ಬಾಗಲಕೋಟೆ ವಿವಿ ಸ್ಥಾಪನೆ ವಿವಾದ: ಶಾಸಕ ವೀರಣ್ಣ ಚರಂತಿಮಠ ಉತ್ತರದಲ್ಲೇ ಎದ್ದು ಕಾಣುತ್ತಿದೆ ನಿರ್ಲಕ್ಷ್ಯತನ!

| Updated By: ಸಾಧು ಶ್ರೀನಾಥ್​

Updated on: Nov 25, 2022 | 2:09 PM

Veeranna Charantimath: ಸರ್ಕಾರವೇನೋ ಸದ್ದುದ್ದೇಶದಿಂದ ಬಾಗಲಕೋಟೆ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅಸ್ತು ಅಂದಿದೆ. ಆದರೆ ಬಾಗಲಕೋಟೆ ಜನತೆ ಜಿಲ್ಲಾ ಕೇಂದ್ರ ಬಿಟ್ಟು ತಾಲ್ಲೂಕು ಕೇಂದ್ರಕ್ಕೆ ಕೊಡೋದು ಸರಿಯಲ್ಲ. ಜಿಲ್ಲಾ ಕೇಂದ್ರದಲ್ಲಿ ಆದರೆ ಸುತ್ತಮುತ್ತಲಿನ ತಾಲ್ಲೂಕು, ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಅಂತಾರೆ. 

ಬಾಗಲಕೋಟೆ ವಿವಿ ಸ್ಥಾಪನೆ ವಿವಾದ: ಶಾಸಕ ವೀರಣ್ಣ ಚರಂತಿಮಠ ಉತ್ತರದಲ್ಲೇ ಎದ್ದು ಕಾಣುತ್ತಿದೆ ನಿರ್ಲಕ್ಷ್ಯತನ!
ಬಾಗಲಕೋಟೆ ವಿವಿ ಸ್ಥಾಪನೆ ವಿವಾದ: ಶಾಸಕ ವೀರಣ್ಣ ಚರಂತಿಮಠ ಉತ್ತರದಲ್ಲೇ ಎದ್ದು ಕಾಣುತ್ತಿದೆ ನಿರ್ಲಕ್ಷ್ಯತನ!
Follow us on

ಸರಕಾರ ರಾಜ್ಯದಲ್ಲಿ 7 ನೂತನ ವಿಶ್ವವಿದ್ಯಾಲಯಗಳ ಮಾಡೋದಕ್ಕೆ ಮುಂದಾಗಿದ್ದು, ಆಯಾ ಜಿಲ್ಲೆಯ ಜನರಿಗೆ ಬಹಳ ಖುಷಿ ತಂದಿದೆ. ಆದರೆ ಅದೊಂದು ಜಿಲ್ಲೆಯಲ್ಲಿ ಸ್ಥಳದ ಬಗ್ಗೆ ವಿವಾದ ಶುರುವಾಗಿದೆ. ಸ್ನಾತಕೋತ್ತರ ಶಿಕ್ಷಣ ಕೇಂದ್ರವಿರುವ ನಗರ ಭಾಗದಲ್ಲಿ ವಿವಿ ಸ್ಥಾಪನೆ ಆಗಬೇಕು ಎಂಬ ನಿಯಮವಿದ್ದು, ಅದರ ಪ್ರಕಾರ ವಿವಿ ತಾಲ್ಲೂಕಾ ಸ್ಥಳದಲ್ಲಿ ನಿರ್ಮಾಣಬಾಗಬೇಕು. ಆದರೆ ಜಿಲ್ಲಾ ಕೇಂದ್ರದಲ್ಲಿ ಆಗಲಿ‌ ಅಂತ ಅನೇಕರು ವಾದ ಮಾಡುತ್ತಿದ್ದಾರೆ. ವಿವಿ ಎಲ್ಲಿ ಆಗಬೇಕೆಂಬ ವಿವಾದದಲ್ಲಿ (controversy) ಕಾರ್ಯಚಟುವಟಿಕೆಗಳಿಗೆ ಗ್ರಹಣ ಹಿಡಿದಂತಾಗಿದೆ (education).

ಬಾಗಲಕೋಟೆ ಜಿಲ್ಲೆ ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಹೆಸರಾದ ಪ್ರಮುಖ ಜಿಲ್ಲೆ. ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಇಂತಹ ಜಿಲ್ಲೆಯ ಎಲ್ಲ ಕಾಲೇಜುಗಳು ಬೆಳಗಾವಿ ರಾಣಿ ಚೆನ್ನಮ್ಮ ವಿವಿ ವ್ಯಾಪ್ತಿಯಲ್ಲಿ ಬರುತ್ತಿದ್ದವು. ಆದರೆ ಇದೀಗ ಸರಕಾರ ರಾಜ್ಯದ 7 ಜಿಲ್ಲೆಗಳಲ್ಲಿ ನೂತನ ವಿಶ್ವವಿದ್ಯಾಲಯ (bagalkot university) ಘೋಷಣೆ ಮಾಡಿ ಮಂಜೂರು ಮಾಡಿದೆ. ಆ ಏಳು ಜಿಲ್ಲೆಗಳಲ್ಲಿ ಬಾಗಲಕೋಟೆ ಜಿಲ್ಲೆ ಕೂಡ ಒಂದು.

ಈ ನೂತನ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ವಿಭಿನ್ನವಾಗಿ ಹಾಗೂ ಗರಿಷ್ಟ ತಂತ್ರಜ್ಞಾನದ ಬಳಕೆಯಿಂದ ಕಾರ್ಯನಿರ್ವಹಿಸಬೇಕು ಎಂಬುದು ಪ್ರಮುಖ‌ ಉದ್ದೇಶವಾಗಿದೆ. ಆದರೆ ಬಾಗಲಕೋಟೆಗೆ ಘೋಷಣೆಯಾದ ರಾಣಿ ಚೆನ್ನಮ್ಮ‌ ವಿವಿ ಜಮಖಂಡಿಗೆ ಘೋಷಣೆಯಾಗಿತ್ತು. ಇದಕ್ಕೆ ಕಾರಣ ರಾಣಿಚೆನ್ನಮ್ಮ ವಿವಿಯ ಸ್ನಾತಕೋತ್ತರ ಕೇಂದ್ರ ಕಟ್ಟದ ಜಮಖಂಡಿಯಲ್ಲಿರೋದು.

ಆದರೆ ಇದಕ್ಕೆ ಬಾಗಲಕೋಟೆ ಜನತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಕೇಂದ್ರ ಬಿಟ್ಟು ತಾಲ್ಲೂಕು ಕೇಂದ್ರಕ್ಕೆ ಕೊಡೋದು ಸರಿಯಲ್ಲ. ಇದರಿಂದ ಒಂದೆರಡು ತಾಲ್ಲೂಕಿನ ಜನಕ್ಕೆ ಮಾತ್ರ ಅನುಕೂಲ ಆಗುತ್ತದೆ. ಜಿಲ್ಲಾ ಕೇಂದ್ರದಲ್ಲಿ ಆದರೆ ಸುತ್ತಮುತ್ತಲಿನ ತಾಲ್ಲೂಕು ಹಾಗೂ ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಅಂತಾರೆ. ಆದರೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಈ ಬಗ್ಗೆ ಇಚ್ಚಾಶಕ್ತಿ ತೋರುತ್ತಿಲ್ಲ. ಇದಕ್ಕೆ ಕಾರಣ ಅವರು ಕಾರ್ಯಾಧ್ಯಕ್ಷರಾಗಿರುವ ಬಿವಿವಿ ಸಂಘಕ್ಕೆ ಹೊಡೆತ ಬೀಳುತ್ತೆ ಅಂತ ಈ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಇನ್ನು ಜಿಲ್ಲಾ ಕೇಂದ್ರದಲ್ಲೇ ವಿವಿ ಆಗಬೇಕೆಂದು ಬಾಗಲಕೋಟೆ ನಗರದಲ್ಲಿ ಒದುತ್ತಿರುವ ವಿದ್ಯಾರ್ಥಿಗಳು ಕೂಡ ಆಗ್ರಹ ಮಾಡುತ್ತಿದ್ದಾರೆ. ಇಲ್ಲಿ ಸುವ್ಯವಸ್ಥಿತ ವಸತಿ ನಿಲಯಗಳು ಸೇರಿದಂತೆ ಎಲ್ಲ ಸೌಲಭ್ಯವಿದೆ. ಕೇಂದ್ತ ಸ್ಥಾನ ಆಗಿರೋದರಿಂದ‌ ಬಾಗಲಕೋಟೆ ನಗರದಲ್ಲೇ ಆರಂಭವಾಗಬೇಕೆಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಉತ್ತರದಲ್ಲೇ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ!

ಇಲ್ಲಿ ನೂತನ ವಿವಿಗೆ ಹೊಸ ಕಟ್ಟಡಗಳನ್ನು ಕೊಡೋದಿಲ್ಲವಂತೆ, ಜಾಗ ಕೂಡ ನೀಡೋದಿಲ್ಲ, ವಾಹನ ಸೌಲಭ್ಯವಿಲ್ಲ, ಹೆಚ್ಚುವರಿ ಸಿಬ್ಬಂದಿ ಕೂಡ ನೇಮಕ ಮಾಡೋದಿಲ್ಲ. ಈಗಾಗಲೇ ಮಾತೃಸಂಸ್ಥೆ ಅಡಿಯಲ್ಲಿ ಇದ್ದಾಗ ಇದ್ದ ಸಿಬ್ಬಂದಿಗಳೇ ಕೆಲಸ‌ ಮಾಡಬೇಕು. ತೀರಾ ಅವಶ್ಯಕ ಎನ್ನಿಸಿದರೆ ಮಾತ್ರ ಹೆಚ್ಚುವರಿ ಸಿಬ್ಬಂದಿ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಪಿಜಿ ಸೆಂಟರ್ ಜಮಖಂಡಿ ‌ನಗರದಲ್ಲಿರುವುದರಿಂದ ಅದು ಜಮಖಂಡಿ ಪಾಲಾಗಿತ್ತು.

ಆದರೆ ಈ ಆದೇಶಕ್ಕೂ ತಡೆಬಿದ್ದಿದೆ. ಇದರಿಂದ ಒಂದು ಕಡೆ ಜಮಖಂಡಿ ‌ಜನರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಜಮಖಂಡಿ ನಗರಕ್ಕೆ ವಿವಿ ಆಗಬೇಕು ಅಂತಿದ್ದಾರೆ. ಇನ್ನು ಬಾಗಲಕೋಟೆ ಭಾಗದ ಜನರು ಬಾಗಲಕೋಟೆಯಲ್ಲಿಯೇ ಆಗಬೇಕು ಅಂತಿದ್ದಾರೆ. ಬಾಗಲಕೋಟೆ ‌ನಗರದಲ್ಲಿ ವಿವಿ ಆಗಬೇಕೆಂಬ ಜನರ ಕೂಗಿಗೆ ನಿಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ (veeranna charantimath) ಉತ್ತರದಲ್ಲೇ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ! ಅದು ಕಾಂಟ್ರೊವರ್ಸಿಯಾಗಿದೆ. ನೀವು ಕಾಂಟ್ರೋವರ್ಸಿ ಪ್ರಶ್ನೆ ಕೇಳ್ತಿದ್ದೀರಿ, ಆ ಬಗ್ಗೆ‌‌ ನನಗೇನೂ ಗೊತ್ತಿಲ್ಲ ಅಂತ‌ ಜಾರಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಜಿಲ್ಲೆಗೆ ಬಂದ ವಿವಿ ಎಲ್ಲಿ ಆರಂಭವಾಗಬೇಕು ಎಂಬ ಚರ್ಚೆ ಶುರುವಾಗಿದೆ. ಬಾಗಲಕೋಟೆ, ಜಮಖಂಡಿ ಬಗ್ಗೆ ಪರ ವಿರೋಧ ಚರ್ಚೆಗಳು ಶುರುವಾಗಿದ್ದು, ಅಂತಿಮವಾಗಿ ವಿವಿ ಎಲ್ಲಿ ಆರಂಭ ಮಾಡ್ತಾರೆ ಎಂಬುದನ್ನು ನೋಡಬೇಕಿದೆ ಎಂದು ಪಿಜಿ ವಿದ್ಯಾರ್ಥಿ ಪ್ರತಾಪ್ ರೆಡ್ಡಿ ಹೇಳುವಾಗ ಇಲ್ಲಿನ ವಿದ್ಯಾರ್ಥಿಗಳಲ್ಲಿ ಆತಂಕ ಮಡುವುಗಟ್ಟಿರುವುದು ಸ್ಪಷ್ಟವಾಗುತ್ತದೆ. (ವರದಿ: ರವಿ ಮೂಕಿ ಟಿವಿ 9, ಬಾಗಲಕೋಟೆ)