Fact Check: ನರೇಂದ್ರ ಮೋದಿಯನ್ನು ಹೊಗಳಿದ ಮನಮೋಹನ್ ಸಿಂಗ್; ವೈರಲ್ ಟ್ವೀಟ್ ಫೇಕ್
ಮೊದಲನೆಯ ಟ್ವೀಟ್‌ನಲ್ಲಿ ಹೀಗೆ ಬರೆಯಲಾಗಿದೆ: ನಾನೂ ದೇಶಕ್ಕಾಗಿ ಇಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು ಆದರೆ ಕಾಂಗ್ರೆಸ್ ನನಗೆ ಆ ಸ್ವಾತಂತ್ರ್ಯವನ್ನು ಎಂದಿಗೂ ನೀಡಲಿಲ್ಲ, ನರೇಂದ್ರ ಮೋದಿ ಅವರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ಎರಡು ಟ್ವೀಟ್‌ಗಳ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೋದಿಯವರಂತೆ ಪ್ರಧಾನಿಯಾಗಿದ್ದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ನನಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರನ್ನು(Narendra Modi) ಹೊಗಳುತ್ತಿರುವ ಟ್ವೀಟ್ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಬರೆದು ಎರಡೂ ಟ್ವೀಟ್‌ಗಳ ಚಿತ್ರವವನ್ನು ಕೊಲಾಜ್ ಮಾಡಲಾಗಿದೆ.
ಮೊದಲನೆಯ ಟ್ವೀಟ್‌ನಲ್ಲಿ ಹೀಗೆ ಬರೆಯಲಾಗಿದೆ: ನಾನೂ ದೇಶಕ್ಕಾಗಿ ಇಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು ಆದರೆ ಕಾಂಗ್ರೆಸ್ ನನಗೆ ಆ ಸ್ವಾತಂತ್ರ್ಯವನ್ನು ಎಂದಿಗೂ ನೀಡಲಿಲ್ಲ, ನರೇಂದ್ರ ಮೋದಿ ಅವರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ದೇಶ ಸುಧಾರಿಸುತ್ತಿದೆ. ಇನ್ನೊಂದು ಟ್ವೀಟ್ ನಲ್ಲಿಇಂದು ನಾನು ಇದನ್ನು ಯಾವುದೇ ನಿರ್ಬಂಧಗಳಿಲ್ಲದೆ ಹೇಳುತ್ತಿದ್ದೇನೆ, ಈ ಇಡೀ ಜಗತ್ತಿನಲ್ಲಿ ಮೋದಿಯಂತಹ ನಾಯಕ ಅಥವಾ ಪ್ರಧಾನಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಫೇಸ್‌ಬುಕ್ ಬಳಕೆದಾರ ಲೋಕೇಶ್ ಕುಮಾರ್ ಆರ್ಯ ಜೂನ್ 6ರಂದು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ, ನಾನು ಏನು ಹೇಳಬೇಕಿದೆಯೋ ಮನಮೋಹನ್ ಸಿಂಗ್ ಅವರೇ ಎಲ್ಲವನ್ನೂ ಹೇಳಿದರು. ಕಾಂಗ್ರೆಸಿಗರೇ, ಈಗ ನಿಮ್ಮ ನಿಜ ಸಂಗತಿ ಬಯಲಾಗಿದೆ ಎಂದು ಅವರು ಹೇಳಿದ್ದಾರೆ.
ಫ್ಯಾಕ್ಟ್ ಚೆಕ್
ಟ್ವೀಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಆಲ್ಟ್ ನ್ಯೂಸ್ ಚಿತ್ರಗಳಲ್ಲಿ ಉಲ್ಲೇಖಿಸಲಾದ Twitter ಹ್ಯಾಂಡಲ್ ನ್ನು ಪರಿಶೀಲಿಸಿದೆ. ಟ್ವೀಟ್‌ಗಳನ್ನು ಹಂಚಿಕೊಂಡ ಖಾತೆಯ ಬಳಕೆದಾರಹೆಸರು ‘@manmohan_5’ ಎಂದು ಇದ್ದು, ಅಂತಹ ಯಾವುದೇ ಖಾತೆ ಅಸ್ತಿತ್ವದಲ್ಲಿಲ್ಲ
ಸಂಬಂಧಿತ ಕೀವರ್ಡ್ ಹುಡುಕಾಟ ನಡೆಸಿದಾಗ 2021ರ ಕೆಲವು ವರದಿಗಳು ಸಿಕ್ಕಿದವು. ಅವುಗಳಲ್ಲಿ ಕೆಲವು ವರದಿಗಳು 2020 ರಿಂದ ಕಾಂಗ್ರೆಸ್ ನಾಯಕ ಸರಳ್ ಪಟೇಲ್ ಅವರ ಟ್ವೀಟ್ ಸಹ ಹೊಂದಿವೆ. ಅವರು ಟ್ವೀಟ್‌ನಲ್ಲಿ, ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಎಂದು ಹೇಳಿಕೊಳ್ಳುವ ಖಾತೆಗಳು ನಕಲಿ ಎಂದು ಉಲ್ಲೇಖಿಸಿದ್ದಾರೆ. ಇದು ನಾಯಕರ ನಿಜವಾದ ಟ್ವಿಟರ್ ಹ್ಯಾಂಡಲ್‌ಗಳಾಗಿದ್ದರೆ, ಅವರು ಪರಿಶೀಲಿಸಿದ ಬ್ಯಾಡ್ಜ್ ಅನ್ನು ಹೊಂದಿರುತ್ತಾರೆ. ಟೈಮ್ಸ್ ಆಫ್ ಇಂಡಿಯಾ ಕೂಡ ಈ ಬಗ್ಗೆ ವರದಿ ಮಾಡಿದೆ.
ಇದನ್ನೂ ಓದಿ: Fact Check: ಮದ್ಯ ಮಾರಾಟ ಮಾಡಲು ಆಧಾರ್ ಕಾರ್ಡ್ ಲಿಂಕ್; ರತನ್ ಟಾಟಾ ಹೇಳಿದ್ದಾರೆ ಎನ್ನುವ ಹೇಳಿಕೆ ಫೇಕ್
2021 ರವರೆಗೆ ‘@manmohan_5’ ಖಾತೆಯಿಂದ ಹಲವಾರು ಆರ್ಕೈವ್ ಮಾಡಲಾದ ಟ್ವೀಟ್‌ಗಳನ್ನು ಹುಡುಕಿ ತೆಗೆದಾಗ ವೈರಲ್ ಚಿತ್ರದಲ್ಲಿರುವವುಗಳೂ ಸೇರಿವೆ. ವೆರಿಫೈಡ್ ಖಾತೆಯಿಂದ ಮಾಡಿದ ಟ್ವೀಟ್ಗಳಲ್ಲ ಇವು. ಅಂದಹಾಗೆ ದೇಶದ ಮಾಜಿ ಪ್ರಧಾನಿ ಟ್ವಿಟರ್ ಖಾತೆಯನ್ನು ಹೊಂದಿಲ್ಲ. ಹಾಗಾಗಿ ಮನಮೋಹನ್ ಸಿಂಗ್ ಅವರು ನರೇಂದ್ರ ಮೋದಿ ಅವರನ್ನು ಹೊಗಳಿದಂತೆ ಕಾಣುವಂತೆ ಚಿತ್ರವನ್ನು ಮಾರ್ಫ್ ಮಾಡಲಾಗಿದೆ ಎಂಬುದು ಸ್ಪಷ್ಟ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ