ಬಾಗಲಕೋಟೆ, ಸೆ.08: ಅದೊಂದು ಬೆಟ್ಟದಲ್ಲಿ ವಿರಾಜಮಾನರಾಗಿರುವ ಭುವನೇಶ್ವರಿ ದೇವಿ(Bhuvaneshwari Devi). ತಾಯಿ ಭುವನೇಶ್ವರಿ ದರ್ಶನ ಪಡೆಯಲು ಸಹಸ್ರಾರು ಭಕ್ತರು, ಎಲ್ಲಕ್ಕಿಂತ ಹೆಚ್ಚಾಗಿ ದೇವಿಯ ಅಮೃತೌಷಧ ಅಂಬಲಿ ಸೇವನೆ. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ (Bagalakote) ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದ ಭುವನೇಶ್ವರಿ ದೇವಿ ಸನ್ನಿಧಾನದಲ್ಲಿ. ಹೌದು, ಸಮಾಜದಲ್ಲಿನ ಎಲ್ಲ ಭರವಸೆ ಕೈ ಕೊಟ್ಟಾಗ ದೇವರ ಪಾದವೊಂದೆ ಗತಿ. ಕಾಯಿಲೆ, ಅನಾರೋಗ್ಯಕ್ಕೆ ತುತ್ತಾದವರು, ಮಕ್ಕಳಾಗದವರು ಎಲ್ಲರೂ ವೈದ್ಯರ ಪ್ರಯತ್ನ ಕೈ ಮೀರಿದಾಗ ಹೋಗೋದು ದೇವರ ಕಡೆಗೆ. ಅಷ್ಟೊಂದು ನಂಬಿಕೆ ದೇವರ ಮೇಲೆ ನಮ್ಮ ಜನರದ್ದು.
ಇನ್ನು ಇಲ್ಲಿ ಇಂತಹ ಎಲ್ಲ ಜನರಿಗೆ ನೊಂದು ಬೆಂದವರಿಗೆ ಭುವನೇಶ್ವರಿ ತಾಯಿಯೇ ಆಸರೆ. ಕುಂದರಗಿ ಗ್ರಾಮದ ಸುರಗಿರಿ ಬೆಟ್ಟದಲ್ಲಿ ನೆಲೆಸಿರುವ ಭುವನೇಶ್ವರಿ ತಾಯಿ ಭಕ್ತರ ಕಲ್ಪತರುವಾಗಿದ್ದಾಳೆ. ಇಲ್ಲಿ ಪ್ರತಿ ಶುಕ್ರವಾರ ದೇವಿ ಆರಾಧನೆ ಪೂಜೆ ಮಂತ್ರಪಠಣೆ ಅಭಿಷೇಕ ನಡೆಯುತ್ತದೆ. ಅಂದು ಬಂದ ಭಕ್ತರಿಗೆ ಇಲ್ಲಿ ಅಂಬಲಿ ಪ್ರಸಾದ ಕೊಡಲಾಗುತ್ತದೆ. ಈ ಅಂಬಲಿ ಔಷಧವಿದ್ದಂತೆ, ಯಾವುದೇ ಕಾಯಿಲೆ , ಮಾಹಾಮಾರಿ ಬಂದರೂ ಅಂಬಲಿ ಸೇವಿಸಿದರೆ ವಾಸಿಯಾಗುತ್ತದೆ. ಮಕ್ಕಳಾಗದವರು ಅಂಬಲಿ ಸೇವಿಸಿದರೆ ಮಕ್ಕಳು ಕೂಡ ಅಸಗುತ್ತವೆ. ಭಕ್ತರ ಒಟ್ಟಾರೆ ಎಲ್ಲ ಬೇಡಿಕೆ ಈಡೇರುತ್ತವರ ಎಂಬುದು ಭಕ್ತರ ನಂಬಿಕೆಯಾಗಿದೆ.
ಇದನ್ನೂ ಓದಿ:ಮಧ್ಯರಾತ್ರಿ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ ಶಾರುಖ್ ಖಾನ್; ನಟನ ನಂಬಿಕೆಗೆ ಕಾರಣವೇನು?
ಕುಂದರಗಿ ಗ್ರಾಮದಲ್ಲಿ ಕಳೆದ 20 ವರ್ಷದಿಂದ ಈ ದೇವಸ್ಥಾನ ಭುವನೇಶ್ವರಿ ಪವಾಡ ನಡೆಯುತ್ತಾ ಬಂದಿದೆ. ಪ್ರತಿ ಶುಕ್ರವಾರ ದೇವಿ ಸನ್ನಿಧಿಗೆ ಸಹಸ್ರಾರು ಭಕ್ತರು ಬರುತ್ತಾರೆ. ಭುವನೇಶ್ವರಿ ದೇವಿ ಬೇಡಿದ ಭಕ್ತರ ಕಲ್ಪತರು ಎಂಬಂತೆ ಎಲ್ಲ ಹರಕೆ ಈಡೇರಿಸುತ್ತಾಳೆ. ಇನ್ನು ಇಲ್ಲಿ ಅಂಬಲಿ ಪ್ರಸಾದವನ್ನು ಮಾಡುವುದರಲ್ಲೂ ಪರಿಶುದ್ದತೆ ಪಾವಿತ್ರತೆ ಇದೆ. ನದಿ ನೀರನ್ನುತಂದು ಕೇವಲ ಉಪ್ಪು ಹಿಟ್ಟಿನಿಂದ ಅಂಬಲಿ ಮಾಡುತ್ತಾರೆ. ಅಂಬಲಿ ಮಾಡೋದು ರಾಮನಗೌಡ ಮುದಕಣ್ಣವರ ಎಂಬುವರ ಮನೆಯವರು ಮಾತ್ರ.
ಬೇರೆಯವರ ಮನೆಯವರು ಮಾಡಿದ ಅಂಬಲಿ ನಡೆಯುವುದಿಲ್ಲ.ಅಂಬಲಿ ಮಾಡಿ ಅದನ್ನು ದೇವಿ ಮುಂದೆ ಇಟ್ಟು ಪೂಜೆ ಮಾಡಿ ನಂತರ ಬಂದ ಭಕ್ತರಿಗೆ ಹತ್ತಿ ಎಲೆ ಮೂಲಕ ಪ್ರಸಾದದ ರೂಪದಲ್ಲಿ ನೀಡಲಾಗುವುದು.ಆದರೆ ದೇವಿ ಮುಂದಿಟ್ಟು ಪೂಜೆ ಮಾಡಿದಾಗ ಅಂಬಲಿ ಔಷಧಿ ರೂಪ ಪಡೆಯುತ್ತದೆ ಎಂಬುದು ನಂಬಿಕೆ.ಇನ್ನು ಭಕ್ತರು ದೇವಿಗೆ ಹರಕೆ ಹೇಳಿ ಸಂಕಲ್ಪ ಮಾಡಿಕೊಂಡು ಐದು ವಾರದಲ್ಲಿ ಹರಕೆ ಈಡೇರುತ್ತದೆ. ಆಗ ಭಕ್ತರು ದೀಡನಮಸ್ಕಾರ ಉರುಳು ಸೇವೆ ಮಾಡೋದ ದಾಸೋಹ ದೇವಸ್ಥಾನಕ್ಕೆ ವಿವಿಧ ಕಾಣಿಕೆ ನೀಡಿ ದೇವಿಗೆ ಕೃತಾರ್ಥರಾಗ್ತಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ