ಬಾಗಲಕೋಟೆಯಲ್ಲಿ ಸಿದ್ಧವಾಗಿದೆ ವಿಶೇಷ ಎಲೆಕ್ಟ್ರಿಕ್ ಬೈಕ್; ಹೇಗಿದೆ ನೋಡಿ

ಲಾಕ್​ಡೌನ್​ನಲ್ಲಿ ಉದ್ಯೋಗ ಇಲ್ಲದೆ ಸುಮ್ಮನಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಮಹಮ್ಮದ್ ಇಕ್ಬಾಲ್ ಸೇರಿ ವಿಶೇಷ ಎಲೆಕ್ಟ್ರಿಕ್ ಬೈಕ್ ಸಿದ್ಧಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸಿದ್ಧವಾಗಿದೆ ವಿಶೇಷ ಎಲೆಕ್ಟ್ರಿಕ್ ಬೈಕ್; ಹೇಗಿದೆ ನೋಡಿ
ಎಲೆಕ್ಟ್ರಿಕ್ ಬೈಕ್
Edited By:

Updated on: Sep 30, 2021 | 10:16 AM

ಬಾಗಲಕೋಟೆ: ಕೊರೊನಾ ಲಾಕ್​ಡೌನ್​ನಿಂದ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೊಟ್ಟೆ ಪಾಡಿಗೆ ಪರ್ಯಾಯ ಕೆಲಸಗಳನ್ನೂ ಹುಡುಕಿಕೊಂಡಿದ್ದಾರೆ. ಈ ನಡುವೆ ಕೆಲಸವಿಲ್ಲದೆ ಹಲವರಿಗೆ ಕಾಲ ಕಳೆಯುವುದು ಕಷ್ಟವಾಗುತ್ತಿತ್ತು. ಅದರಂತೆ ಜಿಲ್ಲೆಯ ಬಾದಾಮಿ ಪಟ್ಟಣದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಮಹಮ್ಮದ್ ಇಕ್ಬಾಲ್​ಗೆ ಕೆಲಸವಿಲ್ಲದೆ ಲಾಕ್​ಡೌನ್​ನಲ್ಲಿ ನಷ್ಟ ಅನುಭವಿಸುತ್ತಿದ್ದರು. ಈ ನಡುವೆ ಅವರಿಗೆ ಏನಾದರೂ ಹೊಸ ಪ್ರಯೋಗ ಮಾಡಬೇಕು ಅಂತ ಅನಿಸಿದೆ. ಆಗ ಅವರ ತಲೆಗೆ ಹೊಳೆದಿದ್ದು ಎಲೆಕ್ಟ್ರಿಕ್ ಬೈಕ್.

ಲಾಕ್​ಡೌನ್​ನಲ್ಲಿ ಉದ್ಯೋಗ ಇಲ್ಲದೆ ಸುಮ್ಮನಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮಂಜುನಾಥ ಜಲಗೇರಿ ಮತ್ತು ಎಲೆಕ್ಟ್ರಿಷಿಯನ್ ಮಹಮ್ಮದ್ ಇಕ್ಬಾಲ್ ಸೇರಿ ವಿಶೇಷ ಎಲೆಕ್ಟ್ರಿಕ್ ಬೈಕ್ ಸಿದ್ಧಪಡಿಸಿದ್ದಾರೆ. ಐಟಿಐ ಇಲೆಕ್ಟ್ರಿಷಿಯನ್ ಓದಿರುವ ಮಹಮ್ಮದ್ ಇಕ್ಬಾಲ್ ಸದ್ಯ ಎಲೆಕ್ಟ್ರಾನಿಕ್ಸ್ ಶಾಪ್ ಇಟ್ಟುಕೊಂಡಿದ್ದಾರೆ. ಆದರೆ ಲಾಕ್​ಡೌನ್​ನಲ್ಲಿ ಉದ್ಯೋಗ ಇಲ್ಲದಂತಾಗಿತ್ತು. ಇನ್ನು ಮದುವೆ, ಸಮಾರಂಭಗಳಿಗೆ ಕಡಿವಾಣ ಬಿದ್ದಿದ್ದರಿಂದ ಪತ್ರಿಕೆ ಪ್ರಿಂಟಿಂಗ್​ಗೆ ಹೊಡೆತ ಬಿದ್ದಿತ್ತು.

ಈ ವೇಳೆ ಇಬ್ಬರು ಸೇರಿ ಎಲೆಕ್ಟ್ರಿಕ್ ಬೈಕ್​ನ ಸಿದ್ಧಪಡಿಸಿದ್ದಾರೆ. ಬೈಕ್ ತಯಾರಿಸಲು ಮಂಜುನಾಥ ಜಲಗೇರಿ ಬಂಡವಾಳ ಹಾಕಿದ್ದಾರೆ. 40 ರಿಂದ 50 ಸಾವಿರ ರೂ. ಖರ್ಚು ಮಾಡಿ ಬೈಕ್ ತಯಾರಿಸಿದ್ದಾರೆ. ಮೂರು ಯುನಿಟ್ ವಿದ್ಯುತ್ ಹೊಂದಿರುವ ನಾಲ್ಕು ಬ್ಯಾಟರಿ ಇವೆ. 12 ವೋಲ್ಟ್​ನಂತೆ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಹದಿನೈದು ರೂಪಾಯಿ ವಿದ್ಯುತ್​ಗೆ 120 ಕಿಲೋಮೀಟರ್ ಬೈಕ್ ಓಡುತ್ತದೆ ಅಂತ ಹೇಳಲಾಗುತ್ತಿದೆ.

ಎಕ್ಸೆಲ್ ಬೈಕ್ ಹಾಗೂ ಕನ್ವರ್ಟರ್, ಎಲೆಕ್ಟ್ರಿಕ್ ಮೋಟರ್​ನಿಂದ ಈ ಬೈಕ್​ನ ಸಿದ್ಧಪಡಿಸಿದ್ದು, 35 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ. ರಿವರ್ಸ್ ಬರುವಂತೆ ಬೈಕ್ ತಯಾರಿ ಮಾಡಲಾಗಿದೆ. ಸದ್ಯ ಈ ಬೈಕ್ ನೋಡಲು ಜನರು ಬರುತ್ತಿದ್ದಾರೆ.

ಇದನ್ನೂ ಓದಿ

ಅಂದು ಅಂಕಲ್​ ಅಂತ ಹೀಯಾಳಿಸಿದ್ರು, ಈಗ ಛೋಟಾ ಭೀಮ್​ ಅಂದ್ರು: ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಭಾಸ್

ಭವಾನಿಪುರದಲ್ಲಿ ಮತಯಂತ್ರ ಸ್ಥಗಿತಗೊಳಿಸಿದ ಟಿಎಂಸಿ ಶಾಸಕ; ಬಿಜೆಪಿ ಅಭ್ಯರ್ಥಿಯಿಂದ ಆರೋಪ

(Two have prepared a special electric bike in Bagalkot)

Published On - 9:42 am, Thu, 30 September 21