ಬಾಗಲಕೋಟೆ: ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್ ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ (Accident) ವ್ಯಕ್ತಿ ಸಾವು ಪ್ರಕರಣ ಸಂಬಂಧ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಸುಂದರ ಪತ್ನಿಯೇ ಹಂತಕಿ. ವ್ಯಕ್ತಿಯನ್ನು ಹಂತಕಿ ಪತ್ನಿ ಹಾಗೂ ಆಕೆಯ ಲವರ್ ಕೊಂದಿದ್ದು, ಅಕ್ರಮ ಸಂಬಂಧ ಹೊಂದಿರುವ ಲವರ್ ಜೊತೆ ಸೇರಿ ಗಂಡನಿಗೆ ಮಸಣದ ಹಾದಿ ತೋರಿಸಿದ್ದಾಳೆ. ಪ್ರವೀಣ ಸೇಬಣ್ಣವರ(30)ಕೊಲೆಯಾದ ವ್ಯಕ್ತಿ. ಲವರ್ ಜೊತೆ ಸೇರಿ ಗಂಡನಿಗೆ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದು, ಕಾರಿನಲ್ಲಿ ಬಂದ ಪತ್ನಿ ಹಾಗೂ ಲವರ್ ಪತಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಆಗ ಮರಣವನ್ನಪ್ಪದ ಪತಿ ಪತ್ನಿಗೆ ಕರೆ ಮಾಡಿ ನನಗೆ ಅಪಘಾತವಾಗಿದೆ ಎಂದಿದ್ದ. ಪುನಃ ಕಾರು ತಿರುವಿಕೊಂಡು ಬಂದು ಡಿಕ್ಕಿ ಹೊಡೆಸಿ ಗಂಡನ ಕೊಲೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮಹಿಳಾ ಪ್ರೊಫೆಸರ್ ನೇಣಿಗೆ ಶರಣು
ಕೊಲೆ ಖಚಿತವಾದ ಮೇಲೆ ಪತ್ನಿ ಹಾಗೂ ಲವರ್ ಎಸ್ಕೇಪ್ ಆಗಿದ್ದರು. ಪತ್ನಿ ನಿತ್ಯಾ ಹಾಗೂ ಲವರ್ ರಾಘವೇಂದ್ರ ಅವರಿಂದ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಬೈಕ್ ಬಿದ್ದ ಜಾಗ, ಶವದ ಮೇಲಿನ ಗಾಯ ಕೊಲೆ ಶಂಕೆ ಮೂಡಿಸಿತ್ತು. ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ನಿ ಮೇಲೆ ಸಂಶಯದಿಂದ ವಿಚಾರಣೆ ವೇಳೆ ಪತ್ನಿ ಬಣ್ಣ ಬಯಲಾಗಿದೆ.
ಬೆಂಗಳೂರಿನಲ್ಲಿ ಯುವಕ ಜವಾದ್ ಹತ್ಯೆ ಪ್ರಕರಣ: ಅಕ್ರಮ ಸಂಬಂಧವೇ ಹತ್ಯೆಗೆ ಕಾರಣವಾಯಿತೆ?
ಬೆಂಗಳೂರು: ಯುವಕ ಜವಾದ್ ಬರ್ಬರ ಹತ್ಯೆ ಪ್ರಕರಣ ಹಿನ್ನೆಲೆ ಮಹಿಳೆ ಜೊತೆಗಿನ ಅಕ್ರಮ ಸಂಬಂಧವೇ ಜವಾದ್ ಹತ್ಯೆಗೆ ಕಾರಣ ಎನ್ನಲಾಗಿದೆ. ಜವಾದ್ ಕೊಲೆ ಮಾಡಿದ್ದು ಬೇರೆಯಾರು ಅಲ್ಲ ಸಿಮ್ರಾನ್ಳ ಪತಿ ಜೀಷಾನ್. ಕೊಲೆಯಾದ ಜವಾದ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಜವಾದ್, ಈ ಹಿಂದೆ ಇದೇ ವಿಚಾರಕ್ಕೆ ಶಿವಾಜಿನಗರ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿತ್ತು. ಮಹಿಳೆಯ ಪತಿ ಜೀಷಾನ್ ಕೂಡ ಹಲವು ಬಾರಿ ಜವಾದ್ಗೆ ವಾರ್ನಿಂಗ್ ಕೊಟ್ಟಿದ್ದ. ಹೀಗಿದ್ದರೂ ಜವಾದ್ ಜೀಷಾನ್ ಮನೆಗೆ ಎಂಟ್ರಿ ಕೊಟ್ಟಿದ್ದ. ಬೆಳಿಗ್ಗೆ 9:30ರ ಸುಮಾರಿಗೆ ಶಾರ್ಪ್ ಆದ ಕತ್ತರಿ ಹಿಡಿದು ಜವಾದ್ ಹೋಗಿದ್ದು, ಜೀಷಾನ್ ನನ್ನ ಕೊಲೆ ಮಾಡೋದಾಗಿ ಬೆದರಿಸಿದ್ದ. ಈ ವೇಳೆ ಜವಾದ್ನ ಕೈಯಲ್ಲಿದ್ದ ಕತ್ತರಿಯನ್ನ ತೆಗೆದುಕೊಂಡು ಜೀಷಾನ್ ಜವಾದ್ನ ಕತ್ತಿನ ಭಾಗಕ್ಕೆ ಇರಿದಿದ್ದ. ಗಂಭೀರವಾಗಿ ಗಾಯಗೊಂಡ ಜವಾದ್ ತಾನೇ ಸ್ವತಃ ಎಚ್ಬಿ ಎಸ್ ಆಸ್ಪತ್ರೆಗೆ ಓಡಿದ್ದ. ಆದರೆ ಆಸ್ಪತ್ರೆ ಆವರಣದಲ್ಲೇ ತೀವ್ರ ರಕ್ತಸ್ರಾವದಿಂದ ಜವಾದ್ ಸಾವನ್ನಪ್ಪಿದ್ದ. ಜೀಷಾನ್ ನನ್ನ ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.
Published On - 7:38 am, Tue, 19 July 22