ಬಾಗಲಕೋಟೆ: ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ ಎಂದಿದ್ದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಯೂಟರ್ನ್

| Updated By: ಗಣಪತಿ ಶರ್ಮ

Updated on: Oct 17, 2023 | 4:08 PM

ನಾನು ಪಕ್ಷದ ಬಗ್ಗೆ ಮಾತನಾಡಿಲ್ಲ. ನಾನು ಏನೂ ಹೇಳಿಲ್ಲ, ನನಗೆ ಏನೂ ಗೊತ್ತಿಲ್ಲ. ಯಾರೋ ಕಿಡಿಗೇಡಿಗಳು ಮೊಬೈಲ್​​​ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಮಹಾಲಿಂಗಪುರ ನಗರದ ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಬಾಗಲಕೋಟೆ: ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ ಎಂದಿದ್ದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಯೂಟರ್ನ್
ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ
Follow us on

ಬಾಗಲಕೋಟೆ, ಅಕ್ಟೋಬರ್​​​ 17: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಮತ್ತೆ ಆರಿಸಿ ತಂದರೆ ಉಳಿಯುತ್ತೀರಿ. ಒಂದು ವೇಳೆ ಆರಿಸಿ ತರಲಿಲ್ಲವೆಂದರೆ ಉಳಿಯುವುದಿಲ್ಲ’ ಎಂದು ಜಟ ಭವಿಷ್ಯ ಹೇಳಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಗರದ ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivayogi Rajendra Swamiji) ಈಗ ಯೂಟರ್ನ್​ ಮಾಡಿದ್ದಾರೆ. ಆ ರೀತಿಯ ಹೇಳಿಕೆ ಅಥವಾ ಭವಿಷ್ಯ ನುಡಿದೇ ಇಲ್ಲ ಎಂದು ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಹೇಳಿಕೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅವರು ಸ್ಪಷ್ಟನೆ ನೀಡಿದ್ದಾರೆ.

ಆ ರೀತಿಯ ಮಾತುಗಳನ್ನು ನಾನು ಹೇಳಿಯೇ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ಹರಿಬಿಟ್ಟ ವಿಡಿಯೋ ಯಾರೋ ಕಿಡಿಗೇಡಿಗಳ ಕೃತ್ಯವಾಗಿದೆ. ನಾನು ವಿಡಿಯೋದಲ್ಲಿ ಯಾವುದೇ ಪಕ್ಷದ ಪರ ಮಾತನಾಡಿಲ್ಲ. ನಾನು ಪಕ್ಷದ ಬಗ್ಗೆ ಮಾತನಾಡಿಲ್ಲ. ನಾನು ಏನೂ ಹೇಳಿಲ್ಲ, ನನಗೆ ಏನೂ ಗೊತ್ತಿಲ್ಲ. ಯಾರೋ ಕಿಡಿಗೇಡಿಗಳು ಮೊಬೈಲ್​​​ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನವರಾತ್ರಿ ದೀಪೋತ್ಸವ ವೇಳೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕೈಯಲ್ಲಿ ಜಟ ಹಿಡಿದು ಜಟವಾಣಿ ನುಡಿದಿದ್ದಾರೆ ಎಂದು ಹೇಳಲಾದ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಮೂಲ ಮಹಾಲಿಂಗೇಶ್ವರ ಸ್ವಾಮೀಜಿ ಅವರ ಜಟ (ಕೂದಲು) ಪ್ರತಿ ವರ್ಷ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಜಟ ಹಿಡಿದು ಹೇಳುವ ಸ್ವಾಮೀಜಿ ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಇದನ್ನೂ ಓದಿ: Video: ಮೋದಿ ಅವರನ್ನು ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಉಳಿಯಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಜಟ ಭವಿಷ್ಯ ವೈರಲ್

ವಿಡಿಯೋದಲ್ಲೇನಿತ್ತು?

ಮೋದಿ ಅವರನ್ನು ಆರಿಸಿ ತಂದರೆ ಉಳಿತೀರಿ, ಒಂದು ವೇಳೆ ಆರಿಸಿ ತರಲಿಲ್ಲವೆಂದರೆ ಉಳಿಯುವುದಿಲ್ಲ. ಇದರ‌ ಮೇಲೆ ಏನಾದರೂ ವ್ಯತ್ಯಾಸ ಮಾಡಿದರೆ ಹಾಳಾಗುವ ಕಾಲ ಬರುತ್ತದೆ ಎಂದು ಸ್ವಾಮೀಜಿ ಕೈಯಲ್ಲಿ ಜಟ ಹಿಡಿದು ಜಟವಾಣಿ ನುಡಿದಿದ್ದರು. ಇದುವೇ ವೈರಲ್ ಆಗಿರುವ ವಿಡಿಯೋದಲ್ಲಿಯೂ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ