ಬಾಗಲಕೋಟೆ: ಸೀತೆಯ ಹೆರಿಗೆ ಕೊಠಡಿ, ಪಕ್ಕದಲ್ಲಿದೆ ಲವ ಕುಶ ಹೊಂಡಗಳು – ಇಲ್ಲಿದೆ ರಾಮಾಯಣ ದರ್ಶನ

ಒಂದು ಕಡೆ ಸೀತಾಮಂದಿರ, ಮುಂದೆ ಸೀತೆಯ ಹೆರಿಗೆ ಕೊಠಡಿ, ಪಕ್ಕದಲ್ಲಿ ಲವ ಕುಶ ಹೊಂಡಗಳು. ಇದರಿಂದ ಸ್ವಲ್ಪ ದೂರದಲ್ಲಿ ಕಣ್ಮನ ಸೆಳೆಯುತ್ತಿರುವ ಲವ ಕುಶ ಉದ್ಯಾನವನ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತಾಲ್ಲೂಕಿನ ಸೀತೆಮನೆ ಗ್ರಾಮದಲ್ಲಿ.

ಬಾಗಲಕೋಟೆ: ಸೀತೆಯ ಹೆರಿಗೆ ಕೊಠಡಿ, ಪಕ್ಕದಲ್ಲಿದೆ ಲವ ಕುಶ ಹೊಂಡಗಳು - ಇಲ್ಲಿದೆ ರಾಮಾಯಣ ದರ್ಶನ
ಬಾಗಲಕೋಟೆ: ಸೀತೆಯ ಹೆರಿಗೆ ಕೊಠಡಿ, ಪಕ್ಕದಲ್ಲಿವೆ ಲವ ಕುಶ ಹೊಂಡಗಳು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on: Jan 04, 2024 | 6:09 PM

ಬಹುಕೋಟಿ ಜನರ ರಾಮ ಮಂದಿರ ನಿರ್ಮಾಣದ ಕನಸು (Ram Mandir Inauguration) ನನಾಗುತ್ತಿದೆ. ಕೋಟಿ ಕೋಟಿ ರಾಮಭಕ್ತರಲ್ಲಿ ಸಂಭ್ರಮ ‌ಮನೆ ಮಾಡಿದೆ. ಈ‌ ಹೊತ್ತಲ್ಲಿ ರಾಮನ ಅನೇಕ ಕುರುಹುಗಳು ಸದ್ದು ಮಾಡುತ್ತಿವೆ. ಈ‌ ಮಧ್ಯೆ, ಅದೊಂದು ಗ್ರಾಮದಲ್ಲಿ ರಾಮಾಯಣ ದರ್ಶನವನ್ನೇ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಷ್ಟಕ್ಕೂ ಆ ಗ್ರಾಮ ಯಾವುದು? ಇಲ್ಲಿ ತೋರಿಸ್ತೀವಿ ನೋಡಿ. ಒಂದು ಕಡೆ ಸೀತಾಮಂದಿರ, ಮುಂದೆ ಸೀತೆಯ ಹೆರಿಗೆ ಕೊಠಡಿ, ಪಕ್ಕದಲ್ಲಿ ಲವ ಕುಶ ಹೊಂಡಗಳು. ಇದರಿಂದ ಸ್ವಲ್ಪ ದೂರದಲ್ಲಿ ಕಣ್ಮನ ಸೆಳೆಯುತ್ತಿರುವ ಲವ ಕುಶ ಉದ್ಯಾನವನ. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತಾಲ್ಲೂಕಿನ ಸೀತೆಮನೆ ಗ್ರಾಮದಲ್ಲಿ.

ಈಗ ಇಡೀ ದೇಶದ ರಾಮ ಭಕ್ತರು ರಾಮ ಮಂದಿರ ಉದ್ಘಾಟನೆ ‌ಸಂಭ್ರಮದಲ್ಲಿದ್ದಾರೆ. ರಾಮಭಕ್ತರ ಸಂಭ್ರಮದ ಈ ಘಳಿಗೆಯಲ್ಲಿ ರಾಮ ಚರಿತೆಯ ಕುರುಹುಗಳು ಎಲ್ಲರ ಆಸಕ್ತಿ ಕೆರಳಿಸುತ್ತಿವೆ. ಇದರಲ್ಲಿ ಸೀತೆಮನೆ ಗ್ರಾಮ ಕೂಡ ಒಂದು. ಇಲ್ಲಿ ಸೀತೆ ವನವಾಸದ ವೇಳೆ ವಾಲ್ಮೀಕಿ‌ ಆಶ್ರಯದಲ್ಲಿ ಕೆಲ ವರ್ಷವಿದ್ದಳು. ಲವ ಕುಶನಿಗೆ ಇಲ್ಲೇ ಜನ್ಮ ನೀಡಿದಳು ಎಂಬ ಪ್ರತೀತಿ ಇದೆ.

ಸೀತೆ ದೇವಸ್ಥಾನ, ಲವ ಕುಶ ಹೊಂಡ, ಸೀತಾ ಹೊಂಡ, ಪ್ರಸೂತಿ ಗೃಹ, ವಾಲ್ಮೀಕಿ‌ ಕುಟೀರ ಇಲ್ಲಿದೆ. ಇನ್ನು ಇದರ ಪ್ರಯುಕ್ತ ಇದೇ ಸ್ಥಳದಲ್ಲೇ ಲವ ಕುಶ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಲವ ಕುಶ ಉದ್ಯಾನವನದಲ್ಲಿ ಇಡೀ ರಾಮಾಯಣದ ಸನ್ನಿವೇಶವನ್ನೇ ಕಟ್ಟಿಕೊಡಲಾಗುತ್ತಿದೆ. ರಾಮ ಲಕ್ಷ್ಮಣ, ಹನುಮಂತ, ಸೀತಾಮಾತೆ, ವಾಲ್ಮೀಕಿ ಮಹರ್ಷಿ ಕುಟೀರ, ಲವಕುಶ, ಧನುರ್ಧಾರಿರಾಮ, ವಾನರ ಸೇನೆ ಹೀಗೆ ರಾಮಾಯಣದ ಸನ್ನಿವೇಶದ ಮೂರ್ತಿ ರಚನೆ ಮಾಡಲಾಗಿದೆ. ಸೀತಾ ಮಂದಿರ, ಲವಕುಶ ಹೊಂಡ ಎಲ್ಲ ದರ್ಶನ ಮಾಡಿದ ಪ್ರವಾಸಿಗರಿಗೆ ಲವ ಕುಶ ಉದ್ಯಾನವನ ರಾಮಯಣದರ್ಶನ ಮಾಡಿಸಲಿದೆ. ಪ್ರವಾಸಿಗರು ಇದನ್ನೆಲ್ಲ ನೋಡಿ ಸಂಭ್ರಮಿಸುತ್ತಿದ್ದಾರೆ.

Also Read: ಅಯೋಧ್ಯೆಯ ರಾಮನಿಗೆ ಧಾರವಾಡದ ಕುರುಬರಿಂದ ಜೋಡಿ ಕಂಬಳಿಗಳ ಕೊಡುಗೆ! ಏನದರ ವಿಶೇಷ?

ಬಾಗಲಕೋಟೆ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಯ ಗಡಿಭಾಗದಲ್ಲಿ ಸೀತೆಮನೆ ಇದೆ. ಕೃಷ್ಣಾ ನದಿಯ ಆಲಮಟ್ಟಿ ಜಲಾಶಯ ಕೂಡ ಇದೆ ಸ್ಥಳದಲ್ಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂಲಕ ಲವಕುಶ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಇಂದಿಗೂ ಅಭಿವೃದ್ಧಿ ಕಾಮಗಾರಿ ಮುಂದುವರೆಯಲಿದೆ. ಒಂದು ಕಡೆ ಅಲಮಟ್ಟಿ ಜಲಾಶಯ, ಪಕ್ಕದಲ್ಲೇ ಸೀತೆಮನೆ. ಅದೇ ಜಾಗದಲ್ಲಿ ಈ ಸುಂದರ ರಾಮಾಯಾಣ ಸನ್ನಿವೇಶದ ಉದ್ಯಾನವನ ಇದೆ.

ಒಂದು ಕ್ಷಣ ಲವಕುಶ ಉದ್ಯಾನವನಕ್ಕೆ ಬಂದರೇ ರಾಮಾಯಣ ಕಾಲಕ್ಕೆ ಹೋದ ಅನುಭವ ಆಗುತ್ತದೆ. ಸ್ನೇಹಿತರು ಕುಟುಂಬಸ್ಥರು ಒಂದಿಡೀ‌ದಿನ ಇಲ್ಲಿ ಕಾಲ‌ ಕಳೆಯಬಹುದು. ಆಲಮಟ್ಟಿ ಜಲಾಶಯ ಆಲಮಟ್ಟಿ ಉದ್ಯಾನವನ ಜೊತೆಗೆ ಸೀತೆಮನೆ ಲವಕುಶ ಉದ್ಯಾನವನ ಎಲ್ಲವನ್ನು ಕಣ್ತುಂಬಿಕೊಳ್ಳಬಹುದು.ಆದರೆ‌ ಒಂದು ಕಡೆ ರಾಮಮಂದಿರ‌ ಉದ್ಘಾಟನೆ ಅದ್ದೂರಿಯಾಗಿ ನಡೆಯುತ್ತಿದ್ದರೆ, ರಾಮಸತಿ ಸೀತಾದೇವಿ ನೆಲೆಸಿದ್ದ ಸ್ಥಳದಲ್ಲಿ ಅಭಿವೃದ್ಧಿ ಅದೆಷ್ಟೋ ದೂರದಲ್ಲಿದೆ. ಸ್ಥಳದಲ್ಲಿ ನೀರಿನ ವ್ಯವಸ್ಥೆಯಿಲ್ಲ. ವಸತಿ ಸೌಲಭ್ಯವಿಲ್ಲ. ಮೂಲಭೂತ ಸೌಲಭ್ಯವಿಲ್ಲ. ಇದರಿಂದ ಬರುವ ಭಕ್ತರಿಗೆ ಸ್ವಲ್ಪಮಟ್ಟಿಗೆ ನಿರಾಸೆಯಾಗುತ್ತದೆ. ಆದ ಕಾರಣ ಈ ಸ್ಥಳದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ‌ಮಾಡಬೇಕಂದು ಸ್ಥಳಿಯರು ಮನವಿ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ರಾಮ ಮಂದಿರ ಉದ್ಘಾಟನೆ ಹೊತ್ತಲ್ಲಿ ರಾಮನ ಕುರುಹುಗಳು ಎಲ್ಲರ ಗಮನ ಸೆಳೆಯುತ್ತಿವೆ. ಅದರಲ್ಲಿ ಸೀತೆಮನೆಯ ಲವಕುಶ ಉದ್ಯಾನವನ ಕೂಡ ಒಂದಾಗಿದ್ದು, ಸರಕಾರ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಹೆಚ್ಚು ಪ್ರವಾಸಿಗರನ್ನು ಹಾಗೂ ಭಕ್ತರನ್ನು ಸೆಳೆಯುವ ಕಾರ್ಯ ಮಾಡಬೇಕಾಗಿದೆ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ