AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಮೊಬೈಲ್ ಟವರ್​ಗಳಿಂದ ಚಿಪ್ ಕದಿಯುತ್ತಿದ್ದ ವ್ಯಕ್ತಿ ಬಂಧನ

Bengaluru News: ಕೊರೊನಾ ಕಾಲದಲ್ಲಿ ಆತನನ್ನು ಕಂಪನಿಯಿಂದ ಗೇಟ್ ಪಾಸ್ ನೀಡಲಾಗಿತ್ತು. ಕೆಲಸದಿಂದ ಆಚೆ ಹಾಕಿದ ಕಂಪನಿಯಿಂದಲೇ ಕಳ್ಳತನ ಮಾಡಿದ್ದ. ಕಳೆದ ಆರು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ ಗಂಗಾಧರ್ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ.

Crime News: ಮೊಬೈಲ್ ಟವರ್​ಗಳಿಂದ ಚಿಪ್ ಕದಿಯುತ್ತಿದ್ದ ವ್ಯಕ್ತಿ ಬಂಧನ
ಬಂಧಿತ ವ್ಯಕ್ತಿ
TV9 Web
| Edited By: |

Updated on:Oct 04, 2021 | 3:23 PM

Share

ಬೆಂಗಳೂರು: ಮೊಬೈಲ್​ ಟವರ್​ಗಳಲ್ಲಿ ಇರುವ ಚಿಪ್​ ಕದಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ಪೀಣ್ಯ ಪೊಲೀಸರಿಂದ ಗಂಗಾಧರ್​ ಎಂಬಾತನನ್ನು ಬಂಧಿಸಲಾಗಿದೆ. 25 ಲಕ್ಷ ರೂಪಾಯಿ ಮೌಲ್ಯದ 19 ಮೊಬೈಲ್ ಟವರ್ ಚಿಪ್ ವಶಕ್ಕೆ ಪಡೆಯಲಾಗಿದೆ. ಖಾಸಗಿ ಮೊಬೈಲ್ ಕಂಪೆನಿಯಲ್ಲಿ ಸೈಟ್ ಇಂಜಿನಿಯರ್ ಆಗಿದ್ದ ಗಂಗಾಧರ್ ಕದ್ದ ಚಿಪ್​ಗಳನ್ನು ನೂರಿನ್ನೂರು ರೂಪಾಯಿಗೆ ಮಾರುತ್ತಿದ್ದ ಎಂದು ತಿಳಿದುಬಂದಿದೆ.

ಗಂಗಾಧರ್ ಮೊಬೈಲ್ ಟವರ್​ಗಳಿಗೆ ಹೋಗಿ ಬೆಲೆಬಾಳೋ ಚಿಪ್ ಗಳನ್ನ ಕಳ್ಳತನ ಮಾಡ್ತಿದ್ದ. ಈ ಬಗ್ಗೆ ಮೊಬೈಲ್ ಕಂಪೆನಿಯವರು ಪೀಣ್ಯ ಠಾಣೆಗೆ ದೂರನ್ನು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಗಂಗಾಧರ್ ಬಂಧನವಾಗಿದೆ. ಐಟಿಐ ಓದಿದವನು ಎಲೆಕ್ಟ್ರಾನಿಕ್ ವಸ್ತುಗಳ ಮಾರಿ ಹಣ ಮಾಡಲು ತಂತ್ರ ಹೂಡಿದ್ದ. ಕೊರೊನಾ ಕಾಲದಲ್ಲಿ ಆತನನ್ನು ಕಂಪನಿಯಿಂದ ಗೇಟ್ ಪಾಸ್ ನೀಡಲಾಗಿತ್ತು. ಕೆಲಸದಿಂದ ಆಚೆ ಹಾಕಿದ ಕಂಪನಿಯಿಂದಲೇ ಕಳ್ಳತನ ಮಾಡಿದ್ದ. ಕಳೆದ ಆರು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ ಗಂಗಾಧರ್ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ.

ಟೆಲಿಕಾಂ ಕಂಪನಿಯ ಟವರ್​ಗಳ ಮ್ಯಾನೇಜ್ ಕೆಲಸ ನಿರ್ವಹಿಸುವ ಕಂಪನಿಯಲ್ಲಿ ಕೆಲಸಕ್ಕಿದ್ದ ಗಂಗಾಧರ್ ಟವರ್​ಗಳ ಸಂಪೂರ್ಣ ಮಾಹಿತಿ ಹೊಂದಿದ್ದ. ಕೆಲಸ ಕಳೆದುಕೊಂಡ ಬಳಿಕ ಹಣವಿಲ್ಲದೇ ಪರದಾಟ ಪಟ್ಟಿದ್ದ. ಬಳಿಕ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಪೀಣ್ಯ, ಕೊಣನಕುಂಟೆ, ಪುಲಕೇಶಿನಗರ ಸೇರಿದಂತೆ ಕನಕಪುರದಲ್ಲೂ ಚಿಪ್ ಕಳ್ಳತನ ಮಾಡಿದ್ದ.

ಕದ್ದ ಮಾಲಿನ ಮೌಲ್ಯ ಗೊತ್ತಿದ್ದು ಸರಿಯಾದ ಮೌಲ್ಯಕ್ಕೆ ಮಾರಲಾಗದೆ ಪರದಾಟ ಪಟ್ಟಿದ್ದ. ಬಳಿಕ ಗುಜಿರಿ ಅಂಗಡಿಗೆ ಐನೂರು ರೂಪಾಯಿಗೆ ಮಾರಿದ್ದ ಎಂದು ಕೂಡ ತಿಳಿದುಬಂದಿದೆ. ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಒಟ್ಟು 9 ಪ್ರಕರಣ ಪತ್ತೆಯಾಗಿದೆ. ಪೀಣ್ಯ ಪೊಲೀಸರು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Bengaluru Crime: ಮಾರಕಾಸ್ತ್ರಗಳಿಂದ ಹೊಡೆದು ಬೈಕ್​ನಲ್ಲಿ ತೆರಳುತ್ತಿದ್ದ ರೌಡಿ ಶೀಟರ್​​ ಹತ್ಯೆ

ಇದನ್ನೂ ಓದಿ: ನೆಲಮಂಗಲ: ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ಯತ್ನಿಸಿ ವಿಫಲ ಪ್ರಯತ್ನ, ಪಾರ್ಕ್ ನಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಅರೆಸ್ಟ್

Published On - 3:17 pm, Mon, 4 October 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ