ಬಾದಾಮಿಯಲ್ಲಿ ಕಾಂಗ್ರೆಸ್​ಗೆ ಬಿಗ್ ಶಾಕ್; ಕೊನೆ ಕ್ಷಣದಲ್ಲಿ ಕೈ ಕೊಟ್ಟು ಜೆಡಿಎಸ್ ಸೇರಿದ ಡಾ ದೇವರಾಜ ಪಾಟೀಲ್

|

Updated on: Apr 16, 2023 | 1:45 PM

ನನ್ನ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವರಲ್ಲಿ ಅಭಿಪ್ರಾಯ ಸರಿ ಇರಲಿಲ್ಲ, ಮನನೊಂದು ಪಕ್ಷ ಬಿಡಬೇಕಾಯಿತು ಎಂದು ಡಾ.ದೇವರಾಜ ಪಾಟಿಲ್ ಹೇಳಿಕೊಂಡಿದ್ದಾರೆ.

ಬಾದಾಮಿಯಲ್ಲಿ ಕಾಂಗ್ರೆಸ್​ಗೆ ಬಿಗ್ ಶಾಕ್; ಕೊನೆ ಕ್ಷಣದಲ್ಲಿ ಕೈ ಕೊಟ್ಟು ಜೆಡಿಎಸ್ ಸೇರಿದ ಡಾ ದೇವರಾಜ ಪಾಟೀಲ್
ಜೆಡಿಎಸ್ ಸೇರ್ಪಡೆಯಾದ ಡಾ ದೇವರಾಜ ಪಾಟಿಲ್
Follow us on

ಬಾಗಲಕೋಟೆ: ‘2013ರಲ್ಲಿ ಬಾದಾಮಿ ಟಿಕೆಟ್ ಘೋಷಣೆಯಾಗಿ, ಕೊನೆ ಘಳಿಗೆಯಲ್ಲಿ ಕೈ ತಪ್ಪಿತ್ತು. 2018 ರಲ್ಲಿ ಟಿಕೆಟ್ ಘೋಷಣೆಯಾದ ಮೇಲೂ ಸಿದ್ದರಾಮಯ್ಯ(Siddaramaiah)ಗಾಗಿ ಟಿಕೆಟ್ ತ್ಯಾಗ ಮಾಡಿದ್ದೆ. ಈ ಬಾರಿ ಕೂಡ ನಿರೀಕ್ಷೆ ಇತ್ತು. ಆದರೆ ಟಿಕೆಟ್ ಹೆಚ್ ವೈ ಮೇಟಿ(H. Y. Meti) ಪಾಲಾಗಿದೆ ಎಂದು ಡಾ.ದೇವರಾಜ ಪಾಟೀಲ್(Dr.devaraj patil) ಹೇಳಿದರು. ‘ಇದೀಗ ತೆನೆ ಹೊರೋದು ಅನಿವಾರ್ಯ ಆಯ್ತು, ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ತ್ಯಾಗ, ಶ್ರಮ, ಸಹನೆಗೆ ಬೆಲೆ‌ ಕೊಡಲಿಲ್ಲ. ಕೆಟ್ಟ ವಿಚಾರವಾಗಿ ನಮ್ಮ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಹೆಚ್ ವೈ ಮೇಟಿ ನನ್ನ ಬಗ್ಗೆ ಮಾತಾಡಿದರು ಇದೇ ಕಾರಣಕ್ಕೆ ಅನಿವಾರ್ಯವಾಗಿ ಬೇರೆ ಪಕ್ಷ ಸೇರಬೇಕಾಯಿತು ಎಂದರು.

ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ‌ ನೀಡಿ ಜೆಡಿಎಸ್ ಸೇರ್ಪಡೆ ಕುರಿತು ಮಾತನಾಡಿದ ಡಾ. ದೇವರಾಜ ಪಾಟೀಲ್‘ ಟಿಕೆಟ್ ಸಿಗದಿದ್ದರೆ ಪಕ್ಷ ಬಿಡಬೇಕು ಎಂಬ ವಿಚಾರ ನನಗೆ ಇರಲಿಲ್ಲ. ನನ್ನ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲವರಲ್ಲಿ ಅಭಿಪ್ರಾಯ ಸರಿ ಇರಲಿಲ್ಲ. ಕೆಲವೊಂದು ವಿಚಾರಗಳನ್ನು ನನ್ನ ಪಕ್ಷದಲ್ಲಿ ಮಾತಾಡಿದ್ದಕ್ಕಾಗಿ ಮನನೊಂದು ಪಕ್ಷ ಬಿಡಬೇಕಾಯಿತು. ಬಾಗಲಕೋಟೆಯಲ್ಲಿ ಬಿಜೆಪಿ ಕಾಂಗ್ರೆಸ್ ಇಬ್ಬರ ಮಧ್ಯೆ ನಾನಿರೋದಿಲ್ಲ. ಇದು ತ್ರಿಕೋನ ಸ್ಪರ್ಧೆ ವೀರಣ್ಣ ಚರಂತಿಮಠ ‌ಸಹೋದರ‌ ಮಲ್ಲಿಕಾರ್ಜುನ ಚರಂತಿಮಠ ಕೂಡ ಪಕ್ಷೇತರರಿದ್ದಾರೆ. ಎಲ್ಲದರ ಮಧ್ಯೆ ಜನರ ತೀರ್ಮಾನ ಫೈನಲ್ ಆಗಲಿದೆ ಎಂದಿದ್ದಾರೆ.

ಇದನ್ನೂ ಓದಿ:ಒಂದು ಪಕ್ಷ ಚುನಾವಣೆ ಟಿಕೆಟ್ ಆಫರ್ ಮಾಡಿತ್ತು, ಆದರೆ ಪ್ರಸ್ತುತ ರಾಜಕೀಯ ಭೀಕರ: ನಾಗತಿಹಳ್ಳಿ ಚಂದ್ರಶೇಖರ್

‘ನನ್ನ ವಿಚಾರ ಎಲ್ಲವನ್ನು ಜನರಿಗೆ ಹೇಳ್ತಿನಿ. ಅದನ್ನು ಸ್ವೀಕರಿಸಿ ಆಶೀರ್ವಾದ ಮಾಡಿದರೆ ಅವರ ಪರವಾಗಿ ಕೆಲಸ ಮಾಡುತ್ತೆನೆ. ಕ್ಷೇತ್ರದಲ್ಲಿ ಜೆಡಿಎಸ್​ಗೆ ಅಸ್ತಿತ್ವ ಇಲ್ಲ ಅಂತಲ್ಲ. ಬಹಳಷ್ಟು ಜನರು ಹಳ್ಳಿ ಭಾಗದಲ್ಲಿ ರೈತರು ಜೆಡಿಎಸ್ ಪರವಾಗಿದ್ದಾರೆ. ಪಕ್ಷದಲ್ಲಿ ನಾಯಕರು ಈ ಕ್ಷೇತ್ರದಲ್ಲಿ ಇಲ್ಲ ಎಂದು ಸುಮ್ಮನೆ ಕೂತಿದ್ದರು. ಈಗ ಹೊಸಬರು ಬಂದಿದ್ದಾರೆ ಎಂದು ಎಲ್ಲರೂ ಬರ್ತಿದ್ದಾರೆ. ಕುಮಾರಸ್ವಾಮಿ ರೈತಪರ ಮಾಡಿದ ಕೆಲಸ ಯಾರು ಕೂಡ ಮಾಡಿಲ್ಲ ಎನ್ನುತ್ತಿದ್ದಾರೆ. ಎರಡು ಪಕ್ಷದ ಮಧ್ಯೆ ನಾನೊಬ್ಬ ಜೆಡಿಎಸ್ ಮೂಲಕ ಮತದಾರರಿಗೂ ಹೊಸ ಅವಕಾಶ ಕಲ್ಪಿಸಿದ್ದೇನೆ. ಹೊಸತನ, ಬದಲಾವಣೆ, ಸ್ವಾಭಿಮಾನ, ಉದ್ಯೋಗ, ಗ್ರಾಮೀಣ ಸಮಸ್ಯೆ ರೈತರಹಿತ ಎಲ್ಲ ವಿಚಾರ ಇಟ್ಟುಕೊಂಡು ಜನರ ಬಳಿ‌ ಮತ ಕೇಳುತ್ತೇನೆ ಎಂದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ