ಲಾರಿಗೆ ಖಾಸಗಿ ಬಸ್​ ಡಿಕ್ಕಿ, ಚಿತ್ರದುರ್ದದ ಗಾಣಿಗ ಗುರುಪೀಠದ ಸ್ವಾಮೀಜಿ ಸೇರಿ ಐವರಿಗೆ ಗಾಯ

Bagalkote: ಇಳಕಲ್ ಹೊರವಲಯದಲ್ಲಿ ಖಾಸಗಿ ವಿಆರ್​​ಎಲ್ ಬಸ್ ಲಾರಿಯೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಗಾಣಿಗ ಗುರುಪೀಠದ ಬಸವಪ್ರಭು ಸ್ವಾಮೀಜಿ ಮತ್ತು ಬಸ್ ಚಾಲಕ ಸೇರಿದಂತೆ ಐವರಿಗೆ ಗಾಯಗಳಾಗಿವೆ.

ಲಾರಿಗೆ ಖಾಸಗಿ ಬಸ್​ ಡಿಕ್ಕಿ, ಚಿತ್ರದುರ್ದದ ಗಾಣಿಗ ಗುರುಪೀಠದ ಸ್ವಾಮೀಜಿ ಸೇರಿ ಐವರಿಗೆ ಗಾಯ
ಲಾರಿಗೆ ಖಾಸಗಿ ಬಸ್​ ಡಿಕ್ಕಿ, ಚಿತ್ರದುರ್ದದ ಗಾಣಿಗ ಗುರುಪೀಠದ ಸ್ವಾಮೀಜಿ ಸೇರಿ ಐವರಿಗೆ ಗಾಯ
Updated By: ಸಾಧು ಶ್ರೀನಾಥ್​

Updated on: Jul 19, 2022 | 2:26 PM

ಬಾಗಲಕೋಟೆ: ಇಳಕಲ್ ಹೊರವಲಯದಲ್ಲಿ ಖಾಸಗಿ ವಿಆರ್​​ಎಲ್ ಬಸ್ ಲಾರಿಯೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಗಾಣಿಗ ಗುರುಪೀಠದ ಬಸವಪ್ರಭು ಸ್ವಾಮೀಜಿ ಮತ್ತು ಬಸ್ ಚಾಲಕ ಸೇರಿದಂತೆ ಐವರಿಗೆ ಗಾಯಗಳಾಗಿವೆ. ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ ಮೂರು ಗಂಟೆಗೆ ಘಟನೆ ನಡೆದಿದ್ದು ಚಿತ್ರದುರ್ದದ ಗಾಣಿಗ ಗುರುಪೀಠದ ಸ್ವಾಮೀಜಿ ಅವರನ್ನು ಬೆಂಗಳೂರು ಗ್ಲೋಬಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಳಿದಂತೆ ಚಾಲಕ ಸೇರಿ ನಾಲ್ವರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.