Supreme Bail: 12 ಕೋಟಿ ವಂಚನೆ -ಸುಪ್ರೀಂ ಕೋರ್ಟ್ ಗೆ ಹೋಗಿ ಜಾಮೀನು ತಂದ ಡಿಸಿಸಿ ಬ್ಯಾಂಕ್ ಜವಾನ!

Bagalkot DCC Bank: ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಲ್ಲಿ ಜವಾನ ಕೆಲಸ‌ ಮಾಡುತ್ತಿದ್ದ ವೇಳೆ ಬ್ಯಾಂಕ್ ಮ್ಯಾನೇಜರ್ ಐ.ಡಿ. ಬಳಸಿ 12 ಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ ಆರೋಪಿ ಜವಾನನಿಗೆ ಸುಪ್ರೀಂ ಕೋರ್ಟ್ ಇದೀಗ ಜಾಮೀನು ದಯಪಾಲಿಸಿದೆ.

Supreme Bail: 12 ಕೋಟಿ ವಂಚನೆ -ಸುಪ್ರೀಂ ಕೋರ್ಟ್ ಗೆ ಹೋಗಿ ಜಾಮೀನು ತಂದ ಡಿಸಿಸಿ ಬ್ಯಾಂಕ್ ಜವಾನ!
12 ಕೋಟಿ ವಂಚನೆ: ಸುಪ್ರೀಂ ಕೋರ್ಟ್ ಗೆ ಹೋಗಿ ಜಾಮೀನು ತಂದ ಡಿಸಿಸಿ ಬ್ಯಾಂಕ್ ಜವಾನ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 26, 2022 | 12:39 PM

ಬಾಗಲಕೋಟೆ: ಇಲ್ಲಿನ ಡಿಸಿಸಿ ಬ್ಯಾಂಕ್ ಗೆ ಬರೋಬ್ಬರಿ 12 ಕೋಟಿ ರೂಪಾಯಿ ವಂಚನೆ ಮಾಡಿದ್ದ ಬ್ಯಾಂಕಿನ ಜವಾನ ಪ್ರವೀಣ ಪತ್ರಿ ಸೀದಾ ಸುಪ್ರೀಂ ಕೋರ್ಟ್ (Supreme Court) ಕದ ತಟ್ಟಿ ಅಲ್ಲೀಮದ ಜಾಮೀನು (Bail) ತಂದಿದ್ದಾನೆ. ಸದರಿ ಡಿಸಿಸಿ ಬ್ಯಾಂಕಿನ ಮ್ಯಾನೇಜರ್ ಗಳ ಐಡಿ ಬಳಸಿ ತನ್ನ ಹಾಗೂ ಇತರರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದ ಆರೋಪ ಪ್ರವೀಣ ಪತ್ರಿ (Peon Praveen Patri) ಮೇಲಿತ್ತು ಎಂಬುದು ಇಲ್ಲಿ ದಾಖಲಾರ್ಹ.

ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (Bagalkot District Central Co op Bank) ನಲ್ಲಿ ಗ್ರಾಹಕರು ಇಟ್ಟಿದ್ದ ಫಿಕ್ಸೆಡ್​​ ಡೆಪಾಸಿಟ್ (ಎಫ್.ಡಿ) ಮೇಲಿನ ಬಡ್ಡಿ ಹಣದಲ್ಲಿ 12 ಕೋಟಿ ರೂಪಾಯಿ ವಂಚನೆ ಮಾಡಿದ್ದ ಇದೇ ಪ್ರವೀಣ ಪತ್ರಿ. ಈತ ಸಿನಿಮಾ, ಅಲ್ಬಂ ಸಾಂಗ್, ನಾಟಕ, ಯುವಕರ ಪಡೆ ಕಟ್ಟಿಕೊಂಡು ಫುಲ್ ಹವಾ ಕ್ರಿಯೇಟ್ ಮಾಡಿಕೊಳ್ಳೋದರಲ್ಲಿ ಹೆಸರಿಗೆ ತಕ್ಕಂತೆ ಪ್ರವೀಣನಾಗಿದ್ದ. ಅದೂ ಸಾಲದು ಅಂತಾ ಹೆಲಿಕಾಪ್ಟರ್ ಓಡಾಟ, ಮೋಜು ಮಸ್ತಿ, ವಿದ್ಯಾರ್ಥಿಗಳಿಗೆ, ಜಾತ್ರೆಗಳಿಗೆ ಪುಕ್ಸಟ್ಟೆ ಹಣ ದಾನ ಮಾಡಿ ಬಿಲ್ಡಪ್ ಪಡೆಯುತ್ತಿದ್ದ. P ದಿಕ್ಷಿತ್ ಎಂದು ಹೆಸರಿಟ್ಟುಕೊಂಡು ಜ್ಯೂನಿಯರ್ ರಘು ದಿಕ್ಷಿತ್ ಅಂತಾ ಗಿಟಾರ್ ಹಿಡಿದು ಪೋಸ್ ಕೊಡ್ತಿದ್ದ ಈ ಪ್ರವೀಣ ಪತ್ರಿ.

ಹೆಲಿಕಾಪ್ಟರ್ ಮೋಜು ಮಸ್ತಿ ಮಾಡಿಕೊಂಡಿದ್ದ ಆರೋಪಿಗೆ ಜಾಮೀನು ದಯಪಾಲಿಸಿದ ಸುಪ್ರೀಂ ಕೋರ್ಟ್!

Peon Praveen Patri who allegedly did 12 crore rupees fraud in Bagalkot DCC Bank got bail in Supreme Court 3

ಡಿಸಿಸಿ ಬ್ಯಾಂಕ್ ಶಾಖೆಗಳಾದ ಅಮೀನಗಢ, ಕಮತಗಿ, ಗೂಡೂರು ಈ ಮೂರೂ ಡಿಸಿಸಿ ಬ್ಯಾಂಕ್ ನಲ್ಲಿ ಈತ ಜವಾನ ಕೆಲಸ‌ ಮಾಡುತ್ತಿದ್ದ. ಜವಾನನಾಗಿದ್ದ ವೇಳೆ ಆಯಾ ಬ್ಯಾಂಕ್ ಮ್ಯಾನೇಜರ್ ಐಡಿ ಬಳಸಿ ವಂಚನೆ ಮಾಡಿದ್ದ. 12 ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಜವಾನನಿಗೆ ಸುಪ್ರೀಂ ಕೋರ್ಟ್ ನಿಂದ ಇದೀಗ ಜಾಮೀನು ದಯಪಾಲಿಸಿದೆ. ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಮೊದಲು ಡಿಸಿಸಿ ಬ್ಯಾಂಕ್‌ನಿಂದ ದೂರು ದಾಖಲಾಗಿತ್ತು.

Peon Praveen Patri who allegedly did 12 crore rupees fraud in Bagalkot DCC Bank got bail in Supreme Court 2

ಮುಂದೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಈ ಮಧ್ಯೆ, ನವೆಂಬರ್ 10ರಂದು ಸುಪ್ರೀಂ ಕೋರ್ಟ್ ನಿಂದ ಜಾಮೀನು ದಕ್ಕಿದೆ. ಧಾರವಾಡ ಹೈಕೋರ್ಟ್​​ನಲ್ಲಿಯೂ ಸಹ ಆರೋಪಿ ಪ್ರವೀಣ ಪತ್ರಿಗೆ ಜಾಮೀನು ರದ್ದಾಗಿತ್ತು. ಜಾಮೀನು ರದ್ದು ಆದೇಶ ಪ್ರಶ್ನಿಸಿ ಪ್ರವೀಣ ಸುಪ್ರೀಂ ಕೋರ್ಟ್ ಗೆ ಜಾಮೀನು ಸಲ್ಲಿಸಿದ್ದ. ಮುಂದಿನ ಆದೇಶದವರೆಗೂ ಪ್ರವೀಣ ಪತ್ರಿಗೆ ಬಾಧಕವಾಗುವಂತಹ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಪ್ರವೀಣ ಪತ್ರಿ ಕೂಡ ತನಿಖೆಗೆ ಎಲ್ಲ ರೀತಿಯಿಂದಲೂ ಸಹಕರಿಸಬೇಕು ಎಂದು ಸುಪ್ರೀಂ ಆದೇಶದಲ್ಲಿ ತಿಳಿಸಲಾಗಿದೆ. ಸುಪ್ರೀಂ ಕೊರ್ಟ್ ದ್ವಿಸದಸ್ಯ ಪೀಠದಿಂದ ಈ ಆದೇಶ ಹೊರಬಿದ್ದಿದೆ.

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ