NEET PG Counselling 2021: ನೀಟ್​ ಪಿಜಿ ಕೌನ್ಸಿಲಿಂಗ್ ರಿಜಿಸ್ಟ್ರೇಶನ್​ ಪ್ರಾರಂಭ​; ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ

ನ್ಯಾಶನಲ್​ ಬೋರ್ಡ್ ಆಫ್ ಎಕ್ಸಾಮಿನೇಶನ್​ ನಡೆಸಿದ ನೀಟ್​ ಪಿಜಿಯಲ್ಲಿ, ಶ್ರೇಣಿಗಳ ಆಧಾರದ ಮೇಲೆ ಆಲ್​ ಇಂಡಿಯಾ ಕೋಟಾ ಸೀಟುಗಳಿಗೆ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳೂ ಕೂಡ ನೀಟ್​ ಪಿಜಿ ಕೌನ್ಸಿಲಿಂಗ್​​ಗೆ ಅರ್ಹರಾಗಿರುತ್ತಾರೆ.

NEET PG Counselling 2021: ನೀಟ್​ ಪಿಜಿ ಕೌನ್ಸಿಲಿಂಗ್ ರಿಜಿಸ್ಟ್ರೇಶನ್​ ಪ್ರಾರಂಭ​; ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ
ಸಾಂಕೇತಿಕ ಚಿತ್ರ (ಪಿಟಿಐ ಚಿತ್ರ)
Follow us
TV9 Web
| Updated By: Lakshmi Hegde

Updated on: Jan 12, 2022 | 4:03 PM

ಬಹುದಿನಗಳಿಂದಲೂ ವಿಳಂಬವಾಗಿದ್ದ ನೀಟ್ ಪಿಜಿ ಕೌನ್ಸಿಲಿಂಗ್ (NEET PG Counselling) ಇಂದಿನಿಂದ ಶುರುವಾಗಿದ್ದು, ವೈದ್ಯಕೀಯ ಕೌನ್ಸಿಲಿಂಗ್​ ಸಮಿತಿ (MCC-Medical Conselling Committee) ನೋಂದಣಿ ಪ್ರಕ್ರಿಯೆಯನ್ನು ಶುರು ಮಾಡಿದೆ. ಅರ್ಹ ಅಭ್ಯರ್ಥಿಗಳು ಈ ಎಂಸಿಸಿಯ ಅಧಿಕೃತ ವೆಬ್​ಸೈಟ್ mcc.nic.inಗೆ  ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಒಂದನೇ ಹಂತದ ಕೌನ್ಸಿಲಿಂಗ್​ಗೆ ಅರ್ಜಿ ಸಲ್ಲಿಸಲು (ನೋಂದಣಿ ಮಾಡಿಕೊಳ್ಳಲು) ಕೊನೇ ದಿನ ಜನವರಿ 17 ಎಂದು ತಿಳಿಸಲಾಗಿದೆ. ಆಲ್​ ಇಂಡಿಯಾ ಕೋಟಾದ ನೀಟ್​ ಪಿಜಿ ಕೌನ್ಸಿಲಿಂಗ್​​ ಈ ಬಾರಿ ಆನ್​ಲೈನ್​ನಲ್ಲಿ ನಡೆಯಲಿದ್ದು ಒಟ್ಟು ನಾಲ್ಕು ಸುತ್ತುಗಳಿರುತ್ತವೆ.( ರೌಂಡ್​-1, ರೌಂಡ್​-2, ಎಐಕ್ಯೂ ಮಾಪ್ ಅಪ್​ ರೌಂಡ್​ ಮತ್ತು ಎಐಕ್ಯೂ ಸ್ಟ್ರೇ ವೆಕೆನ್ಸಿ ರೌಂಡ್​). ನ್ಯಾಶನಲ್​ ಬೋರ್ಡ್ ಆಫ್ ಎಕ್ಸಾಮಿನೇಶನ್​ ನಡೆಸಿದ ನೀಟ್​ ಪಿಜಿಯಲ್ಲಿ, ಶ್ರೇಣಿಗಳ ಆಧಾರದ ಮೇಲೆ ಆಲ್​ ಇಂಡಿಯಾ ಕೋಟಾ ಸೀಟುಗಳಿಗೆ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳೂ ಕೂಡ ನೀಟ್​ ಪಿಜಿ ಕೌನ್ಸಿಲಿಂಗ್​​ಗೆ ಅರ್ಹರಾಗಿರುತ್ತಾರೆ. ಕೌನ್ಸಿಲಿಂಗ್​ಗೆ ಅಗತ್ಯವಿರುವ ಮಾಹಿತಿಗಳು ನಿಮಗೆ ಎಂಸಿಸಿ ವೆಬ್​ಸೈಟ್​ನಲ್ಲಿ ಸಿಗಲಿದೆ.

ನೋಂದಣಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ..

1.ವೈದ್ಯಕೀಯ ಕೌನ್ಸಿಲಿಂಗ್​ ಸಮಿತಿಯ ಅಧಿಕೃತ ವೆಬ್​ಸೈಟ್​ mcc.nic.in.ಗೆ ಭೇಟಿ ಕೊಡಿ 2. ಹೋಮ್​ ಪೇಜ್​​ನಲ್ಲಿ ಕಾಣಿಸುವ ‘Registration for NEET PG Counselling 2021’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. 3. ಆಗ ಹೊಸದೊಂದು ಸ್ಕ್ರೀನ್​ ತೆರೆದುಕೊಳ್ಳುತ್ತದೆ. 4. ಅಲ್ಲಿ ಕೇಳಲಾದ ಮಾಹಿತಿಗಳನ್ನು ತುಂಬಿ, ಸಬ್​ಮಿಟ್​ ಮಾಡಿ. 5. ಆಗ ಕಾಣಿಸಿಕೊಳ್ಳುವ ಅರ್ಜಿಯನ್ನು ಸರಿಯಾಗಿ ತುಂಬಿ Submit ಮಾಡಿ ಮತ್ತು ಶುಲ್ಕವನ್ನು ಪಾವತಿಸಿ.  ಹಾಗೇ, ತುಂಬಲಾದ ಅರ್ಜಿಯ ಒಂದು ಪ್ರಿಂಟ್​ ಕೂಡ ತೆಗೆದಿಟ್ಟುಕೊಳ್ಳಿ.

ಬೇಕಾಗುವ ದಾಖಲೆಗಳೇನು?: 1) 2021 ನೀಟ್​ ಪರೀಕ್ಷೆಯ ಪ್ರವೇಶ ಪತ್ರ 2)2021ನೇ ನೀಟ್ ಪರೀಕ್ಷೆಯ ಫಲಿತಾಂಶ ಪಟ್ಟಿ, ಯಾವುದೇ ರ್ಯಾಂಕ್​ ಬಂದಿದ್ದರೆ ಅದರ ಕಾರ್ಡ್​ 3)10ನೇ ತರಗತಿ ಪಾಸ್​ ಆಗಿರುವ ಪ್ರಮಾಣ ಪತ್ರ 4)12ನೇ ತರಗತಿ ಉತ್ತೀರ್ಣವಾಗಿರುವ ಸರ್ಟಿಫಿಕೇಟ್​ 5)ಸರ್ಕಾರ ಮಾನ್ಯ ಮಾಡಿರುವ ಐಡಿ ಕಾರ್ಡ್​ 6)ಪಾಸ್​ಪೋರ್ಟ್​ ಸೈಝ್​ ಫೋಟೋ 7)ಎಂಬಿಬಿಎಸ್​, ಬಿಡಿಎಸ್​ ಅಂಕಪಟ್ಟಿ 8)ಜಾತಿ ಪ್ರಮಾಣ ಪತ್ರ 9)ಇಂಟರ್ನ್​ಶಿಪ್​ ಲೆಟರ್​ 10)ಎಂಸಿಐನಿಂದ ನೀಡಲಾದ ನೋಂದಣಿ ಸರ್ಟಿಫಿಕೇಟ್​.

2021ನೇ ಸಾಲಿನ ನೀಟ್ ಪಿಜಿ ಕೌನ್ಸಿಲಿಂಗ್​ ಜನವರಿ 12ರಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಭಾನುವಾರ ಘೋಷಣೆ ಮಾಡಿದ್ದರು. ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ಅವರು, ಸುಪ್ರೀಂಕೋರ್ಟ್​ ಆದೇಶವನ್ನು ಗೌರವಿಸಲಾಗುತ್ತದೆ. ಜನವರಿ 12ರಿಂದ ಕೌನ್ಸಿಲಿಂಗ್ ನಡೆಸುವುದಾಗಿ ಆರೋಗ್ಯ ಸಚಿವಾಲಯ ರೆಸಿಡೆಂಟ್​ ವೈದ್ಯರಿಗೆ ಭರವಸೆ ನೀಡುತ್ತಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು ಎಂದು ತಿಳಿಸಿದ್ದರು.

ಇದನ್ನೂ ಓದಿ: ನೀಟ್​ ಪಿಜಿ ಮತ್ತು ಯುಜಿ ಕೌನ್ಸೆಲಿಂಗ್ ಅಧಿಸೂಚನೆಗೆ ಅನುಗುಣವಾಗಿ ನಡೆಯಲಿದೆ: ಸುಪ್ರೀಂಕೋರ್ಟ್

ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ