ಬಾಗಲಕೋಟೆ, ಅ.26: ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ತೇರದಾಳದಲ್ಲಿ ನಿನ್ನೆ ರಾತ್ರಿ ಯುವಕನೋರ್ವ ಕಂಟ್ರಿ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಷಣ್ಮುಖ ಗದಡಿ ಎಂಬುವವರ ಮೊಮ್ಮಗ ಮೋಹನ್ ಗದಡಿ ಎಂಬ ಯುವಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಯುವಕ ಮೋಹನ್ ಗದಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೋಹನ್ ಗದಡಿ ಎಂಬ ಯುವಕ ತನ್ನ ಮನೆಯ ಟೆರೆಸ್ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿ ವಿಡಿಯೋ ಶೋಟ್ ಮಾಡಿಸಿದ್ದಾನೆ. ಮೋಹನ್ ತನ್ನ ಅಜ್ಜನ ಹೆಸರಿನಲ್ಲಿದ್ದ ಪಿಸ್ತೂಲ್ನಿಂದ ಗುಂಡು ಹಾರಿಸಿ ವಿವಾದಕ್ಕೆ ಗುರಿಯಾಗಿದ್ದಾನೆ. ತೇರದಾಳ ಪಟ್ಟಣಕ್ಕೆ ಕಂಟ್ರಿ ಪಿಸ್ತೂಲ್ ಹೇಗೆ ಬಂತು? ಎಂಬ ಅನುಮಾನ ಹುಟ್ಟುಕೊಂಡಿದ್ದು ಷಣ್ಮುಖ ಗದಡಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡ್ತಿರುವ ಆರೋಪ ಕೇಳಿ ಬಂದಿದೆ.
ಷಣ್ಮುಖಪ್ಪ ಗದಡಿ ಅವರ ಮನೆಯಲ್ಲಿ ಈ ಪಿಸ್ತೂಲ್ ಸಿಕ್ಕಿದೆ. ಆದರೆ ಇದನ್ನು ಎಲ್ಲಿಂದ ತಂದರೂ ಹೇಗೆ ತಂದರೂ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೂಲಗಳ ಪ್ರಕಾರ ವಿಜಯಪುರ, ಕಲಬುರ್ಗಿ ಅಥವಾ ಮಹಾರಾಷ್ಟ್ರ ಮೂಲದಿಂದ ತಂದಿರಬಹುದೆಂಬ ಮಾಹಿತಿ ಇದೆ. ಪಿಸ್ತೂಲ್ ಯಾವ ಮಾಡಲ್ ಅಂತ ಕೂಡ ಮಾಹಿತಿ ಸಿಕ್ಕಿಲ್ಲ. ಆದರೆ ಷಣ್ಮುಖಪ್ಪ ಅವರ ಮೊಮ್ಮಗ ಮಾಡಿದ ಯಡವಟ್ಟಿನಿಂದ ಕಂಟ್ರಿ ಪಿಸ್ತೂಲ್ ರಹಸ್ಯ ಬಯಲಾಗಿದೆ. ಈ ಘಟನೆ ಬಗ್ಗೆ ಸಮಗ್ರ ತನಿಖೆ ಆಗಬೇಕು ತಪ್ಪಿತಸ್ಥರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಇದರ ಜಾಲ ಬಯಲು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಯುವಕ ಹಾಗೂ ಆತನ ತಂದೆ ಇನ್ನೂ ಕೂಡ ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ.
ಇನ್ನು ಘಟನೆ ಸಂಬಂಧ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಟಿವಿ9ಗೆ ಮಾಹಿತಿ ನೀಡಿದ್ದು,ದಸರಾ ಪೂಜೆ ಬಳಿಕ ಆ ಯುವಕ ಗುಂಡು ಹಾರಿಸಿದ್ದಾನೆ. ಈ ಬಗ್ಗೆ ಕೂಡಲೆ ತೇರದಾಳ ಪೊಲೀಸರ ಮೂಲಕ ಪರಿಶೀಲನೆ ನಡೆಸಿದ್ದೇವೆ. ಸದ್ಯಕ್ಕೆ ಆ ಪಿಸ್ತೂಲ್ ಗೆ ಲೈಸನ್ಸ್ ಇದೆ ಎಂದು ಗೊತ್ತಾಗಿದೆ. ಲೈಸನ್ಸ್ ಇದ್ದರೂ ಬಹಿರಂಗವಾಗಿ ಗಾಳಿಯಲ್ಲಿ ವಿನಾಕಾರಣ ಗುಂಡು ಹಾರಿಸುವಂತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳೋದಾಗಿ ಹೇಳಿದರು. ಜೊತೆಗೆ ಕಂಟ್ರಿ ಪಿಸ್ತೂಲ್ ಮಾರಾಟ ದಂಧೆ ಏನಾದರೂ ನಡೆಯುತ್ತಿದೆಯಾ ಎಂಬ ಬಗ್ಗೆ ಸಮರ್ಪಕ ತನಿಖೆ ಮಾಡಲಾಗುವುದು ಎಂದರು.
ಬಾಗಲಕೋಟೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:46 am, Thu, 26 October 23