ಅಣ್ಣನ ಮೇಲಿನ ಸೇಡಿಗೆ ಮಗನನ್ನೇ ಬಲಿ ಪಡೆದ: 3 ವರ್ಷದ ಬಾಲಕನ ಕತ್ತು ಕೊಯ್ದ ಚಿಕ್ಕಪ್ಪ

ನಿಷ್ಕಲ್ಮಶ ಮನಸ್ಸು, ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಮೂರು ವರ್ಷ ಮಗು ಪ್ರತಿ ದಿನ ಅಂಗನವಾಡಿಗೆ ಹೋಗುತ್ತಿತ್ತು.ಅದರಂತೆ ಇಂದೂ ಸಹ ಅಂಗನವಾಡಿಗೆ ಹೋಗಿದ್ದ ಪುಟ್ಟ ಕಂದನನ್ನು ಚಿಕ್ಕಪ್ಪನೇ ಕತ್ತು ಕೊಯ್ದು ಘೋರಾತಿಘೋರವಾಗಿ, ಬರ್ಬರವಾಗಿ ಹತ್ಯೆಗೈದಿದ್ದಾನೆ. ಈ ಘೋರ ಕೃತ್ಯಕ್ಕೆ ಬಾಗಲಕೋಟೆಯ ಬೆನಕನವಾರಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅಣ್ಣ ಮೇಲಿನ ಸಿಟ್ಟಿಗೆ ಏನು ಅರೆಯದ ಪುಟ್ಟ ಮಗವಿನ ಬಲಿ ಪಡೆದುಕೊಂಡಿದ್ದಾನೆ.

ಅಣ್ಣನ ಮೇಲಿನ ಸೇಡಿಗೆ ಮಗನನ್ನೇ ಬಲಿ ಪಡೆದ: 3 ವರ್ಷದ ಬಾಲಕನ ಕತ್ತು ಕೊಯ್ದ ಚಿಕ್ಕಪ್ಪ
Madankumar. Bheemappa
Edited By:

Updated on: Jul 22, 2025 | 6:30 PM

ಬಾಗಲಕೋಟೆ, (ಜುಲೈ 22): ಅಂಗನವಾಡಿಗೆ ಹೋಗಿದ್ದ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಜೀವ ತೆಗೆದಿರುವ ಘಟನೆ ಬಾಗಲಕೋಟೆ (bagalkot) ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಅಣ್ಣ ಬೈದು ಬುದ್ಧಿವಾದ ಹೇಳಿದ್ದಕ್ಕೆ ತಮ್ಮ ಈ ಕೃತ್ಯ ಎಸಗಿದ್ದಾನೆ. ಬೆನಕನವಾಡಿ ಗ್ರಾಮದ ಮಾರುತಿ ವಾಲಿಕಾರ ಎಂಬುವರ 3 ವರ್ಷದ ಮಧುಕುಮಾರನ ಜೀವವನ್ನ ಚಿಕ್ಕಪ್ಪ ಭೀಮಪ್ಪ ತೆಗೆದಿದ್ದಾನೆ. ಬಾಲಕ ಮುಂಜಾನೆ ಎಂದಿನಂತೆ ಗ್ರಾಮದ ಅಂಗನವಾಡಿಗೆ ಹೋಗಿದ್ದ. ಎಲ್ಲರೊಂದಿಗೆ ಅಂಗನವಾಡಿಯಲ್ಲಿ ಕುಳಿತ್ತಿದ್ದ ಬಾಲಕನನ್ನ ಚಿಕ್ಕಪ್ಪ ಭೀಮಪ್ಪ ನೇರವಾಗಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ನೆಲದ ಮೇಲೆ ಮಗುವನ್ನ ಹಾಕಿ ಹರಿತವಾದ ಆಯುಧದಿಂದ ಕುತ್ತಿಗೆ ಕೊಯ್ದಿದ್ದಾನೆ. ನೋವಿನಿಂದ ಮಗು ಚೀರಾಟದಿಂದ ಕ್ಷಣಾರ್ಧದಲ್ಲಿ ಜೀವ ಬಿಟ್ಟಿದೆ.

ಇಂದು (ಜುಲೈ 22) ಬೆಳಿಗ್ಗೆ 9 ಗಂಟೆಗೆ ಮಗು ಮದುಕುಮಾರ ತಂದೆ ತಾಯಿ ಹತ್ತಿ ಹೊಲಕ್ಕೆ ಕೆಲಸಕ್ಕೆ ಹೋಗಿದ್ದರು. ಮದುಕುಮಾರ ಅಜ್ಜನ ಜೊತೆ ಅಂಗನವಾಡಿಗೆ ಹೋಗಿದ್ದ. ಖುಷಿ ಖುಷಿಯಿಂದ ಅಂಗಡಿಗೆ ಹೋಗಿ ಚಾಕಲೇಟ್ ತಿನ್ನುತ್ತಾ ಮಗು ಅಜ್ಜನ ಜೊತೆ ಅಂಗನವಾಡಿಗೆ ಹೋಗಿತ್ತು. ಆದರೆ ಅಂಗನವಾಡಿ ‌ಇನ್ನು ತೆರೆದಿರಲಿಲ್ಲ.ನಂತರ ಅಜ್ಜನ ಬಿಟ್ಟು ಸ್ನೇಹಿತರೊಂದಿಗೆ ಮದುಕುಮಾರ ಆಟವಾಡುತ್ತಿದ್ದ. ಆ ವೇಳೆ ಮದುಕುಮಾರನನ್ನು ಮನೆಗೆ ಕರೆದೊಯ್ದ ಪಾಪಿ ಭೀಮಪ್ಪ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ . ‌ಮುದ್ದಾದ ಮಗು‌ ಕಳೆದುಕೊಂಡ‌ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.

ಇದನ್ನೂ ಓದಿ: ಚಿತ್ರದುರ್ಗ: ಯುವಕನ ಜೊತೆ ಓಡಿ ಹೋದ ಮಗಳು, ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ತು ಠಾಣೆ ಎದುರೇ ತಂದೆ ಆತ್ಮಹತ್ಯೆ

ಮದುಕುಮಾರ ತಂದೆ ಮಾರುತಿ , ಮಾರುತಿ ವಾಲಿಕಾರನ ಡೊಡ್ಡಪ್ಪನ ಮಗ ಭೀಮಪ್ಪ. ಭೀಮಪ್ಪನ ತಮ್ಮನ ಪತ್ನಿ ಹಾಗೂ ಮಾರುತಿ ಪತ್ನಿ ಸಹೋದರಿಯರು.ಇಷ್ಟೊಂದು ಹತ್ತಿರದ ಸಂಬಂಧವಿದೆ. ಆದರೆ ಚಿಕ್ಕಪ್ಪನೇ ಇಂತಹ ದುಷ್ಕೃತ್ಯವೆಸಗಿ ಪೈಶಾಚಿಕತೆ ಮೆರೆದಿದ್ದಾನೆ. ಘಟನೆ ಇಂದಿಗೂ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಮೀನಗಢ ಪೊಲೀಸರು ಪಾಪಿ ಭೀಮಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸಿಟ್ಟು ಬಂತು ಕೊಲೆ ಮಾಡಿದೆ ಅಂತ ಮಾತ್ರ ಹೇಳಿದ್ದಾನೆ . ಆದರೆ ಕಳೆದ ವರ್ಷ ಭೀಮಪ್ಪ ತನ್ನ ಪತ್ನಿ ಜೊತೆ ಜಗಳವಾಡಿ ಗುಂಡುಕಲ್ಲಿನಿಂದ ಹಲ್ಲೆ ಮಾಡಿದ್ದನಂತೆ.ಆಗ ಮಗು ಮದುಕುಮಾರ ತಂದೆ ಮಾರುತಿ ಭೀಮಪ್ಪನಿಗೆ ಬೈದು ಬುದ್ದಿ ಹೇಳಿದ್ದನಂತೆ.ಅದೇ ಸೇಡಿಟ್ಟುಕೊಂಡು ಹೀಗೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಮಕ್ಕಳ‌ ಮಾರಣಹೋಮ‌ ನಡೆಯುತ್ತಿತ್ತಾ?

ಈ ಪಾಪಿಯಿಂದ ಇನ್ನು ಮೂರು ಮಕ್ಕಳ ಕೊಲೆ ನಡೆಯುತ್ತಿತ್ತಾ ಎಂಬ ಸಂಶಯವಿದೆ. ಹೌದು.. ಆಡವಾಡುತ್ತಿದ್ದ ಒಟ್ಟು ನಾಲ್ಕು ಮಕ್ಕಳನ್ನು ಭೀಮಪ್ಪ ತನ್ನ ಮನೆಗೆ ಕರೆದೊಯ್ದಿದ್ದ.ಮಕ್ಕಳನ್ನು‌ ಮನೆಯಲ್ಲಿ ಹಾಸಿಗೆ ಮೇಲೆ‌ ಮಲಗಿಸಿ ಸಾಮೂಹಿಕ ಕೊಲೆಗೆ ಮುಂದಾಗಿದ್ದ ಎಂಬ ಸಂಶಯವಿದೆ.ಮಗು ಮದುಕುಮಾರ ಕತ್ತಿಗೆ ಚಾಕು ಇರಿಯುತ್ತಲೇ ಚೀರಾಟ ಕೇಳಿ ಉಳಿದ ಮಕ್ಕಳು ಎದ್ದು ಹೊರಗೆ ಓಡಿ ಬಂದಿದ್ದಾರಂತೆ‌.ಇದನ್ನು ನೆರೆಹೊರೆಯವರು ನೋಡಿದ್ದು,ಮಗು ಮದುಕುಮಾರ ತಾಯಿ ಕೂಡ ಈ ಬಗ್ಗೆ ಹೇಳಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಎಸ್ ಪಿ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.

ಏನೂ ಅರಿಯದ ಪುಟ್ಟ ಬಾಲಕನ ಹತ್ಯೆಗೈದಿರೋ ಪಾಪಿ ಚಿಕ್ಕಪ್ಪನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ