ಬಾಗಲಕೋಟೆ, (ನವೆಂಬರ್ 04): ಟೋಲ್ ನಾಕಾದಿಂದ ಪೇಮೆಂಟ್ ಕೊಡದ ಹಿನ್ನೆಲೆಯಲ್ಲಿ ಲೇಬರ್ ಗುತ್ತಿಗೆದಾರ (Labour Contractor) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಕೋಟೆ (Bagalkot)ತಾಲ್ಲೂಕಿನ ಹೊಸೂರು ಬಳಿ ಇರುವ ಬೆಂಗಳೂರು ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ಕಚೇರಿ(bengaluru solapur highway toll plaza) ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾರೆಪ್ಪ ಪೂಜಾರ(50) ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ. ಕಳೆದ ಆರು ತಿಂಗಳ ವೇತನ ಕೊಡದೇ ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮನವೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಾಗಲಕೋಟೆ ತಾಲ್ಲೂಕಿನ ನಾಯನೇಗಲಿ ಗ್ರಾಮದ ನಿವಾಸಿಯಾಗಿರುವ ವಾರೆಪ್ಪ ಪೂಜಾರ, ಟೋಲ್ ನಾಕಾ ಅಡಿಯಲ್ಲಿ ಹೆದ್ದಾರಿಯಲ್ಲಿ ಗಾರ್ಡನಿಂಗ್ ನಿರ್ವಹಣೆ, ಗಿಡಗಳಿಗೆ ನೀರು ಹಾಕುವುದು ಹಾಗೂ ಸ್ವಚ್ಚತಾ ಕಾಮಗಾರಿ ಮಾಡಿಸುತ್ತಿದ್ದ. ಬೊಲೆರೊ ವಾಹನಗಳು, ಟ್ಯಾಂಕರ್ ಇಟ್ಟುಕೊಂಡು ಕಾರ್ಮಿಕರ ಮೂಲಕ ಕೆಲಸ ಮಾಡಿಸುತ್ತಿದ್ದರು. ನಿಡಗುಂದಿಯಿಂದ ಹುನಗುಂದವರೆಗೆ ರಸ್ತೆಯ ಗಾರ್ಡನ್ ನಿರ್ವಹಣೆ ಕಾರ್ಯ ಮಾಡುತ್ತಿದ್ದರು. ಆದ್ರೆ, ಆರು ತಿಂಗಳ ವೇತನ ಕೊಡದೇ ಹೊರ ಹಾಕಿದ್ದರು. ಇದರಿಂದ ಮನನೊಂದು ಇಂದು (ನವೆಂಬರ್ 04)ಬೆಳಗ್ಗೆ ಟೋಲ್ ಕಚೇರಿ ಬಳಿಯೇ ಪ್ರಾಣ ಬಿಟ್ಟಿದ್ದಾರೆ.
ಇದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾತಿ ಬಂದ್ ಮಾಡಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ