NEET Exam Result: ನೀಟ್ ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ಬಾಗಲಕೋಟೆ ಜಿಲ್ಲೆಯ ವೈದ್ಯ ದೇಶಕ್ಕೆ ಪ್ರಥಮ

| Updated By: sandhya thejappa

Updated on: Feb 02, 2022 | 5:10 PM

ಸದ್ಯ ಈ ವಿಷಯ ತಿಳಿಯುತ್ತಿದ್ದಂತೆ ಮುಧೋಳ ಶಾಸಕ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಅವರು, ಡಾ.ಚಿದಾನಂದ ಕುಂಬಾರ ಬೆಳಗಲಿ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

NEET Exam Result: ನೀಟ್ ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ಬಾಗಲಕೋಟೆ ಜಿಲ್ಲೆಯ ವೈದ್ಯ ದೇಶಕ್ಕೆ ಪ್ರಥಮ
ಡಾ.ಚಿದಾನಂದ ಕುಂಬಾರ ಬೆಳಗಲಿ
Follow us on

ಬಾಗಲಕೋಟೆ: ನೀಟ್( NEET)ಪಿಜಿ ಪರೀಕ್ಷೆಯ ಎರಡು ವಿಷಯದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಡಾ.ಚಿದಾನಂದ ಕುಂಬಾರ ಬೆಳಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 2021-2022ನೇ ಸಾಲಿನ ನೀಟ್ ಪಿಜಿ ಪರೀಕ್ಷೆಯಲ್ಲಿ 759 ಅಂಕಗಳಿಸಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿ ಕಿಮ್ಸ್​ನಲ್ಲಿ(KIMS) ಎಮ್​ಬಿಬಿಎಸ್ ಮುಗಿಸಿದ್ದ ಡಾ.ಚಿದಾನಂದ ಕುಂಬಾರ ಬೆಳಗಲಿ, ಒಂದು ವರ್ಷದ ಹಿಂದೆ ಅಸ್ಸಾಂನ ಗೌಹಾಟಿ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಮ್ ಡಿ ಮುಗಿಸಿದ್ದಾರೆ. ಸದ್ಯ ಹೈದರಾಬಾದ್​ ಗ್ಲೋಬಲ್ ಆಸ್ಪತ್ರೆಯಲ್ಲಿ ವೈದ್ಯ(Doctor) ಸೇವೆಯಲ್ಲಿ ನಿರತರಾಗಿದ್ದಾರೆ.

ರನ್ನಬೆಳಗಲಿ ವೈದ್ಯ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎರಡು ವಿಷಯಗಳಲ್ಲಿ ಅಂದರೆ ಡೈಜೆಸ್ಟಿವ್ ಸಿಸ್ಟಮ್ ಸ್ಪೆಷಲಿಸ್ಟ್ ವಿಷಯದಲ್ಲಿ 400ಕ್ಕೆ 340 ಅಂಕ ಪಡೆದಿದ್ದು, ಡಿಎಮ್ ಹೆಪೊಟಾಲಜಿ(ಲಿವರ್ ಸ್ಪೆಷಲಿಸ್ಟ್) 400 ಕ್ಕೆ 330 ಅಂಕ ಪಡೆದಿದ್ದಾರೆ.

ಜನವರಿ 10, 2022ರಲ್ಲಿ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಫಲಿತಾಂಶ ಜನವರಿ 31 ರಂದು ರಾತ್ರಿ ಬಂದಿದೆ. ಸದ್ಯ ಫಲಿತಾಂಶದಿಂದ ಸಂತಸಗೊಂಡಿರುವ ಡಾ. ಚಿದಾನಂದ ಕುಂಬಾರ. ಮುಂದೆ ಡಿಎಮ್​ (Gastro enterology) ವೈದ್ಯರಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.

ಸದ್ಯ ಈ ವಿಷಯ ತಿಳಿಯುತ್ತಿದ್ದಂತೆ ಮುಧೋಳ ಶಾಸಕ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಅವರು, ಡಾ.ಚಿದಾನಂದ ಕುಂಬಾರ ಬೆಳಗಲಿ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ

ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದ ಮನೆಗೆ ಬಂದ ಗ್ರಾಮಸ್ಥರು ಡಾ. ಚಿದಾನಂದ ಕುಂಬಾರ ಅವರ ತಂದೆ ಕಲ್ಲಪ್ಪ ಅವರಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿರು. ಮಗನ ಸಾಧನೆ ನೆನೆದ ತಂದೆ ಕಲ್ಲಪ್ಪ, ನನ್ನ ಮಗ ಇಂತಹದ್ದೊಂದು ಸಾಧನೆ ಮಾಡಿದ್ದು ನನಗೆ ಖುಷಿ ತಂದಿದೆ. ನಾನು ಒಬ್ಬ ರೈ.ತ ರೈತನೆ ಆದರೂ ಆತನಿಗೆ ಯಾವುದೇ ಕೊರತೆಯಿಲ್ಲದಂತೆ ಓದಿಸಿದೆ. ಆತ ಕೂಡ ಅಷ್ಟೇ ಪ್ರತಿಭಾನ್ವಿತನಾಗಿದ್ದ. ಇಂದು ದೇಶಕ್ಕೆ ಪ್ರಥಮ ಸ್ಥಾನಗಳಿಸಿದ್ದು ಖುಷಿ ತಂದಿದೆ. ಇದು ನಮ್ಮ ಗ್ರಾಮದವರಿಗೆ ಹೆಚ್ಚು ಸಂಭ್ರಮ ತಂದಿದ್ದು ಇಡಿ ರಾಜ್ಯದ ಕೀರ್ತಿಯನ್ನು ಮಗ ಹಾರಿಸಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 ಡಾ. ಚಿದಾನಂದ ಓದಿದ್ದು ಕನ್ನಡ ಮಾದ್ಯಮದಲ್ಲಿ

ಕೃಷಿ ಕೂಲಿಕಾರ್ಮಿಕನ ಮಗನಾಗಿರುವ ಡಾ. ಚಿದಾನಂದ ಕುಂಬಾರ ತಾವು ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡರು. ನಂತರ ತಂದೆಯೇ ತಂದೆ- ತಾಯಿ ಎರಡೂ ಆಗಿ ಇವರ ಆರೈಕೆ ‌ಮಾಡಿ ಒಳ್ಳೆಯ ಶಿಕ್ಷಣ ನೀಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ರನ್ನ ಬೆಳಗಲಿ ಗ್ರಾಮದಲ್ಲಿ ಮುಗಿಸಿದ ಚಿದಾನಂದ ಕುಂಬಾರ,   ವಿಜಯಪುರ ಬಿಎಲ್​ಡಿಇ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಮಾಡಿದ್ದಾರೆ. ಕನ್ನಡ ಮಾದ್ಯಮದ ವಿದ್ಯಾರ್ಥಿಯಾಗಿ ಇಷ್ಟೊಂದು ಸಾಧನೆ ಮಾಡಿದ್ದಾರೆ.

ನಮ್ಮ ತಂದೆ ಒಬ್ಬ ರೈತ ನಾನೊಬ್ಬ ರೈತನ ಮಗ ಅಂತ ಹೇಳಿಕೊಳ್ಳಲು ಹೆಮ್ಮೆಯಿದೆ. ರೈತನಾದ ನನ್ನ ತಂದೆ ಸಹಕಾರ, ಕುಟುಂಬಸ್ಥರ ಪ್ರೋತ್ಸಾಹದಿಂದ ನಾನು ವೈದ್ಯಕೀಯ ಕ್ಷೇತ್ರಕ್ಕೆ ಬಂದು ಇಂತಹ ಸಾಧನೆ ಮಾಡೋಕೆ ಸಾಧ್ಯವಾಯಿತು. ಇನ್ನು ನಮ್ಮ ಕ್ಷೇತ್ರದ ಶಾಸಕರು, ಸದ್ಯ ಸಚಿವರು ಆದ ಗೋವಿಂದ ಕಾರಜೋಳ ಅವರು ಕೂಡ ಎಮ್​ಬಿಬಿಎಸ್​ ಓದುವಾಗ ಪ್ರೋತ್ಸಾಹ ನೀಡಿದ್ದು, ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಡಾ. ಚಿದಾನಂದ ಕುಂಬಾರ ಹೇಳಿದ್ದಾರೆ.

ಇದನ್ನೂ ಓದಿ:
NEET PG Counselling 2021: ನೀಟ್​ ಪಿಜಿ ಕೌನ್ಸಿಲಿಂಗ್ ರಿಜಿಸ್ಟ್ರೇಶನ್​ ಪ್ರಾರಂಭ​; ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ

NEET-PG Counselling: ಜನವರಿ 12ರಿಂದ ನೀಟ್​-ಪಿಜಿ ಕೌನ್ಸಿಲಿಂಗ್​ ಪ್ರಾರಂಭ; ಆರೋಗ್ಯ ಸಚಿವರಿಂದ ಘೋಷಣೆ

 

Published On - 11:43 am, Wed, 2 February 22