ಕೈಕೊಟ್ಟ ಮುಂಗಾರು, ಕೃಷಿ ಚಟುವಟಿಕೆಗೆ ಬ್ರೇಕ್; ಪ್ರಧಾನಿ ಮೋದಿಗೆ ಪತ್ರ ಬರೆದ ಗ್ರಾಮೀಣ ಕೂಲಿಕಾರರು

|

Updated on: Jun 20, 2023 | 9:10 AM

ಮಳೆಯಿಲ್ಲದೆ ಬಿತ್ತನೆಯಿಲ್ಲ ಹೊಲದಲ್ಲಿ ಕೃಷಿ ಚಟುವಟಿಕೆಯಿಲ್ಲ. ರೈತರು ಯಾರು ಕೃಷಿ ಕೂಲಿಗೆ ಕರೆಯುತ್ತಿಲ್ಲ. ಹೀಗಾಗಿ ಗ್ರಾಮೀಣ ಕೂಲಿಕಾರರು ಎಂಎನ್​ಆರ್​ಇಜಿ ಕೆಲಸಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಕೈಕೊಟ್ಟ ಮುಂಗಾರು, ಕೃಷಿ ಚಟುವಟಿಕೆಗೆ ಬ್ರೇಕ್; ಪ್ರಧಾನಿ ಮೋದಿಗೆ ಪತ್ರ ಬರೆದ ಗ್ರಾಮೀಣ ಕೂಲಿಕಾರರು
ಪ್ರಧಾನಿ ಮೋದಿಗೆ ಪತ್ರ ಬರೆದ ಗ್ರಾಮೀಣ ಕೂಲಿಕಾರರು
Follow us on

ಬಾಗಲಕೋಟೆ: ಜೂನ್ ತಿಂಗಳ ಆರಂಭದಲ್ಲೇ ಕಾಣಿಸಿಕೊಳ್ಳಬೇಕಿದ್ದ ಮುಂಗಾರು(Monsoon) ಮಳೆಯ ಸುಳಿವೇ ಇಲ್ಲ. ಮುಂಗಾರು ಕೈಕೊಟ್ಟಿದ್ದರಿಂದ ಹೊಲದಲ್ಲಿ ಯಾವುದೇ ಬಿತ್ತನೆ ನಡೆಯದೇ ರೈತರು(Farmers) ಕಂಗಾಲಾಗಿದ್ದಾರೆ. ಮತ್ತೊಂದೆಡೆ ಹೊಲದಲ್ಲಿ ಕೆಲಸವಿಲ್ಲದೆ ಕೂಲಿಕಾರರು ಪರಿತಪಿಸುತ್ತಿದ್ದಾರೆ. ಹೀಗಾಗಿ ಎಂಎನ್​ಆರ್​ಇಜಿ ಕೆಲಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಗ್ರಾಮೀಣ ಕೂಲಿಕಾರರು(Rural Labourers) ಪತ್ರ ಬರೆದಿದ್ದಾರೆ.

ಮಳೆಯಿಲ್ಲದೆ ಬಿತ್ತನೆಯಿಲ್ಲ ಹೊಲದಲ್ಲಿ ಕೃಷಿ ಚಟುವಟಿಕೆಯಿಲ್ಲ. ರೈತರು ಯಾರು ಕೃಷಿ ಕೂಲಿಗೆ ಕರೆಯುತ್ತಿಲ್ಲ. ಹೀಗಾಗಿ ಗ್ರಾಮೀಣ ಕೂಲಿಕಾರರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್​ಆರ್​ಇಜಿ) ಮೇಲೆ ಡಿಪೆಂಡ್ ಆಗಿದ್ದಾರೆ. ಎಂಎನ್​ಆರ್​ಇಜಿ ಕೆಲಸ ನೀಡುವಂತೆ ಪ್ರಧಾನಿ ಮೋದಿಗೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹಾನಾಪುರ ಎಸ್​ಪಿ ಗ್ರಾಮದ ಗ್ರಾಮೀಣ ಕೂಲಿಕಾರರು ಪತ್ರ ಬರೆದಿದ್ದಾರೆ. ಈಗಾಗಲೇ ನೂರು ಮಾನವ ದಿನಗಳ ಪೈಕಿ ಕೆಲಸ ಸಂಪೂರ್ಣ ಮುಕ್ತಾಯವಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನಮಗೆ ಬೇರೆ ಕಡೆ ಕೃಷಿಯಲ್ಲಿ ಕೆಲಸಗಳು ಸಿಗುತ್ತಿಲ್ಲ. ನಮಗೆ ಎಂಎನ್​ಆರ್​ಇಜಿ ಮೂಲಕ ಇನ್ನೂ ಹೆಚ್ಚಿನ ನೂರು ದಿನ ಅವಧಿಗೆ ಕೆಲಸ ಕೊಡಿ ಎಂದು ಪ್ರಧಾನಿ ಮೋದಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಪತ್ರಕ್ಕೆ 200 ಕೂಲಿಗಾರರು ಸಹಿ ಮಾಡಿ ಫೋಸ್ಟ್ ಮೂಲಕ ಪತ್ರ ರವಾನಿಸಿದ್ದಾರೆ.

ಇದನ್ನೂ ಓದಿ: ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣಿನ ಚಿತ್ರಗಳನ್ನು ಎಲ್ಲೆಡೆ ಹಂಚಿಕೊಂಡ ಮಾಲೀಕ, ಮರುದಿನವೇ 2.5 ಲಕ್ಷ ಮೌಲ್ಯದ ಹಣ್ಣುಗಳು ಕಳವು

ವರುಣನ ಕೃಪೆಗಾಗಿ ಕತ್ತೆ ಮದುವೆ

ಬಾಗಲಕೋಟೆ ಜಿಲ್ಲೆ ರಬಕವಿವನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ವರುಣನ ಕೃಪೆಗಾಗಿ ವಿಶೇಷ ಮದುವೆ ಮಾಡಲಾಗಿದೆ. ನಾವಲಗಿ ಗ್ರಾಮದ ಜನರು ಊರಿನ ಮಾರುತಿ ದೇವಸ್ಥಾನದ ಆವರಣದಲ್ಲಿ ಕತ್ತೆಗಳ ಮದುವೆ ಮಾಡುವ ಮೂಲಕ ವರುಣನ ಕೃಪೆ ಕೋರಿದ್ದಾರೆ. ಗಂಡುಕತ್ತೆಯ ಸಂಬಂಧಿಕರಾಗಿ ರಾಮಪ್ಪ ಭಜಂತ್ರಿ ಕುಟುಂಬ ಹಾಗೂ ಹೆಣ್ಣಿನ ಕಡೆಯವರಾಗಿ ಸಣ್ಣಪ್ಪ ಜವಾಬ್ದಾರಿ ವಹಿಸಿಕೊಂಡಿದ್ದರು. ಆ ಮೂಲಕ ವಿಧಿ ವಿಧಾನಗಳು, ಸಂಪ್ರದಾಯ ಬದ್ಧವಾಗಿ ಕತ್ತೆಗಳ ಮದುವೆಯನ್ನು ಮಾಡುವ ಮೂಲಕ ಮಳೆ ಸುರಿಸುವಂತೆ ದೇವರಲ್ಲಿ ಬೇಡಿಕೊಂಡರು.

ಬಾಗಲಕೋಟೆ ಜಿಲ್ಲೆಯಲ್ಲಿ ವಾಡಿಕೆಯಂತೆ ಜೂನ್ ತಿಂಗಳಲ್ಲಿ 98.9 ಮಿ.ಮಿ. ಮಳೆಯಾಗಬೇಕಿತ್ತು ಆದರೆ ಇದುವರೆಗೂ ಮಳೆಯಾಗಿಲ್ಲ. ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಇನ್ನೂ ಮುಂದಿನ ಒಂದು ವಾರಗಳ ಕಾಲ ಮಳೆಯ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದುಬಂದಿದೆ.
ಬಾಗಲಕೋಟೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ