ಜತ್ ಬಳಿಕ ಕರ್ನಾಟಕಕ್ಕೆ ಸೇರಲು ಇಚ್ಛೆ ವ್ಯಕ್ತಪಡಿಸಿದ ಅಕ್ಕಲಕೋಟದ 40 ಗ್ರಾಮದ ಜನ, ಭುವನೇಶ್ವರಿ ಫೋಟೋ ನೀಡಿ ಕರವೇ ಸಾಥ್

| Updated By: ಆಯೇಷಾ ಬಾನು

Updated on: Nov 28, 2022 | 1:50 PM

ಅಕ್ಕಲಕೋಟ ತಾಲೂಕಿನ 40 ಗ್ರಾಮಗಳ ಜನರು ಕರ್ನಾಟಕ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಹಾಜನ್ ಆಯೋಗದ ವರದಿಯಂತೆ ನಾವೂ ಕರ್ನಾಟಕಕ್ಕೆ ಸೇರ್ತೀವಿ ಎಂದು ಸ್ವಇಚ್ಛೆ ತಿಳಿಸಿದ್ದಾರೆ.

ಜತ್ ಬಳಿಕ ಕರ್ನಾಟಕಕ್ಕೆ ಸೇರಲು ಇಚ್ಛೆ ವ್ಯಕ್ತಪಡಿಸಿದ ಅಕ್ಕಲಕೋಟದ 40 ಗ್ರಾಮದ ಜನ, ಭುವನೇಶ್ವರಿ ಫೋಟೋ ನೀಡಿ ಕರವೇ ಸಾಥ್
ಭುವನೇಶ್ವರಿ ಫೋಟೋ ನೀಡಿ ಮಹಾರಾಷ್ಟ್ರ ಕನ್ನಡಿಗರಿಗೆ ಕರವೇ ಸಾಥ್
Follow us on

ಬಾಗಲಕೋಟೆ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಜನ ಕರ್ನಾಟಕಕ್ಕೆ ಸೇರುವ ಆಸೆಯನ್ನು ಹೊರ ಹಾಕಿದ್ದರು. ಈಗ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ 40 ಗ್ರಾಮಗಳ ಜನರು ಕರ್ನಾಟಕ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಹಾಜನ್ ಆಯೋಗದ ವರದಿಯಂತೆ ನಾವೂ ಕರ್ನಾಟಕಕ್ಕೆ ಸೇರ್ತೀವಿ ಎಂದು ಸ್ವಇಚ್ಛೆ ತಿಳಿಸಿದ್ದಾರೆ. ಇದರಿಂದ ತಮ್ಮ ನೆಲದಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.

5 ದಶಕದಿಂದ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಕುಡಿಯುವ ನೀರು, ಸುಸಜ್ಜಿತ ರಸ್ತೆ, ಕನ್ನಡ ಶಾಲೆಗಳಿಗೆ ಸೌಲಭ್ಯ ಸಿಕ್ಕಿಲ್ಲ. ಕನ್ನಡ ಮಾಧ್ಯಮದ ಮಕ್ಕಳಿಗೆ ಕನ್ನಡದ ಪಠ್ಯ ದೊರಕುತ್ತಿಲ್ಲ. ಮೂಲ ಸೌಕರ್ಯಕ್ಕೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ರೂ ಸ್ಪಂದಿಸಿಲ್ಲ. ಮಹಾರಾಷ್ಟ್ರ ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು, ಕೂಡಲೇ ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಮಹಾಜನ್ ವರದಿಯಂತೆ ನಾವು ಕರ್ನಾಟಕಕ್ಕೆ ಹೋಗುತ್ತೇವೆ. ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡ್ತೇವೆ. ನಾವು ಕರ್ನಾಟಕಕ್ಕೆ ಸೇರಲು ತುಂಬಾ ಉತ್ಸುಕರಾಗಿದ್ದೇವೆ ಎಂದು ಅಕ್ಕಲಕೋಟ ತಾಲೂಕಿನ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಸೇರಲು ಮಹಾರಾಷ್ಟ್ರದಲ್ಲಿ ಹೆಚ್ಚಾದ ಹೋರಾಟ; ರಾಜ್ಯದ ಹೊಸ ನಕ್ಷೆ ಎಲ್ಲೆಡೆ ವೈರಲ್

ಮಹಾರಾಷ್ಟ್ರ ಕನ್ನಡಿಗರ ಬೆಂಬಲಕ್ಕೆ ನಿಂತ ಕರ್ನಾಟಕ ರಕ್ಷಣಾ ವೇದಿಕೆ

ಇನ್ನು ಮತ್ತೊಂದೆಡೆ ​​ಮಹಾರಾಷ್ಟ್ರ ಕನ್ನಡಿಗರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಿಂತಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್​ ತಾಲೂಕಿನ ಬಾಲಗಾಂವ್​ ಗ್ರಾಮಕ್ಕೆ ತೆರಳಿ ಅಲ್ಲಿನ ಕನ್ನಡಿಗರನ್ನು ಕರ್ನಾಟಕ ಸೇರುವಂತೆ ಆಹ್ವಾನಿಸಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡದಿಂದ ಕರವೇ ಕಾರ್ಯಕರ್ತರು ತೆರಳಿದ್ದು ಕಾಗವಾಡ ತಾಲೂಕು ಅಧ್ಯಕ್ಷ ಸಿದ್ದು ಒಡೆಯರ್​ ನೇತೃತ್ವದಲ್ಲಿ ಅಲ್ಲಿಯ ಜನರನ್ನು ಭೇಟಿ ಮಾಡಿ ಭುವನೇಶ್ವರಿ ದೇವಿಯ ಫೋಟೋ ನೀಡಿ ಆಹ್ವಾನಿಸಿದ್ದಾರೆ.

ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ

ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳ ಮೇಲೆ ಗೂಂಡಾವರ್ತನೆ ತೋರುತ್ತಿರುವ ಪುಂಡರ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಎಮ್ಇಎಸ್ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಜತ್ತ-ಜಾಂಬೋಟಿ ರಸ್ತೆ ಬಂದ್ ಮಾಡಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:33 pm, Mon, 28 November 22