ಬಾಗಲಕೋಟೆ: ವೇದಿಕೆ ಮೇಲೆ ಮುಗ್ಗರಿಸಿ ಬಿದ್ದ ವಿಪಕ್ಷನಾಯಕ ಸಿದ್ದರಾಮಯ್ಯ
ವೇದಿಕೆ ಮೇಲೆ ಮುಗ್ಗರಿಸಿ ಬಿದ್ದ ಸಿದ್ದರಾಮಯ್ಯ

ಬಾಗಲಕೋಟೆ: ವೇದಿಕೆ ಮೇಲೆ ಮುಗ್ಗರಿಸಿ ಬಿದ್ದ ವಿಪಕ್ಷನಾಯಕ ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Sep 27, 2022 | 5:12 PM

ಮುಧೋಳ ನಗರದಲ್ಲಿ ಏರ್ಪಡಿಸಲಾಗಿದ್ದ ವಿಧಾನ್​ ಪರಿಷತ್ ​ಸದಸ್ಯ, ಕಾಂಗ್ರೆಸ್ ನಾಯಕ ಆರ್​ ಬಿ ತಿಮ್ಮಾಪುರ ಜನ್ಮದಿನೋತ್ಸವ ಕಾರ್ಯಕ್ರಮದ ವೇದಿಕೆ‌ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಗ್ಗರಿಸಿ ಬಿದ್ದಿದ್ದಾರೆ.

ಬಾಗಲಕೋಟೆ: ಮುಧೋಳ ನಗರದಲ್ಲಿ ಏರ್ಪಡಿಸಲಾಗಿದ್ದ ವಿಧಾನ್​ ಪರಿಷತ್ (Vidhan Parishad)​ ಸದಸ್ಯ, ಕಾಂಗ್ರೆಸ್ (Congress)​ ನಾಯಕ ಆರ್​ ಬಿ ತಿಮ್ಮಾಪುರ ಜನ್ಮದಿನೋತ್ಸವ ಕಾರ್ಯಕ್ರಮದ ವೇದಿಕೆ‌ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಗ್ಗರಿಸಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಆಸನದ ಮೇಲೆ‌ ಕೂರೋದಕ್ಕೆ ಬರುವ ವೇಳೆ ಎಡವಿ ಮುಗ್ಗಿರಿಸಿ ಟಿಪಾಯ್ ಮೇಲೆ ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಿದ್ದರಾಮಯ್ಯ ಆಪ್ತರು ಮೇಲೆಬ್ಬಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ದಿವಂಗತ ಸಿದ್ದು ನ್ಯಾಮಗೌಡ ಪುಥ್ಥಳಿ ಅನಾವರಣ ಹಾಗೂ ಮಾಜಿ ಸಚಿವ ತಿಮ್ಮಾಪುರ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಗೆ ಆಗಮಿಸಿದ್ದರು. ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್​ ಮೂಲಕ ಆಗಮಿಸಿದ್ದು, ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೆ ನಿರಾಣಿ ಮನೆಯಲ್ಲಿ ಹೆಲಿಪ್ಯಾಡ್​ ನಿರ್ಮಿಸಲಾಗಿತ್ತು. ಹೀಗಾಗಿ ಸಚಿವ ಮುರಗೇಶ್ ನಿರಾಣಿ, ಸಹೋದರ ಸಂಗಮೇಶ್ ನಿರಾಣಿ ಸಿದ್ದರಾಮಯ್ಯ ಅವರನ್ನು ಮನೆಗೆ ಆಹ್ವಾನಿಸಿದರು. ಸಂಗಮೇಶ್ ನಿರಾಣಿ ಅವರ ಕರೆ ಮೇರೆಗೆ ಅವರ ಮನೆಗೆ ತೆರಳಿ ಮನೆಯಲ್ಲಿ ಕಾಫೀ ಸೇವಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 27, 2022 04:19 PM