ಬಾಗಲಕೋಟೆ: ನೇಪಾಳದಲ್ಲಿ ನಡೆದ 7ನೇ ಇಂಡೊ-ನೇಪಾಳ ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಬಾಗಲಕೋಟೆ ಸಹೋದರರು ಚಿನ್ನದ ಬೇಟೆಯಾಡಿದ್ದಾರೆ. 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಸಹೋದರರು ಚಿನ್ನದಂತಹ ಸಾಧನೆ ಮಾಡಿದ್ದಾರೆ. ಚಿನ್ನ ಗೆದ್ದು ಭಾರತದ ಬಾವುಟ ಹಾರಿಸಿದವರು ನಾಗರಾಜ್ ಗಾಣೀಗೇರ್ ಮತ್ತು ಯುವರಾಜ್ ಗಾಣೀಗೇರ್. ಇವರು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ತೋಗುಣಿಸಿ ಗ್ರಾಮದವರು.
ನೇಪಾಳದ ಪೊಖ್ರಾ ನಗರದ ರಂಗಶಾಲಾ ಕ್ರೀಡಾಂಗಣದಲ್ಲಿ ನಡೆದ ಇಂಡೊ-ನೇಪಾಳ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ನಾಗರಾಜ ಗಾಣಿಗೇರ 4 ನಿಮಿಷ 34 ಸೆಕೆಂಡ್ ನಲ್ಲಿ ಓಡಿದರೆ.. ಯುವರಾಜ ಗಾಣಿಗೇರ 4 ನಿಮಿಷ 32 ಸೆಕೆಂಡ್ ನಲ್ಲಿ ಗುರಿ ತಲುಪಿದ್ದಾರೆ.
ನಾಗರಾಜ ಪಿಯುಸಿ ಮುಗಿಸಿದ್ದು, 23 ವರ್ಷದೊಳಗಿನ ವಿಭಾಗದಲ್ಲಿ ಚಿನ್ನ.. ಯುವರಾಜ 17 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ್ದಾರೆ. ಇಬ್ಬರೂ ಸಹೋದರರ ಸಾಧನೆಗೆ ಬಾದಾಮಿ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಫೇಸ್ ಬುಕ್‌ನಲ್ಲಿ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.
ನೇಪಾಳದಲ್ಲಿ ನಡೆದ ಇಂಡೊ-ನೇಪಾಳ ಇಂಟರ್ ನ್ಯಾಷನಲ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಬಾದಾಮಿ ತಾಲ್ಲೂಕಿನ ತೋಗುಣಸಿ ಗ್ರಾಮದ ಯುವರಾಜ ಗಾಣಿಗೇರ ಹಾಗೂ ನಾಗರಾಜ ಗಾಣಿಗೇರ ಅವರಿಗೆ ಅಭಿನಂದನೆಗಳು.
ಕ್ರೀಡಾ ಬದುಕಿನಲ್ಲಿ ಇನ್ನಷ್ಟು ದೊಡ್ಡ ಸಾಧನೆಗಳು ನಿಮ್ಮ ಕೈಗೂಡಲಿ. ನಿಮ್ಮ ಸಾಧನೆ ನಾಡಿನ ಗ್ರಾಮೀಣ ಪ್ರತಿಭೆಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಅಂತಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ, ಸಿದ್ದರಾಮಯ್ಯ ಶುಭ ಕೋರಿದ್ದಾರೆ.