IndiGo: ಏರ್​ಬಸ್​ನಿಂದ 500 ವಿಮಾನ ಖರೀದಿಸಲಿದೆ ಇಂಡಿಗೋ; ದಾಖಲೆಯ ಒಪ್ಪಂದ

ಪ್ಯಾರಿಸ್​​ನಲ್ಲಿ ನಡೆಯುತ್ತಿರುವ ಏರ್​​ ಶೋದಲ್ಲಿ ಈ ಒಪ್ಪಂದ ಏರ್ಪಟ್ಟಿದೆ. ಎಂಡಿ ರಾಹುಲ್ ಭಾಟಿಯಾ ನೇತೃತ್ವದ ಇಂಡಿಗೋ ಪ್ರವರ್ತಕರ ತಂಡ ಮತ್ತು ಏರ್​ಬಸ್​​ನ ಸಿಇಒ ಗುಯಿಲೌಮ್ ಫೌರಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

IndiGo: ಏರ್​ಬಸ್​ನಿಂದ 500 ವಿಮಾನ ಖರೀದಿಸಲಿದೆ ಇಂಡಿಗೋ; ದಾಖಲೆಯ ಒಪ್ಪಂದ
ಇಂಡಿಗೋ ವಿಮಾನ
Follow us
Ganapathi Sharma
|

Updated on:Jun 19, 2023 | 10:45 PM

ನವದೆಹಲಿ: ವಿಮಾನಯಾನ ಕ್ಷೇತ್ರದಲ್ಲೇ ಅತಿದೊಡ್ಡದು ಎನ್ನಲಾದ ಒಪ್ಪಂದಕ್ಕೆ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ಸಹಿ ಹಾಕಿದೆ. ಏರ್​​ಬಸ್​​ನಿಂದ (Airbus) 50 ಶತಕೋಟಿ ಡಾಲರ್ ವೆಚ್ಚದಲ್ಲಿ 500 ‘A320’ ವಿಮಾನಗಳನ್ನು ಖರೀದಿಸುವುದಾಗಿ ಇಂಡಿಗೋ ಸೋಮವಾರ ಘೊಷಿಸಿದೆ. ಈ ಒಪ್ಪಂದಕ್ಕೆ ಇಂಡಿಗೋ ಕಂಪನಿಗೆ ಭಾರೀ ರಿಯಾಯಿತಿಯ ಕೊಡುಗೆ ದೊರೆತಿದೆ ಎನ್ನಲಾಗಿದೆ. ಟಾಟಾ ಗ್ರೂಪ್ ಇತ್ತೀಚೆಗೆ ಏರ್ ಇಂಡಿಯಾಗೆ 470 ವಿಮಾನಗಳನ್ನು ಖರೀದಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. ಇದು ಈವರೆಗಿನ ಅತಿದೊಡ್ಡ ವಿಮಾನ ಖರೀದಿ ಒಪ್ಪಂದವಾಗಿತ್ತು. ಇದೀಗ ಟಾಟಾ ಗ್ರೂಪ್​ ಅನ್ನು ಇಂಡಿಗೋ ಮೀರಿಸಿದೆ.

ಪ್ಯಾರಿಸ್​​ನಲ್ಲಿ ನಡೆಯುತ್ತಿರುವ ಏರ್​​ ಶೋದಲ್ಲಿ ಈ ಒಪ್ಪಂದ ಏರ್ಪಟ್ಟಿದೆ. ಎಂಡಿ ರಾಹುಲ್ ಭಾಟಿಯಾ ನೇತೃತ್ವದ ಇಂಡಿಗೋ ಪ್ರವರ್ತಕರ ತಂಡ ಮತ್ತು ಏರ್​ಬಸ್​​ನ ಸಿಇಒ ಗುಯಿಲೌಮ್ ಫೌರಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

2006 ರಲ್ಲಿ ಆರಂಭವಾದಾಗಿನಿಂದ ಇಂಡಿಗೋ ಕಂಪನಿಯು ಈವರೆಗೆ ಏರ್‌ಬಸ್‌ನಿಂದ ಒಟ್ಟು 1,330 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಸದ್ಯ ಇಂಡಿಗೋದ 310 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ಇಂಡಿಗೋ ಪ್ರಕಾರ, ಏರ್​ಬಸ್​​ನ ‘A320’ ವಿಮಾನದಿಂದ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಮತ್ತು ಉತ್ತಮ ಇಂಧನ ದಕ್ಷತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಲಿದೆ.

ಇದನ್ನೂ ಓದಿ: IndiGo: ಮಂಗಳೂರು- ಮುಂಬೈ ಮಾರ್ಗದಲ್ಲಿ ಹೊಸ ಇಂಡಿಗೋ ವಿಮಾನ ಸಂಚಾರ ಆರಂಭ

ಕೆಲವು ತಿಂಗಳುಗಳ ಹಿಂದಷ್ಟೇ ಫ್ರಾನ್ಸ್ ದೇಶದ ಏರ್​ಬಸ್ ಸಂಸ್ಥೆಯಿಂದ 250 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಟಾಟಾ ಗ್ರೂಪ್​ನ ಏರ್ ಇಂಡಿಯಾ ಸಂಸ್ಥೆ ಅದಾಗಿ ಕೆಲವು ದಿನಗಳ ನಂತರ ಅಮೆರಿಕದ ಬೋಯಿಂಗ್​ನಿಂದ 220 ವಿಮಾನಗಳನ್ನು ಖರೀದಿಸುವ ಮತ್ತೊಂದು ಒಪ್ಪಂದಕ್ಕೆ ಸಹಿಹಾಕಿತ್ತು. ಇದರೊಂದಿಗೆ ಒಟ್ಟು 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಂತಾಗಿತ್ತು. ಇದು ದೇಶದ ಇತಿಹಾಸದಲ್ಲಿ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ ಎನ್ನಲಾಗಿತ್ತು. ಇದೀಗ ಇಂಡಿಗೋ ಇದನ್ನು ಮೀರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Mon, 19 June 23