Narendra Modi US Visit: ಅಮೆರಿಕ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಕಾರ್ಯಕ್ರಮಗಳ ವಿವರ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಅಮೆರಿಕ(America) ಮತ್ತು ಈಜಿಪ್ಟ್ ಎರಡು ರಾಷ್ಟ್ರಗಳ ಪ್ರವಾಸಕ್ಕೆ ತೆರಳಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ ಅವರು ನ್ಯೂಯಾರ್ಕ್ ತಲುಪಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಅಮೆರಿಕ(America) ಮತ್ತು ಈಜಿಪ್ಟ್ ಎರಡು ರಾಷ್ಟ್ರಗಳ ಪ್ರವಾಸಕ್ಕೆ ತೆರಳಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ ಅವರು ನ್ಯೂಯಾರ್ಕ್ ತಲುಪಲಿದ್ದಾರೆ. ಅಮೆರಿಕಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಅವರು ನ್ಯೂಯಾರ್ಕ್ ಸಿಟಿ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಅವರ ಅಮೆರಿಕ ಪ್ರವಾಸವು ಜೂನ್ 21ರಂದು ಪ್ರಾರಂಭವಾಗಿ ಜೂನ್ 24ಕ್ಕೆ ಕೊನೆಗೊಳ್ಳಲಿದೆ, ಅಲ್ಲಿಂದ ಈಜಿಪ್ಟ್ಗೆ ತೆರಳಲಿದ್ದಾರೆ.
ಅಮೆರಿಕದಲ್ಲಿ ಉದ್ಯಮಿಗಳನ್ನು ಭೇಟಿ ಮಾಡಲು, ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲು ಮತ್ತು ಜೀವನದ ವಿವಿಧ ಹಂತಗಳ ಚಿಂತಕರನ್ನು ಭೇಟಿ ಮಾಡಲು ನನಗೆ ಅವಕಾಶ ಸಿಗಲಿದೆ. ವ್ಯಾಪಾರ, ವಾಣಿಜ್ಯ, ನಾವೀನ್ಯತೆ, ತಂತ್ರಜ್ಞಾನ ಹಾಗೂ ಅಂತಹ ಇತರೆ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ಸಂಬಂಧವನ್ನು ಗಾಢವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
Leaving for USA, where I will attend programmes in New York City and Washington DC. These programmes include Yoga Day celebrations at the @UN HQ, talks with @POTUS @JoeBiden, address to the Joint Session of the US Congress and more. https://t.co/gRlFeZKNXR
— Narendra Modi (@narendramodi) June 20, 2023
ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಪ್ರಧಾನಿ ಮೋದಿ 2ನೇ ಬಾರಿ ಭಾಷಣ ಮಾಡಲಿದ್ದಾರೆ. ಪ್ರಧಾನಿಯಾಗಿ ಮೋದಿ ಅಮೆರಿಕಕ್ಕೆ 7 ನೇ ಭಾರಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಮನಮೋಹನ ಸಿಂಗ್ ಅವರು ಭಾರತದ ಪ್ರಧಾನಿಯಾಗಿದ್ದಾಗ ಅಮೆರಿಕದ ಆಹ್ವಾನ ಪಡೆದು ಅಧಿಕೃತ ಭೇಟಿ ನೀಡಿದ್ದರು. ಅಮೆರಿಕದ ಸಂಸತ್ತಿನಲ್ಲೂ ಅವರು ಒಂದು ಸಲ ಭಾಷಣ ಮಾಡಿದ್ದರು.
ಜೂ.21ರಂದು ಅಮೆರಿಕದ ನ್ಯೂಯಾರ್ಕ್ಗೆ ತೆರಳಲಿರುವ ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಿಗೆ 180 ದೇಶಗಳ ಪ್ರಮುಖರು ಸಾಥ್ ನೀಡಲಿದ್ದಾರೆ. ಅಂದೇ ರಾತ್ರಿ ವಾಷಿಂಗ್ಟನ್‌ಗೆ ತೆರಳಲಿರುವ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಆತ್ಮೀಯ ಔತಣ ಕೂಟ ಆಯೋಜಿಸಿದ್ದು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾರನೇ ದಿನ ಜೂ.22ರಂದು ಮೋದಿ ಅವರಿಗೆ ಅಮೆರಿಕ ಅಧ್ಯಕ್ಷರ ಪರವಾಗಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು. ಜೊತೆಗೆ ಸರ್ಕಾರ ಕಡೆಯಿಂದ ಔತಣ ಕೂಟ ಆಯೋಜಿಸಲಾಗಿದೆ. ಅಂದು ಮೋದಿ ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.
ಮತ್ತಷ್ಟು ಓದಿ: Narendra Modi US Visit: ಪ್ರಧಾನಿ ಮೋದಿ ಅಮೆರಿಕ ಭೇಟಿ: ಉಭಯ ದೇಶಗಳ ನಡುವೆ ಹೊಸ ಒಪ್ಪಂದಗಳ ಭರವಸೆ
ಈ ಮೂಲಕ ಅಮೆರಿಕ ಸಂಸತ್ತಿನಲ್ಲಿ ಮಾತನಾಡುವ ಭಾರತದ 2ನೇ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ. ಜೂ.23ರಂದು ಮೋದಿ ಅವರಿಗೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಔತಣ ಕೂಟ ಆಯೋಜಿಸಿದ್ದಾರೆ.
ಜೂನ್ 24 ರಂದು ಈಜಿಪ್ಟ್ ಪ್ರವಾಸ ಪ್ರಧಾನಿ ನರೇಂದ್ರ ಮೋದಿ ಎರಡು ರಾಷ್ಟ್ರಗಳ ವಿದೇಶ ಪ್ರವಾಸ ಸಂದರ್ಭದಲ್ಲಿ ಅಮೆರಿಕ ನಂತರ ಈಜಿಪ್ಟ್ ಗೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಮೋದಿ ಇದೇ ಮೊದಲ ಬಾರಿಗೆ ಈಜಿಪ್ಟ್ ಗೆ ಭೇಟಿ ನೀಡುತ್ತಿದ್ದು, ಜೂನ್ 24 ರಿಂದ 25ಕ್ಕೆ ಪ್ರಧಾನಿ ಮೋದಿ ಕೈರೋಗೆ ಪ್ರಯಾಣಿಸಲಿದ್ದಾರೆ.
ಜನವರಿಯಲ್ಲಿ ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫತ್ತಾಹ್ ಎಲ್ – ಸಿಸಿ ತಮ್ಮ ದೇಶಕ್ಕೆ ಆಗಮಿಸುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ಅಧ್ಯಕ್ಷ ಸಿಸಿ ಅವರೊಂದಿಗಿನ ಮಾತುಕತೆ ಹೊರತಾಗಿ ಈಜಿಪ್ಟ್ ಸರ್ಕಾರದ ಹಿರಿಯ ಗಣ್ಯರು, ಕೆಲವು ಪ್ರಮುಖ ವ್ಯಕ್ತಿಗಳು ಮತ್ತು ಈಜಿಪ್ಟ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ