಡ್ಡಮಟ್ಟದ ಪ್ರಾಣ ಹಾನಿ ಆಗುವ ಸಾಧ್ಯತೆ ಇದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ