ಬಾಗಲಕೋಟೆ: ಅಂಧ ಪತ್ನಿಗೆ ಊಟ, ನೀರು ನೀಡದೆ ಪತಿಯಿಂದ ವಿಕೃತಿ ತೋರಿದ ಘಟನೆ ಬಾಗಲಕೋಟೆ ನಗರದ ವಾಜಪೇಯಿ ಕಾಲೋನಿಯಲ್ಲಿ ನಡೆದಿದೆ. ಪತಿ ಮಲ್ಲೇಶ್ ಷಹಾಪುರನಿಂದ ಪತ್ನಿ ವಾಣಿಗೆ ಹಿಂಸೆ ಆರೋಪ ಕೇಳಿಬಂದಿದೆ. ಬಿಪಿ ಮತ್ತು ಶುಗರ್ನಿಂದ ಬಳಲುವ ಪತ್ನಿಗೆ ಮೆಡಿಸಿನ್ ಕೂಡ ಇಲ್ಲ. ಹಿಂದೊಮ್ಮೆ ನದಿ ನಾಲೆಗೆ ಪತಿ ಮಲ್ಲೇಶ್ ಪತ್ನಿಯನ್ನು ನೂಕಿದ್ದಾಗ ಪತ್ನಿ ಒಂದು ಕಣ್ಣು ಕಳೆದುಕೊಂಡಿದ್ದಳು ಎಂದು ಹೇಳಲಾಗಿದೆ. ಬಿಪಿ ಶುಗರ್ಗೆ ಔಷಧಿ ಸಿಗದೆ ಮತ್ತೊಂದು ಕಣ್ಣಿಗೂ ಹಾನಿ ಆಗಿದೆ. ಪತಿಯ ವಿರುದ್ಧ ಮನಬಂದಂತೆ ಹಲ್ಲೆ ಮಾಡಿ ಮೃಗೀಯ ವರ್ತನೆ ಆರೋಪ ಕೇಳಿಬಂದಿದೆ. ಪತಿಯಿಂದ ಜೀವನಾಂಶ ಕೊಡಿಸುವಂತೆ ಪತ್ನಿ ವಾಣಿ ಮನವಿ ಮಾಡಿದ್ದಾರೆ.
ಬಾಗಲಕೋಟೆ ನಗರದ ವಾಜಪೇಯಿ ಕಾಲೋನಿಯಲ್ಲಿ ಘಟನೆ ನಡೆದಿದೆ. ಮಲ್ಲೇಶ್ ಷಹಾಪುರ ಎಂಬ ವ್ಯಕ್ತಿಯಿಂದ ಈ ದುಷ್ಕೃತ್ಯ ಆಗುತ್ತಿರುವ ಮಾಹಿತಿ ಕೇಳಿಬಂದಿದೆ. ಪತ್ನಿ ವಾಣಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಗಂಡನ ಕಿರುಕುಳ, ಊಟ, ನೀರು ನೀಡದೆ ಕಿರುಕುಳವನ್ನು ಹೇಳಿ ಪತ್ನಿ ಕಣ್ಣೀರು ಹಾಕಿದ್ದಾರೆ. ನನ್ನ ಜೀವಂತ ಶವ ಮಾಡಿದ್ದಾನೆ, ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಪತಿಗೆ ವಾಣಿ ಸೇರಿ ಮೂವರು ಪತ್ನಿಯರು ಇದ್ದಾರೆ. ಇಬ್ಬರು ಪತ್ನಿಯರಿಗೆ ಮೋಸ ಮಾಡಿದ್ದಾನೆ. ಈಗ ಮಲ್ಲೇಶ್ ಷಹಾಪುರ ಮೂರನೆ ಮದುವೆಯಾಗಿದ್ದಾನೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿಕ ಕೆಬಿ ಕ್ರಾಸ್ ಮೂಲದ ವಾಣಿ ಎಂಬವರನ್ನು ಮದುವೆ ಆಗಿದ್ದಾನೆ. 2015 ರಲ್ಲಿ ವಾಣಿ ಮದುವೆಯಾಗಿರುವ ಮಲ್ಲೇಶ್ ಈ ಪತ್ನಿಗೂ ಹಿಂಸೆ ನೀಡಿದ್ದಾನೆ. ಮಲ್ಲೇಶ್ ಹೇರ್ ಕಟಿಂಗ್ ಸಲೂನ್ ಮಾಲೀಕ ಆಗಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.
ಮಂಗಳೂರು: 7 ತಿಂಗಳ ಬಳಿಕ ಕೊಲೆ ಆರೋಪಿ ಬಂಧನ
ಮಂಗಳೂರಿನಲ್ಲಿ ಅಪರಾಧ ನಡೆದು 7 ತಿಂಗಳ ಬಳಿಕ ಆರೋಪಿಯ ಬಂಧನವಾಗಿದೆ. ಒಡಿಶಾ ಮೂಲದ ಪ್ರದೀಪ್ ಲಕಾರ್ ಬಂಧಿಸಲಾಗಿದೆ. ಮಂಗಳೂರು ರೈಲ್ವೆ ಠಾಣೆ ಪೊಲೀಸರಿಂದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಫೆಬ್ರವರಿ 18 ರಂದು ಮೈನುಲ್ ಹಕ್ ಬರ್ಬಯಾ ಹತ್ಯೆ ಆಗಿತ್ತು. ಮಂಗಳೂರಿನ ಗೂಡ್‌ಶೆಡ್ ಯಾರ್ಡ್‌ನಲ್ಲಿ ಕೊಲೆ ನಡೆದಿತ್ತು. ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ.
ಇದನ್ನೂ ಓದಿ: Crime News: ಮೊಬೈಲ್ ಟವರ್ಗಳಿಂದ ಚಿಪ್ ಕದಿಯುತ್ತಿದ್ದ ವ್ಯಕ್ತಿ ಬಂಧನ
ಇದನ್ನೂ ಓದಿ: Bengaluru Crime: ಮಾರಕಾಸ್ತ್ರಗಳಿಂದ ಹೊಡೆದು ಬೈಕ್ನಲ್ಲಿ ತೆರಳುತ್ತಿದ್ದ ರೌಡಿ ಶೀಟರ್ ಹತ್ಯೆ