ಬಾಗಲಕೋಟೆ: ಜಿಲ್ಲಾ ವೈದ್ಯಾಧಿಕಾರಿ ಖುರ್ಚಿ‌ಗಾಗಿ ಮತ್ತೆ ಕಿತ್ತಾಟ -ಅಳಿಯನ ಮೇಲೆ ಮತ್ತೊಮ್ಮೆ ಪ್ರೀತಿ ತೋರಿದರಾ ಹೆಚ್ ವೈ ಮೇಟಿ?

Congress MLA HY Mati: ಈ ಮಧ್ಯೆ, ಸದ್ಯದ ಬೆಳವಣಿಗೆ ಮತ್ತು ಈ ಹಿಂದಿನ ವಿದ್ಯಮಾನಗಳನ್ನು ಗಮನಿಸಿದವರು ಹೆಚ್ ವೈ ಮೇಟಿ ಮತ್ತೊಮ್ಮೆ ಅಳಿಯನ ಮೇಲೆ ಪ್ರೀತಿ ತೋರಿದರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆರು ವರ್ಷದ ಹಿಂದೆ ಮೇಟಿ ಶಾಸಕರಾಗಿದ್ದಾಗ ಯರಗಲ್ ಇದೇ ಬಾಗಲಕೋಟೆ ಡಿಹೆಚ್ ಒ ಆಗಿ ಕಾರ್ಯನಿರ್ವಹಿಸಿದ್ದರು. ಆಗಲೂ ತಮ್ಮ ವರ್ಗಾವಣೆಯಾದಾಗ ಸ್ಟೆ ತಂದಿದ್ದರು. ಆಗ ಡಿಹೆಚ್ ಒ ಆಗಿ ಬಂದಿದ್ದ ಜಗದೀಶ್ ನುಚ್ಚಿನ ವಿರುದ್ದ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದರು ಇದೇ ಡಾ. ಯರಗಲ್. ಆಗ ಜಗದೀಶ್ ನುಚ್ಚಿನ ಗೆ ಖುರ್ಚಿ ಬಿಡದೆ ಸತಾಯಿಸಿದ್ದರು. ಆಗಲೂ ಯರಗಲ್‌ ಹಾಗೂ ಜಗದೀಶ್ ‌ನುಚ್ಚಿನ ಮಧ್ಯೆ ಖುರ್ಚಿ ಕಿತ್ತಾಟ ನಡೆದಿತ್ತು.

ಬಾಗಲಕೋಟೆ: ಜಿಲ್ಲಾ ವೈದ್ಯಾಧಿಕಾರಿ ಖುರ್ಚಿ‌ಗಾಗಿ ಮತ್ತೆ ಕಿತ್ತಾಟ -ಅಳಿಯನ ಮೇಲೆ ಮತ್ತೊಮ್ಮೆ ಪ್ರೀತಿ ತೋರಿದರಾ ಹೆಚ್ ವೈ ಮೇಟಿ?
ಬಾಗಲಕೋಟೆ: ಜಿಲ್ಲಾ ವೈದ್ಯಾಧಿಕಾರಿ ಖುರ್ಚಿ‌ಗಾಗಿ ಮತ್ತೆ ಕಿತ್ತಾಟ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on:Aug 21, 2023 | 12:06 PM

ಬಾಗಲಕೋಟೆ, ಆಗಸ್ಟ್​ 21: ಜಿಲ್ಲಾ ವೈದ್ಯಾಧಿಕಾರಿ (ಡಿಹೆಚ್​​ಒ) ಖುರ್ಚಿ‌ಗಾಗಿ ಕಿತ್ತಾಟ, ಹೈಡ್ರಾಮಾ ನಡೆದಿದೆ. ಈ ಪ್ರಹಸನದಲ್ಲಿ ಹೆಚ್ ವೈ ಮೇಟಿ ತಮ್ಮ ಅಳಿಯನ ಮೇಲೆ ಪ್ರೀತಿ ತೋರಿದರಾ ಎಂಬ ಅನುಮಾನ ಕಾಡತೊಡಗಿದೆ. ಬಾಗಲಕೋಟೆ (Bagalkote) ಡಿಹೆಚ್​​ಒ (District Health Officer -DHO) ಕಚೇರಿಯಲ್ಲಿಯೇ ಈ ಹೈಡ್ರಾಮಾ ನಡೆದಿದ್ದು, ಬಾಗಲಕೋಟೆ ಕಾಂಗ್ರೆಸ್​ ಶಾಸಕ‌ ಹೆಚ್ ವೈ ಮೇಟಿ (Congress MLA HY Meti) ಅಳಿಯ (Son in Law) ಡಾ ರಾಜಕುಮಾರ ಯರಗಲ್ ಹಾಗೂ ಡಾ ಜಯಶ್ರಿ ಎಮ್ಮಿ ಮಧ್ಯೆ ನೇರಾನೇರ ಕಿತ್ತಾಟ ನಡೆದಿದೆ.

ಡಾ. ರಾಜಕುಮಾರ ಯರಗಲ್ ಅವರು ಬಾಗಲಕೋಟೆ ಡಿಹೆಚ್​​ಒ ನೇಮಕ ಆದೇಶ ಹಿಡಿದು ಬಾಗಲಕೋಟೆ ಕಚೇರಿಗೆ ಬಂದಿದ್ದಾರೆ. ಆದರೆ ಅದಕ್ಕೆ, ಈಗಾಗಲೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಡಾ ಜಯಶ್ರಿ ಎಮ್ಮಿ ಕೆಎಟಿ ಯಿಂದ ತಡೆಯಾಜ್ಞೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಕಚೇರಿಯಲ್ಲಿ ವಾಗ್ವಾದ ನಡೆಸಿದ್ದಾರೆ. ಹಾಜರಾತಿ ಹಾಕಲು ಮುಂದಾದ ಜಯಶ್ರೀ ಎಮ್ಮಿ ಅವರಿಗೆ ಅವಕಾಶ ನೀಡಿಲ್ಲ. ರಾಜಕುಮಾರ ಯರಗಲ್ ಹಾಜರಾತಿ ಪುಸ್ತಕ‌ವನ್ನು ಕಸಿದುಕೊಂಡಿದ್ದಾರೆ. ಇದ ಕಂಡು ಡಿಹೆಚ್ ಒ ಕಚೇರಿಯಲ್ಲಿ ಜಯಶ್ರಿ ಎಮ್ಮಿ ಕಣ್ಣೀರು ಹಾಕಿದ್ದಾರೆ.

ನಾನು ಸರಕಾರದ ಆದೇಶದ ಪ್ರಕಾರ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ರಾಜಕುಮಾರ ಯರಗಲ್ ವಾದ ಮುಂದಿಟ್ಟಿದ್ದಾರೆ. ನಾನು ಕೆಎಟಿಯಿಂದ ಸ್ಟೆ ತಂದಿದ್ದೇನೆ ಎಂದು ಜಯಶ್ರೀ ಎಮ್ಮಿ ಪ್ರತಿ ವಾದ ಮಾಡಿದ್ದಾರೆ. ಕಚೇರಿಯಲ್ಲಿ ಇಬ್ಬರಿಗೂ ವಾಗ್ವಾದ ನಡೆದಿದೆ. ಜಯಶ್ರಿ ಎಮ್ಮಿ ಇದುವರೆಗೂ ಬಾಗಲಕೋಟೆ ಡಿಹೆಚ್ ಒ ಆಗಿದ್ದವರು. ರಾಜಕುಮಾರ ಯರಗಲ್ ವಿಜಯಪುರ ಡಿಹೆಚ್ ಒ ಹುದ್ದೆಯಿಂದ ಬಾಗಲಕೋಟೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ. ಆದರೆ ವಿಜಯಪುರ ಡಿಹೆಚ್ ಒ ಹುದ್ದೆಯಿಂದ ರಿಲೀವ್ ಲೆಟರ್ ಪಡೆಯದೆ, ಬಾಗಲಕೋಟೆ ಜಿಪಂ ಸಿಇಒ ಅವರಿಂದ ಮೊಮೆಂಟ್ ಆರ್ಡರ್ ಪಡೆಯದೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ನೀವು (ರಾಜಕುಮಾರ ಯರಗಲ್) ರಿಲೀವ್ ಲೆಟರ್ ಕೊಡದೆ ನಿಯಮಾನುಸಾರ ಅಧಿಕಾರವಹಿಸಿಕೊಂಡಿಲ್ಲ ಎಂದು ಜಯಶ್ರೀ ಎಮ್ಮಿ ವಾದಕ್ಕೆ ಇಳಿದಿದ್ದಾರೆ. ನಾನು ಸರಕಾರಕ್ಕೆ ಎಲ್ಲ ರಿಲೀವ್ ಲೆಟರ್ ಕಳಿಸಿದ್ದೇನೆ. ಪ್ರಿನ್ಸಿಪಾಲ್ ಸೆಕ್ರೆಟರಿಗೆ ಎಲ್ಲ ಕಳಿಸಿದ್ದೇನೆ ಎಂದು ವಾದ ಮಾಡುತ್ತಿದ್ದಾರೆ ಯರಗಲ್. ಸರಕಾರದಿಂದ ಆದೇಶ ಪಡೆದುಕೊಂಡು ಬನ್ನಿ ಎಂದು ಯರಗಲ್ ಜಯಶ್ರೀಗೆ ತಿರುಗೇಟು ನಿಡಿದ್ದಾರೆ.

ಈ ಮಧ್ಯೆ, ಸದ್ಯದ ಬೆಳವಣಿಗೆ ಮತ್ತು ಈ ಹಿಂದಿನ ವಿದ್ಯಮಾನಗಳನ್ನು ಗಮನಿಸಿದವರು ಹೆಚ್ ವೈ ಮೇಟಿ ಮತ್ತೊಮ್ಮೆ ಅಳಿಯನ ಮೇಲೆ ಪ್ರೀತಿ ತೋರಿದರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆರು ವರ್ಷದ ಹಿಂದೆ ಮೇಟಿ ಶಾಸಕರಾಗಿದ್ದಾಗ ಯರಗಲ್ ಇದೇ ಬಾಗಲಕೋಟೆ ಡಿಹೆಚ್ ಒ ಆಗಿ ಕಾರ್ಯನಿರ್ವಹಿಸಿದ್ದರು. ಆಗಲೂ ತಮ್ಮ ವರ್ಗಾವಣೆಯಾದಾಗ ಸ್ಟೆ ತಂದಿದ್ದರು. ಆಗ ಡಿಹೆಚ್ ಒ ಆಗಿ ಬಂದಿದ್ದ ಜಗದೀಶ್ ನುಚ್ಚಿನ ವಿರುದ್ದ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದರು ಇದೇ ಡಾ. ಯರಗಲ್. ಆಗ ಜಗದೀಶ್ ನುಚ್ಚಿನ ಗೆ ಖುರ್ಚಿ ಬಿಡದೆ ಸತಾಯಿಸಿದ್ದರು. ಆಗಲೂ ಯರಗಲ್‌ ಹಾಗೂ ಜಗದೀಶ್ ‌ನುಚ್ಚಿನ ಮಧ್ಯೆ ಖುರ್ಚಿ ಕಿತ್ತಾಟ ನಡೆದಿತ್ತು.

ಅದಕ್ಕೂ ಹಿಂದೆ ಡಾ. ಯರಗಲ್ ಬಾಗಲಕೋಟೆ ಡಿಹೆಚ್ ಒ ಆದಾಗ ಸಿಬ್ಬಂದಿ‌ ನೇಮಕಾತಿ ಆಕ್ರಮದಲ್ಲಿ ನಡೆದಿತ್ತು. ಹಣದ ಡೀಲಿಂಗ್ ನಲ್ಲಿ ಟಿವಿ 9 ರಹಸ್ಯ ಕಾರ್ಯಾಚರಣೆಯಲ್ಲಿ ರಾಜಕುಮಾರ ಯರಗಲ್‌ ಅತ್ಯಾಪ್ತರ ಮೂಲಕ ಸಿಬ್ಬಂದಿ ನೇಮಕಾತಿಗಾಗಿ ಹಣ ಪಡೆಯುವ ಬಣ್ಣ ಬಯಲಾಗಿತ್ತು. ನಂತರ ರಾಜಕುಮಾರ ಯರಗಲ್ ಬಾಗಲಕೋಟೆಯಿಂದ ವರ್ಗಾವಣೆಯಾಗಿದ್ದರು.

ನಂತರ ಕೊಪ್ಪಳ, ವಿಜಯಪುರದಲ್ಲಿ ಡಿಹೆಚ್ ಒ ಆಗಿ ಕೆಲಸ‌ ಮಾಡಿದ್ದಾರೆ. ಇದೀಗ ಮಾವ, ಮೇಟಿ ಶಾಸಕರಾಗುತ್ತಿದ್ದಂತೆ ಮತ್ತೆ ಬಾಗಲಕೋಟೆ ಡಿಹೆಚ್ ಒ ಆಗಿ ಬಂದಿದ್ದಾರೆ ರಾಜಕುಮಾರ ಯರಗಲ್!

ಡಿಹೆಚ್ಓ ಕಚೇರಿಗೆ ದೌಡಾಯಿಸಿದ ಪೊಲೀಸರು!

ಬಾಗಲಕೋಟೆ ಡಿಹೆಚ್ಓ ಅಧಿಕಾರಕ್ಕೆ ಕಿತ್ತಾಟ ಪ್ರಹಸನದಲ್ಲಿ ಡಿಹೆಚ್ಓ ಕಚೇರಿಗೆ ಪೊಲೀಸರು ಎಂಟ್ರಿ‌ ಕೊಟ್ಟಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಇಬ್ಬರೂ ಅಧಿಕಾರಿಗಳಿಂದ ಪೊಲೀಸರಿಗೆ ಕರೆ ಹೋಗಿದೆ. ಡಾ: ಜಯಶ್ರೀ ಎಮ್ಮಿ ಅವರು 112ಗೆ ಕರೆ ಮಾಡಿದ್ದಾರೆ. ಅದಾದ ತಕ್ಷಣ ಡಾ. ರಾಜಕುಮಾರ್ ಎರಗಲ್ ಸಿಪಿಐಗೆ ಕರೆ ಮಾಡಿದ್ದಾರೆ. ಒಬ್ಬರು ಪಿಎಸ್ ಐ ಒಬ್ಬರು ಎಎಸ್ ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಡಿಹೆಚ್ಓ ಕಚೇರಿಗೆ ದೌಡಾಯಿಸಿದ್ದಾರೆ.

ಬಾಗಲಕೋಟೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 am, Mon, 21 August 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?