ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಶಾಸಕ ಜಿ.ವಿ.ಮಂಟೂರ ವಿಧಿವಶ

| Updated By: ಆಯೇಷಾ ಬಾನು

Updated on: Feb 17, 2022 | 11:05 AM

ಜಿ.ವಿ.ಮಂಟೂರ 1983ರಲ್ಲಿ ಪಕ್ಷೇತರರಾಗಿ 1985ರಲ್ಲಿ ಜನತಾ ಪಕ್ಷದಿಂದ ಗೆದ್ದು ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿದ್ರು. ಇಂದು ಬೆಳಗ್ಗೆ 5.30ಕ್ಕೆ ಮಾಜಿ ಶಾಸಕ ಜಿ.ವಿ.ಮಂಟೂರ ಕೊನೆಯುಸಿರೆಳೆದಿದ್ದಾರೆ.

ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಶಾಸಕ ಜಿ.ವಿ.ಮಂಟೂರ ವಿಧಿವಶ
ಮಾಜಿ ಶಾಸಕ ಜಿ.ವಿ.ಮಂಟೂರ
Follow us on

ಬಾಗಲಕೋಟೆ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಶಾಸಕ ಜಿ.ವಿ.ಮಂಟೂರ(92)(GV Mantur) ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ 5.30ಕ್ಕೆ ಮಾಜಿ ಶಾಸಕ ಜಿ.ವಿ.ಮಂಟೂರ ಕೊನೆಯುಸಿರೆಳೆದಿದ್ದಾರೆ. ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಸಂಜೆ 4 ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. 2 ಬಾರಿ ಬಾಗಲಕೋಟೆ ಕ್ಷೇತ್ರದ ಶಾಸಕರಾಗಿದ್ದ ಜಿ.ವಿ.ಮಂಟೂರ ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ತಮ್ಮ ಎತ್ತರ ಕಟ್ಟುಮಸ್ತಾದ ದೇಹ ಸದಾ ಉತ್ತರಕರ್ನಾಟಕದ ಸಾಂಪ್ರದಾಯಿಕ ಉಡುಗೆ ದೋತರದಲ್ಲಿ ಮಿಂಚಿ ಎಲ್ಲರ ಗಮನ ಸೆಳೆಯುತ್ತಿದ್ದ ಬಾಗಲಕೋಟೆ ಮಾಜಿ ಶಾಸಕ. ಜಿ ವಿ ಮಂಟೂರು ಇಂದು ನಿಧನರಾಗಿದ್ದಾರೆ.92ನೇ ವಯಸ್ಸಿನ ಜಿ.ವಿ. ಮಂಟೂರ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು,ಇಂದು ಬೆಳಿಗ್ಗೆ 5.30ಕ್ಕೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಮೃತ ಜಿ.ವಿ. ಮಂಟೂರ ಅವರ ಅಂತ್ಯಸಂಸ್ಕಾರ ಇಂದು ಸಂಜೆ ಅವರ ಸ್ವಗ್ರಾಮ ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ 4 ಕ್ಕೆ ನಡೆಯಲಿದೆ. ಮಂಟೂರು ಅವರು ಮೂವರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ ‌.ಸರಳ ಜೀವಿ ಸದಾ ಹಸನ್ಮುಖಿ ಅಭಿವೃದ್ಧಿ ಹರಿಕಾರರಾಗಿದ್ದ ಜಿವಿ ಮಂಟೂರು ನಿಧನದಿಂದ ಅವರ ಕುಟಿಂಬಸ್ಥರಷ್ಟೇ ಅಲ್ಲದೆ ಅಪಾರ ಅಭಿಮಾನಿಗಳು ಗಣ್ಯರು ದುಃಖದಲ್ಲಿ ಮುಳುಗಿದ್ದಾರೆ‌.

ಎರಡು ಸಾರಿ ನಿರಂತರವಾಗಿ ಶಾಸಕರಾಗಿದ್ದ ಮಂಟೂರು ಮುಂದಿನ ಪೀಳಿಗೆಗಾಗಿ ರಾಜಕೀಯ ಬಿಟ್ಟು ಕೊಟ್ಟಿದ್ದರು
ಜಿ.ವಿ.ಮಂಟೂರ ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿದ್ರು. ಮೊದಲು ಕಾಂಗ್ರೆಸ್ ನಿಂದ ಟಿಕೆಟ್ ಗಾಗಿ ಪ್ರಯತ್ನ ಮಾಡಿದ್ದ ಮಂಟೂರು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ.ಸ್ವಾಭಿಮಾನಿ ಮಂಟೂರ ಆಗ ಪಕ್ಷೇತರರಾಗಿ ಸ್ಪರ್ಧೆ ಮಾಡಿ 1983ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ನಂತರ ರಾಮಕೃಷ್ಣ ಹೆಗಡೆ ಅವರ ಆದರ್ಶದ ಮೂಲಕ ಆಹ್ವಾನದ ಮೂಲಕ ಜನತಾ ಪಕ್ಷದ ಮೂಲಕ 1985ರಲ್ಲಿ ಜನತಾ ಪಕ್ಷದಿಂದ ಗೆದ್ದು ಶಾಸಕರಾದರು. ತಾವು ಸಕ್ರೀಯ ರಾಜಕಾರಣದಲ್ಲಿದ್ದ ವೇಳೆ ಪಕ್ಷದಲ್ಲಿ ಆಗ ರಾಜಕೀಯದಲ್ಲಿ ಕೆಲವರಿಗೆ ದಾರಿ ಮಾಡಿಕೊಟ್ಟಂತವರು ಜಿ.ವಿ. ಮಂಟೂರ, ಹೌದು ಒಂದು ಸಾರಿ ಅಧಿಕಾರ ಸಿಕ್ರೆ ಸಾಕು ನಿರಂತರವಾಗಿ ಅಧಿಕಾರ ಅನುಭವಿಸಬೇಕು,ನಂತರ ನಮ್ಮ ಮಕ್ಕಳು ರಾಜಕೀಯದಲ್ಲಿರಬೇಕೆಂದು ಬಯಸುವವರು ಬಹಳ ಜನ ಆದರೆ ಮಂಟೂರು ಅವರು ಮಾಜಿ ಸಚಿವ ಹೆಚ್​ವೈ ಮೇಟಿ, ಮಾಜಿ ಸಂಸದ ಅಜಯಕುಮಾರ ಸರನಾಯಕ್ ಅಂತವರಿಗೆ ರಾಜಕೀಯ ಜೀವನಕ್ಕೆ ಆಸರೆಯಾಗಿ ಅವರನ್ನು ರಾಜಕೀಯಕ್ಕೆ ಕರೆತಂದು ಅವರಿಗೆ ಎಲ್ಲ ರೀತಿಯ ಬೆಂಬಲ ಸಹಕಾರ ನೀಡಿ ಬೆಳೆಸಿದವರು. ಇನ್ನು ತಮ್ಮ ಮಕ್ಕಳನ್ನು ಕುಟುಂಬ ರಾಜಕಾರಣದಿಂದ ದೂರು ಇಟ್ಟು ಆದರ್ಶ ಮೆರೆದವರು.

ಜಿ.ವಿ. ಮಂಟೂರು ರಾಮಕೃಷ್ಣಾ ಹೆಗಡೆ ಅಬರ ಕಟ್ಟಾ ಅಭಿಮಾನಿ,ಅನುಯಾಯಿ. 1985ರಲ್ಲಿ ಹೆಗಡೆ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎನ್ನುವ ಬಿಗಿಪಟ್ಟು ಹಿಡಿದಿದ್ದ ಮಂಟೂರ.ಕೊನೆಗೆ ಹೆಗಡೆ ಅವರು ರಾಜಭವನಕ್ಕೆ ತೆರಳದಂತೆ ಅವರ ಶೂ ತೆಗೆದಿಟ್ಟು ಗಮನ ಸೆಳೆದಿದ್ದರು. ಬಾಗಲಕೋಟೆ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಗೆ ಇವರ ಪ್ರಯತ್ನವೇ ಕಾರಣ.ಮುಳುಗಡೆ ಸಮಸ್ಯೆ ಬಗ್ಗೆ ಹೆಗಡೆ ಅವರಿಗೆ ಮನದಟ್ಟು ಮಾಡಿ ಬಿಟಿಡಿಎ ಸ್ಥಾಪಪನೆಗೆ ಕಾರಣರಾದ್ರು. 1984ರಲ್ಲಿ ಬಿಟಿಡಿಎ ಸ್ಥಾಪನೆಯಾಗಿ, ಆರಂಭಧಲ್ಲಿ ಮೂರ್ನಾಲ್ಕು ತಿಂಗಳು ಮಂಟೂರ ಅವರೇ ಪ್ರಥಮ‌ ಅಧ್ಯಕ್ಷರಾಗಿದ್ರು.
ಮಂಟೂರು ಬಗ್ಗೆ ಗ್ರಾಮಸ್ಥರಾದ ಬಸವರಾಜ ಹೇಳುವ ಪ್ರಕಾರ “ಜಿವಿ ಮಂಟೂರು ನಮ್ಮ ಗ್ರಾಮದ ಹೆಮ್ಮೆ,ಅವರು ಎಂದೂ ರಾಜಕೀಯದಲ್ಲಿ ಕುಟುಂಬ ರಾಜಕಾರಣ ತರಲಿಲ್ಲ.ಯಾವುದೇ ಭ್ರಷ್ಟಾಚಾರದಲ್ಲಿ ಅವರ ಹೆಸರು ತಳುಕು ಹಾಕಿಕೊಳ್ಳಲಿಲ್ಲ ಸದಾ ಸರಳ ವ್ಯಕ್ತಿತ್ವದ ಮಂಟೂರ ಸರ್ ನಿಧನ ನಮಗೆ ಬಹಳ‌ ನೋವು ತಂದಿದೆ.ಅವರ ರಾಜಕೀಯ ಜೀವನ ಎಲ್ಲರಿಗೂ ಆದರ್ಶ” ಎಂದರು.

ಒಟ್ಟಾರೆ ರಾಜಕೀಯದಲ್ಲಿ ಸದಾ ಅಭಿವೃದ್ದಿ, ಸರಳ ಜೀವನಕ್ಕೆ ಹೆಸರಾದ ಮಂಟೂರು ನಿಧನ ಅವರ ಕುಟುಭಸ್ಥರು ಅಭಕಮಾನಿಗಳಿಗೆ ನೋವುಂಟು ಮಾಡಿದೆ.ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ,ಅವರ ರಾಜಕೀಯ ಎಲ್ಲರಿಗೂ ಪ್ರೆರರಣೆಯಗಾಬೇಕಾಗಿದೆ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

ಇದನ್ನೂ ಓದಿ: ಕೋಲಾರದಲ್ಲಿ ಮರಗಳನ್ನು ಕಡಿದು ಗಿಳಿ ಮರಿಗಳನ್ನ ಅನಾಥ ಮಾಡಿದ ಬಿಜಿಎಂಎಲ್ ಅಧಿಕಾರಿಗಳು! ಪರಿಸರ ಪ್ರೇಮಿಗಳ ಆಕ್ರೋಶ

Chennaveera Kanavi Death: ನಾಡೋಜ ಚೆನ್ನವೀರ ಕಣವಿ ವಿಧಿವಶ: ಕವಿಯ ಕೆಲ ಫೋಟೋಗಳು ಇಲ್ಲಿವೆ

Published On - 10:59 am, Thu, 17 February 22