AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣಿನ ಚಿತ್ರಗಳನ್ನು ಎಲ್ಲೆಡೆ ಹಂಚಿಕೊಂಡ ಮಾಲೀಕ, ಮರುದಿನವೇ 2.5 ಲಕ್ಷ ಮೌಲ್ಯದ ಹಣ್ಣುಗಳು ಕಳವು

ಮಾವು(Mango) ಮಾರಾಟಕ್ಕಿದೆ ಎಂದಾಗಲಿ, ಮರದ ಚಿತ್ರಗಳನ್ನು ಹಾಕಿ ಈ ಹಣ್ಣಿಗೆ ಒಳ್ಳೆಯ ಬೆಲೆ ಇದೆ ಎಂದು ಬರೆಯುವುದಾಗಲೀ ಮಾಡಬೇಡಿ, ನೀವು ಬೆಳೆದ ಹಣ್ಣುಗಳು ಕೂಡ ಕಳವಾಗಬಹುದು.

ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣಿನ ಚಿತ್ರಗಳನ್ನು ಎಲ್ಲೆಡೆ ಹಂಚಿಕೊಂಡ ಮಾಲೀಕ, ಮರುದಿನವೇ 2.5 ಲಕ್ಷ ಮೌಲ್ಯದ ಹಣ್ಣುಗಳು ಕಳವು
ಮಾವು
ನಯನಾ ರಾಜೀವ್
|

Updated on: Jun 20, 2023 | 8:52 AM

Share

ಮಾವು(Mango) ಮಾರಾಟಕ್ಕಿದೆ ಎಂದಾಗಲಿ, ಮರದ ಚಿತ್ರಗಳನ್ನು ಹಾಕಿ ಈ ಹಣ್ಣಿಗೆ ಒಳ್ಳೆಯ ಬೆಲೆ ಇದೆ ಎಂದು ಬರೆಯುವುದಾಗಲೀ ಮಾಡಬೇಡಿ, ನೀವು ಬೆಳೆದ ಹಣ್ಣುಗಳು ಕೂಡ ಕಳವಾಗಬಹುದು. ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ನಡೆದ ಘಟನೆ ಇದಾಗಿದ್ದು, ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ಹಣ್ಣಿನ ಫೋಟೊಗಳನ್ನು ಹಾಕಿದ ಮರುದಿನವೇ 2.5 ಲಕ್ಷ ರೂಪಾಯಿ ಬೆಲೆಬಾಳುವ ಹಣ್ಣುಗಳ ಕಳ್ಳತನವಾಗಿದೆ.

ರೈತ ಲಕ್ಷ್ಮೀನಾರಾಯಣ ಎಂಬುವವರು ತಮ್ಮ ಜಮೀನಿನಲ್ಲಿ 38ಕ್ಕೂ ಹೆಚ್ಚು ಬಗೆಯ ಮಾವುಗಳನ್ನು ಬೆಳೆಸಿದ್ದರು. ಮಾವು ಬೆಳೆ ಉತ್ತಮವಾಗಿದೆ ಈ ಬಾರಿ ಒಳ್ಳೆಯ ಲಾಭ ಪಡೆಯಬಹುದು ಎನ್ನುವ ಹಂಬಲದಲ್ಲಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹಂಚಿಕೊಂಡಿದ್ದರು.

ಮತ್ತಷ್ಟು ಓದಿ: Ramanagara News: ಅಕಾಲಿಕ ಮಳೆಯಿಂದ ಮಾವು ಬೆಳೆ ನಾಶ; ಸಂಕಷ್ಟದಲ್ಲಿ ಬೆಳೆಗಾರರು

ಅಷ್ಟೇ ಅಲ್ಲದೆ ಮರದ ಫೋಟೊವನ್ನು ಕೂಡ ಹಾಕಿ ಈ ಮರದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಎಂದೂ ಕೂಡ ಬರೆದಿದ್ದರು. ಇದನ್ನು ನೋಡಿದ ಕಳ್ಳರು ಅದೇ ಮರಗಳಿಂದ ಹಣ್ಣನ್ನು ಕದ್ದಿದ್ದಾರೆ.

ಅವರ ಜಮೀನಿನಲ್ಲಿ ಒಂದೇ ದಿನದಲ್ಲಿ ಜಮೀನಿನಲ್ಲಿದ್ದ ನಾಲ್ಕು ಮರಗಳಲ್ಲಿನ ಹಣ್ಣನ್ನು ಕದ್ದು ಪರಾರಿಯಾಗಿದ್ದಾರೆ. ಈ ಕಳ್ಳತನವು ಕೃಷಿ ಉತ್ಪನ್ನಗಳ ಸುರಕ್ಷತೆ ಹಾಗೂ ಸ್ಥಳೀಯ ಆರ್ಥಿಕತೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ