ಗಣರಾಜ್ಯೋತ್ಸವದಂದು ಮೋದಿಗೆ ಧ್ವಜಾರೋಹಣ ಮಾಡಲು ಬಿಡುವುದಿಲ್ಲ; ಖಲಿಸ್ತಾನಿ ಗುಂಪಿನಿಂದ ಪ್ರಧಾನಿಗೆ ಬೆದರಿಕೆ

ಜನವರಿ 26ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಡ್ಡಿ ಪಡಿಸುವ ಹಾಗೂ ತ್ರಿವರ್ಣ ಧ್ವಜ ಹಾರಿಸದಂತೆ ತಡೆಯುವವರಿಗೆ ಖಲಿಸ್ತಾನಿ ಗುಂಪು 1 ಮಿಲಿಯನ್ (10 ಲಕ್ಷ ರೂ.) ಬಹುಮಾನವನ್ನು ಘೋಷಿಸಿದೆ.

ಗಣರಾಜ್ಯೋತ್ಸವದಂದು ಮೋದಿಗೆ ಧ್ವಜಾರೋಹಣ ಮಾಡಲು ಬಿಡುವುದಿಲ್ಲ; ಖಲಿಸ್ತಾನಿ ಗುಂಪಿನಿಂದ ಪ್ರಧಾನಿಗೆ ಬೆದರಿಕೆ
ಪ್ರಧಾನಮಂತ್ರಿ ನರೇಂದ್ರ ಮೋದಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 12, 2022 | 5:02 PM

ನವದೆಹಲಿ: ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಭದ್ರತಾ ಲೋಪ ಎದುರಾಗಿತ್ತು. ಈ ಕುರಿತು ಚರ್ಚೆ ಹಾಗೂ ವಿಚಾರಣೆಗಳು ನಡೆಯುತ್ತಿರುವ ನಡುವೆಯೇ ಖಲಿಸ್ತಾನಿ ಸಂಘಟನೆಯೊಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರ ಬೆದರಿಕೆ ಹಾಕಿದೆ. ಯಾವುದೇ ಕಾರಣಕ್ಕೂ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜವನ್ನು ಹಾರಿಸಲು ಬಿಡುವುದಿಲ್ಲ. ಜನವರಿ 26ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಡ್ಡಿ ಪಡಿಸುವ ಹಾಗೂ ತ್ರಿವರ್ಣ ಧ್ವಜ ಹಾರಿಸದಂತೆ ತಡೆಯುವವರಿಗೆ ಖಲಿಸ್ತಾನಿ ಗುಂಪು 1 ಮಿಲಿಯನ್ (10 ಲಕ್ಷ ರೂ.) ಬಹುಮಾನವನ್ನು ಘೋಷಿಸಿದೆ.

ಕೆಲವು ದಿನಗಳ ಹಿಂದಷ್ಟೇ ಪಂಜಾಬ್​ನಲ್ಲಿ ಪ್ರತಿಭಟನಾಕಾರರು ರಸ್ತೆಗೆ ಅಡ್ಡ ಹಾಕಿದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿದ್ದರು. ಇದರಿಂದ ಮೋದಿಯವರು ಜನವರಿ 5ರಂದು ಪಂಜಾಬ್ ಭೇಟಿಯನ್ನು ಮೊಟಕುಗೊಳಿಸಿ, ವಿಮಾನದ ಮೂಲಕ ದೆಹಲಿಗೆ ವಾಪಾಸ್ ಹೋಗಿದ್ದರು.

ಭದ್ರತಾ ವೈಫಲ್ಯದ ನಂತರ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಹುಸೇನಿವಾಲಾದಲ್ಲಿ ಹುತಾತ್ಮರ ಸ್ಮಾರಕದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗದೆ ಹಿಂತಿರುಗಿದರು. ಫಿರೋಜ್‌ಪುರದ ರ್ಯಾಲಿಯಲ್ಲಿ ಪ್ರಧಾನಿಗೂ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ಇಡೀ ಘಟನೆಯ ತನಿಖೆಗೆ ಈಗಾಗಲೇ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ.

ಖಲಿಸ್ತಾನಿ ಭಯೋತ್ಪಾದಕ ಗುಂಪು ‘ಸಿಖ್ಸ್ ಫಾರ್ ಜಸ್ಟೀಸ್’ ಮತ್ತೊಮ್ಮೆ ಭಾರತದಲ್ಲಿ ಗಣರಾಜ್ಯೋತ್ಸವದ ಆಚರಣೆಯನ್ನು ಗುರಿಯಾಗಿಸಿಕೊಂಡಿದೆ. ಅದರ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿಯನ್ನು ನಿರ್ಬಂಧಿಸಬೇಕು ಮತ್ತು ಜನವರಿ 26ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸದಂತೆ ತಡೆಯೊಡ್ಡಬೇಕು ಎಂದು ತೀವ್ರಗಾಮಿ ಖಲಿಸ್ತಾನ್ ಪರ ಸಂಘಟನೆಯು ಜನರಿಗೆ ಆಫರ್ ನೀಡಿದೆ. ಖಲಿಸ್ತಾನಿ ಗುಂಪು ನರೇಂದ್ರ ಮೋದಿಯವರಿಗೆ ತಡೆಯೊಡ್ಡುವವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದೆ.

ಇದನ್ನೂ ಓದಿ: National Youth Day 2022: ಭಾರತದ ಯುವಜನತೆಗೆ ಟೆಕ್ನಾಲಜಿಯೂ ಗೊತ್ತು, ಪ್ರಜಾಪ್ರಭುತ್ವದ ಮೌಲ್ಯದ ಅರಿವೂ ಇದೆ: ಪ್ರಧಾನಿ ಮೋದಿ

Punajb Elections 2022: ಆಪ್ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ; ಪಂಜಾಬ್​ನಲ್ಲಿ ಕೇಜ್ರಿವಾಲ್ ಭರವಸೆ

Published On - 5:01 pm, Wed, 12 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ