ಬಾಗಲಕೋಟೆ: ಗುಳೇದಗುಡ್ಡದ ಇಲಾಳ ಮೇಳದಿಂದ ಹೊರಬಿದ್ದ ವರ್ಷದ ಮಳೆ, ಬೆಳೆ ಫಲ ಭವಿಷ್ಯ

ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಪ್ರತಿ ವರ್ಷ ಯುಗಾದಿ ಪಾಂಡ್ಯ ದಿನದಂದು ಮಳೆ ಬೆಳೆ ಸೇರಿದಂತೆ ರಾಜಕೀಯ ಹಾಗೂ ವ್ಯಾಪಾರ ವಹಿವಾಟು ಬಗ್ಗೆ ಭವಿಷ್ಯ ಹೇಳುವ ವಿಶೇಷ ಪದ್ದತಿಯನ್ನು ಆಚರಿಸಿಕೊಂಡು‌ ಬಂದಿದ್ದು, ಈ ಬಾರಿಯ ಭವಿಷ್ಯ ಹೀಗಿದೆ.

ಬಾಗಲಕೋಟೆ: ಗುಳೇದಗುಡ್ಡದ ಇಲಾಳ ಮೇಳದಿಂದ ಹೊರಬಿದ್ದ ವರ್ಷದ ಮಳೆ, ಬೆಳೆ ಫಲ ಭವಿಷ್ಯ
ಬಾಗಲಕೋಟೆಯ ಇಲಾಳ ಮೇಳದಿಂದ ಹೊರಬಿದ್ದ ಫಲ ಭವಿಷ್ಯ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 22, 2023 | 1:38 PM

ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಪ್ರತಿ ವರ್ಷ ಯುಗಾದಿ ಪಾಂಡ್ಯ ದಿನದಂದು ಮಳೆ ಬೆಳೆ ಸೇರಿದಂತೆ ರಾಜಕೀಯ ಹಾಗೂ ವ್ಯಾಪಾರ ವಹಿವಾಟು ಬಗ್ಗೆ ಭವಿಷ್ಯ ಹೇಳುವ ವಿಶೇಷ ಪದ್ದತಿಯನ್ನು ಆಚರಿಸಿಕೊಂಡು‌ ಬರಲಾಗುತ್ತಿದೆ. ಹಲವು ವರ್ಷಗಳಿಂದ ಇಂತಹ ಪದ್ದತಿಯನ್ನು ಮಾಡಿಕೊಂಡು ಬಂದಿದ್ದು, ಯುಗಾದಿ ದಿನದ ಭವಿಷ್ಯ ಕೇಳಲು ಬೆಳಿಗ್ಗೆ ಸಾವಿರಾರು ಜನರು ಒಂದೆಡೆ ಸೇರಿರುತ್ತಾರೆ. ಈ ಗುಳೇದಗುಡ್ಡದ ಇಲಾಳ ಮೇಳದಿಂದ ಮಳೆ, ಬೆಳೆ ಭವಿಷ್ಯ ನುಡಿಯುವ ವಾಡಿಕೆ ಹಿಂದಿನ ಕಾಲದಿಂದಲೂ ಬಂದಿದೆ. ತಲತಲಾಂತರದಿಂದ ಗುಳೇದಗುಡ್ಡದಲ್ಲಿ ನಡೆಯವ ಫಲ ಭವಿಷ್ಯವನ್ನ ಈಗ ಮಲ್ಲೇಶ್ ಗುಬ್ಬಿ ಎನ್ನುವರು ನುಡಿಯುತ್ತಿದ್ದಾರೆ.

ಪ್ರಸಕ್ತ ವರ್ಷದ ಭವಿಷ್ಯ ಹೀಗಿದೆ

ಮಾರವಾಡಿ ಬಗಿಚ್​ದಲ್ಲಿ ಯುಗಾದಿ ಪಾಡ್ಯದಂದು ನಡೆಯುವ ಈ ಫಲ ಭವಿಷ್ಯ. ಪ್ರಸಕ್ತ ವರ್ಷ 16 ಮಳೆಗಳಲ್ಲಿ 11 ಮಳೆಗಳು ಪೂರ್ಣ ಪ್ರಮಾಣದಲ್ಲಿ ಸುರಿಯಲಿವೆ ಎಂದು ಭವಿಷ್ಯ ನುಡಿಯಲಾಗಿದೆ. ಪಂಚಭೂತಗಳು ವಿಕೋಪಕ್ಕೆ ಹೋಗಲಿವೆಯಂತೆ. ಅಲ್ಲಲ್ಲಿ ಭೂಮಿ ಕುಸಿಯಲಿದ್ದು, ವಾಹನಗಳಿಗೆ ಬಹಳ ದಕ್ಕೆ ಆಗಲಿದೆಯಂತೆ. ಜೊತೆಗೆ ವಿಮಾನ ಅಪಘಾತ ಸಂಭವಿಸಲಿದೆ ಎಂದು ಎಚ್ಚರಿಸಿದ್ದಾರೆ. ಮೂರ್ನಾಲ್ಕು ರಾಜ್ಯಗಳಲ್ಲಿ ಚಂಡಮಾರುತ ಗಾಳಿ ಬೀಸಿ ತೊಂದರೆಯಾಗಲಿದ್ದು, ಗುಡುಗು, ಮಿಂಚು, ಸಿಡಿಲಿನ ಆರ್ಭಟದಿಂದ ಎರಡ್ಮೂರು ರಾಜ್ಯಗಳಲ್ಲಿ ಸಾವು ನೋವು ಉಂಟಾಗಲಿದೆ ಎನ್ನಲಾಗಿದೆ.

ಅರಣ್ಯ, ಗುಡ್ಡ, ವಿವಿಧ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸಲಿದ್ದು, ಅಗ್ನಿಯಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇನ್ನು ಹಸಿರು ಬಣ್ಣದ ವಸ್ತುಗಳು ರಾರಾಜಿಸುತ್ತವೆ. ವ್ಯಾಪಾರ ವಹಿವಾಟು ಆನಂದಭರಿತವಾಗಲಿದೆ. ಕಾಯಿಲೆಗಳು ಹೆಚ್ಚಾಗಲಿದ್ದು, ಕಾಯಿಲೆ ಬಂದವರನ್ನು ಮುಟ್ಟಿದರೆ ಸಾಕು ಮನೆ ಮಂದಿಗೆಲ್ಲ ಹರಡಲಿದೆಯಂತೆ. ನೆಗಡಿ, ಕೆಮ್ಮು, ಜ್ವರದಿಂದ ಜನರು ಬಳಲಿದ್ದಾರೆ. ಈ ವರ್ಷ ಅಕ್ಟೋಬರ್, ನವಂಬರ್, ಡಿಸೆಂಬರ್​ನಲ್ಲಿ ಇದು ಉಲ್ಬಣಗೊಳ್ಳಲಿದೆ ಎಂದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Wed, 22 March 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್