Bagalkote DC: ಬರಕ್ಕೆ ತತ್ತರಿಸಿರುವ ಬಾಗಲಕೋಟೆ, ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ನಿರಂತರ ನೀರು ಪೋಲು, ಸಿಬ್ಬಂದಿ ಬೇಜವಾಬ್ದಾರಿ

ಇದು ಇಂದು ನಿನ್ನೆಯದಲ್ಲ ಕಳೆದ ಎರಡು ಮೂರು ತಿಂಗಳಿಂದಲೂ ಇದೆ ರೀತಿ ನಿತ್ಯವೂ ಈ ನಳದಿಂದ ನೀರು ಹರಿಯುತ್ತಿದ್ದು, ಇದನ್ನ ಕನಿಷ್ಠ ಪಕ್ಷ ದುರಸ್ತಿ ಮಾಡುವಂತ ಕೆಲಸವನ್ನು ಜಿಲ್ಲಾಡಳಿತ ಭವನದ ಸಿಬ್ಬಂದಿ ಮಾಡಿಲ್ಲ. ಜಿಲ್ಲಾಡಳಿತ ಭವನದ ಸಿಬ್ಬಂದಿ ಪ್ರತಿನಿತ್ಯ ಕೂಡ ಇದೆ ಶೌಚಾಲಯ ಬಳಸುತ್ತಾರೆ‌. ಇದೇ ನಲ್ಲಿಯಲ್ಲಿ ಕೈ ತೊಳೆದು ಹೋಗ್ತಾರೆ. ಆದರೆ

Bagalkote DC: ಬರಕ್ಕೆ ತತ್ತರಿಸಿರುವ ಬಾಗಲಕೋಟೆ, ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ನಿರಂತರ ನೀರು ಪೋಲು, ಸಿಬ್ಬಂದಿ ಬೇಜವಾಬ್ದಾರಿ
ಬಾಗಲಕೋಟೆ ಬರ ಪೀಡಿತ, ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ನೀರು ಪೋಲು, ಸಿಬ್ಬಂದಿ ಬೇಜವಾಬ್ದಾರಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on: Nov 02, 2023 | 5:08 PM

ಬಾಗಲಕೋಟೆ ಜಿಲ್ಲೆ ಬರಪೀಡಿತ (drought) ಜಿಲ್ಲೆಯಾಗಿದ್ದು, ರೈತರು ಸೇರಿದಂತೆ ಎಲ್ಲ ವರ್ಗದ ಜನರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಕೂಡ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ನದಿ ಕೆರೆ ಹಳ್ಳಕೊಳ್ಳ ಎಲ್ಲ ಜಲಮೂಲಗಳು ಖಾಲಿ ಖಾಲಿಯಾಗಿದ್ದು, ಹನಿ ನೀರಿಗೂ ಪರಿದಾಡುವ ಸ್ಥಿತಿ ಇನ್ನೇನು ಕೆಲವೇ ದಿನಗಳಲ್ಲಿ ನಿರ್ಮಾಣವಾಗಲಿದೆ. ಮೇಲಾಗಿ ಎಷ್ಟೋ ಎಕರೆ ಪ್ರದೇಶದಲ್ಲಿ ಬೆಳೆಗಳು ಒಣಗಿ ಹಾಳಾಗುತ್ತಿದೆ. ರೈತರು ಟ್ಯಾಂಕರ್ ಗಳ ಮೂಲಕ ನೀರುಣಿಸುತ್ತಾ, ಬೆಳೆ ರಕ್ಷಣೆ ಮಾಡುತ್ತಿದ್ದಾರೆ. ಈಗಾಗಲೇ ಆದೆಷ್ಟೊ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಜನರು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆ ಭೀಕರವಾಗಿರುವಾಗ ಬಾಗಲಕೋಟೆ ಜಿಲ್ಲಾಡಳಿತ ಬರ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದೆಲ್ಲ ಹೇಳುತ್ತಿದೆ. ಆದರೆ ಜಿಲ್ಲಾಧಿಕಾರಿ (Bagalkote DC) ಕಚೇರಿಯಲ್ಲಿ ನೀರು ಪೋಲಾಗುತ್ತಿರೋದನ್ನು ಗಮನಿಸಿಲ್ಲ.

ಒಂದು ಕಡೆ ಮುಂಗಾರು ಮಳೆಯಿಲ್ಲದೇ ರೈತರು ನೀರಿಗಾಗಿ ಪರದಾಡುತ್ತಿದ್ದಾರೆ .ಜನಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಯ ಅದೊಂದು ಸ್ಥಳದಲ್ಲಿ ನಲ್ಲಿ ನೀರು 24 ತಾಸು ಬೇಕಾಬಿಟ್ಟಿಯಾಗಿ ಹರಿಯುತ್ತಿರುವುದು ಕಂಡುಬಂದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವಂತ ಪುರುಷರ ಶೌಚಾಲಯದಲ್ಲಿ ಈ ಮಟ್ಟಿಗೆ ನೀರು ನಿರಂತರವಾಗಿ ಹರಿದು ಪೋಲಾಗುತ್ತದೆ.ಶೌಚಾಲಯದಲ್ಲಿ ಕೈ ತೊಳೆಯುವ ಸಿಂಕ್ ನ ನಲ್ಲಿ ನೀರು 24 ತಾಸು ಹೀಗೆಯೇ ವೇಸ್ಟ್ ಆಗಿ ಹರಿಯುತ್ತಿದೆ. ನಲ್ಲಿ ದುರಸ್ತಿಗೆ ಬಂದರೂ ರಿಪೇರಿ ಮಾಡಿಸಿಲ್ಲ.ಬದಲಾಗಿ ನಲ್ಲಿ ಮೇಲೊಂದು ಕಲ್ಲಿಟ್ಟಿದ್ದಾರೆ.ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ‌.

ಇದು ಇಂದು ನಿನ್ನೆಯದಲ್ಲ ಕಳೆದ ಎರಡು ಮೂರು ತಿಂಗಳಿಂದಲೂ ಇದೆ ರೀತಿ ನಿತ್ಯವೂ ಈ ನಳದಿಂದ ನೀರು ಹರಿಯುತ್ತಿದ್ದು, ಇದನ್ನ ಕನಿಷ್ಠ ಪಕ್ಷ ದುರಸ್ತಿ ಮಾಡುವಂತ ಕೆಲಸವನ್ನು ಜಿಲ್ಲಾಡಳಿತ ಭವನದ ಸಿಬ್ಬಂದಿ ಮಾಡಿಲ್ಲ. ಜಿಲ್ಲಾಡಳಿತ ಭವನದ ಸಿಬ್ಬಂದಿ ಪ್ರತಿನಿತ್ಯ ಕೂಡ ಇದೆ ಶೌಚಾಲಯ ಬಳಸುತ್ತಾರೆ‌. ಇದೇ ನಲ್ಲಿಯಲ್ಲಿ ಕೈ ತೊಳೆದು ಹೋಗ್ತಾರೆ.

ಆದರೆ ಎರಡು ತಿಂಗಳಿಂದ ಇದೆ ರೀತಿ ಸಮಸ್ಯೆ ಇದ್ದರೂ ಚಿಲ್ಲರೆ ಹಣದಲ್ಲಿ ರಿಪೇರಿ ಆಗುವ ಈ ಕೆಲಸವನ್ನು ಚೆಲ್ಲರೆ ಹಣ ಕೊಟ್ಟು ರಿಪೇರಿ ಮಾಡಿಸಲು ಜಿಲ್ಲಾಡಳಿತ ಭವನ ಸಿಬ್ಬಂದಿ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜಿಲ್ಲಾಡಳಿತ ಸಿಬ್ಬಂದಿಗಳ ಇಂಥ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಜಿಲ್ಲಾಡಳಿತ ಭವನದಲ್ಲೇ ಇಷ್ಟೊಂದು ನೀರು ನಿರಂತರವಾಗಿ ಪೋಲಾಗುತ್ತಿದೆ. ಆದರೂ ಕೂಡ ನಲ್ಲಿ ದುರಸ್ತಿ ಮಾಡುವಂತ ಕಾರ್ಯಕ್ಕೆ ಮುಂದಾಗಿಲ್ಲ‌. ಜಿಲ್ಲಾಡಳಿತ ಭವನದ ಸಮಸ್ಯೆನೇ ಅವರಿಗೆ ಸರಿ ಮಾಡುವುದಕ್ಕೆ ಆಗುವುದಿಲ್ಲ ಇನ್ನು ಜನರ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಾರೆ ಎಂದು ಪ್ರಶ್ನೆ ಕಾಡುತ್ತಿದೆ. ಕೂಡಲೇ ಇದನ್ನು ಸರಿ ಮಾಡಬೇಕು ಸರಿ ಮಾಡಿ ನೀರು ಹಾಳಾಗುವುದನ್ನು ತಪ್ಪಿಸಬೇಕು ಎಂದು ಆಗ್ರಹ ಮಾಡಿದರು.

ಒಟ್ಟಿನಲ್ಲಿ ಬರಗಾಲದ ಈ ವೇಳೆ ಹನಿ ನೀರು ಕೂಡ ಮಹತ್ವವಾಗಿದೆ. ಆದರೆ ಇಂತಹ ಸ್ಥಿತಿಯಲ್ಲಿ ಬರದ ಬಗ್ಗೆ ಕ್ರಮ ಕೈಗೊಳ್ಳುವ ಡಿಸಿ ಕಚೇರಿ ಒಳಗೆ ಇಷ್ಟೊಂದು ನೀರು ಹಾಳು ಮಾಡುತ್ತಿರೋದು ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ