ಅವರಿಬ್ಬರೂ ಕುಚುಕು ಗೆಳೆಯರಾಗಿದ್ದರೂ ಒಬ್ಬ ಮತ್ತೊಬ್ಬನನ್ನು ಸಾಯಿಸಿದ, ಕಾರಣ ಎನು ಗೊತ್ತಾ?
ಮಂಗಳವಾರ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೊರಟಿದ್ದ ಈಶ್ವರ್‌ನನ್ನು ಕರೆಪ್ಪ ಅಡ್ಡಗಟ್ಟಿದ್ದ. ಕಂಕನವಾಡಿ ಕ್ರಾಸ್ ಬಳಿಯ ಈ ಪಾನ್ ಶಾಪ್ ಬಳಿ ಜಗಳ ತೆಗೆದಿದ್ದ. ನೋಡ ನೋಡ್ತಿದ್ದಂತೆ ಮುಖ, ಕಣ್ಣು, ಎದೆ ಹೊಟ್ಟೆ ಹೀಗೆ ದೇಹದ 19 ಕಡೆ ಚಾಕುನಿಂದ ಇರಿದಿದ್ದ
ಅವರಿಬ್ಬರದ್ದು ಒಂದೇ ಊರು, ಒಂದೇ ಏರಿಯಾ,….ಒಂದೇ ಸಮುದಾಯ. ಕುಚುಕು ಗೆಳೆಯರಾಗಿದ್ದ ( friendship) ಇಬ್ಬರೂ ಒಂದೇ ಟೀಂ ಕಟ್ಟಿಕೊಂಡು ಕೆಲಸಕ್ಕೂ ಹೋಗ್ತಿದ್ರು. ಆದ್ರೆ ಅದೇ ಗೆಳೆಯನ ಮೇಲೆಯೇ ಸ್ನೇಹಿತ ರೊಚ್ಚಿಗೆದ್ದಿದ್ದ. ನೋಡ ನೋಡುತ್ತಲೇ ಗೆಳೆಯನ ಪ್ರಾಣವನ್ನೇ ತೆಗೆದಿದ್ದ. ಮಡುಗಟ್ಟಿದ ದುಃಖ… ಮನೆಯಲ್ಲಿ ಸ್ಮಶಾನ ಮೌನ.. ಅಷ್ಟೇ ಅಲ್ಲ ರಸ್ತೆ ಬಳಿ ಇದ್ದ ಅದೊಂದು ಶಾಪ್ ಕೂಡಾ ಲಾಕ್ ಆಗಿತ್ತು.. ಎಲ್ಲಾ ಕಡೆಯೂ ಮೌನದ ಚಿತ್ರಣವೇ ಕಾಣ್ತಿತ್ತು. ಅಷ್ಟಕ್ಕೂ ಈ ಮನೆಯವರ ನೋವಿಗೆ, ದುಃಖಕ್ಕೆ ಕಾರಣವಾಗಿರೋದೆ ಮನೆ ಮಗನ ಬರ್ಬರ ಹತ್ಯೆ (murder).
ಸ್ನೇಹಿತನಿಂದಲೇ ಗೆಳೆಯನ ಬರ್ಬರ ಹತ್ಯೆ..! 19 ಬಾರಿ ಚಾಕುವಿನಿಂದ ಇರಿದು ಕೊಲೆ..! ಈಶ್ವರ್ ಹನಗಂಡಿ ಮತ್ತು ಕರೆಪ್ಪ ಕಡಕೋಳ.. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದವರು (jamkhandi taluk bagalkot). ಒಂದೇ ಊರಿನ.. ಒಂದೇ ಸಮುದಾಯದ ಇಬ್ಬರೂ ಸ್ನೇಹಿತರಾಗಿದ್ದರು. ಮನೆಗಳು ಕೂಡಾ ಅಕ್ಕಪಕ್ಕ ಇದ್ದಿದ್ರಿಂದ ಇಬ್ಬರ ನಡುವೆ ಒಳ್ಳೆ ಸ್ನೇಹ ಕೂಡಾ ಇತ್ತು. ಊರಲ್ಲಿ 18 ಜನರ ಟೀಂ ಕಟ್ಟಿಕೊಂಡಿದ್ದ ಇಬ್ಬರೂ ಕಬ್ಬು ಕಟಾವು ಕೆಲಸಕ್ಕೆ ಹೋಗ್ತಿದ್ದರು. ಹೀಗಿರುವಾಗ್ಲೇ ಈಶ್ವರ್ ಕೊಲೆಯಾಗಿದೆ. ಕಂಕನವಾಡಿ ಕ್ರಾಸ್ ಬಳಿ ಹೆಣ ಬಿದ್ದಿದೆ.. ಅಷ್ಟಕ್ಕೂ ಇಲ್ಲಿ ಈಶ್ವರ್‌ನ ಕತೆ ಮುಗಿಸಿದ್ದ ಬೇರೆ ಯಾರೋ ಅಲ್ಲ.. ಅದೇ ಕರೆಪ್ಪ ಕಡಕೋಳ್.
ಯೆಸ್… ಮಂಗಳವಾರ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೊರಟಿದ್ದ ಈಶ್ವರ್‌ನನ್ನು ಕರೆಪ್ಪ ಅಡ್ಡಗಟ್ಟಿದ್ದ. ಕಂಕನವಾಡಿ ಕ್ರಾಸ್ ಬಳಿಯ ಈ ಪಾನ್ ಶಾಪ್ ಬಳಿ ಜಗಳ ತೆಗೆದಿದ್ದ. ನೋಡ ನೋಡ್ತಿದ್ದಂತೆ ಮುಖ, ಕಣ್ಣು, ಎದೆ ಹೊಟ್ಟೆ ಹೀಗೆ ದೇಹದ 19 ಕಡೆ ಚಾಕುನಿಂದ ಇರಿದಿದ್ದ. ಸ್ಥಳಕ್ಕೆ ಬಂದ ಸಂಬಂಧಿಕರು ಈಶ್ವರ್‌ನನ್ನ ಜಮಖಂಡಿಯ ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ.
ಸ್ನೇಹಿತನ ಕೊಲೆ ಹಿಂದೆ ಇದೆಯಾ ಅಕ್ರಮ ಸಂಬಂಧ..? ಅಷ್ಟಕ್ಕೂ ಮೊನ್ನೆ ಇಬ್ಬರ ನಡುವೆ ಜಗಳ ಶುರುವಾಗಿದ್ದು ಹೆಣ್ಣಿನ ವಿಚಾರಕ್ಕೆ. ನನ್ನ ಹೆಂಡ್ತಿಯನ್ನ ಪದೇ ಪದೇ ಚುಡಾಯಿಸ್ತೀಯಾ ಅಂತಾ ಕರೆಪ್ಪ ಜಗಳ ತೆಗೆದಿದ್ದ. ಇದೇ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿತ್ತು. ಮೂಲಗಳ ಪ್ರಕಾರ ಈಶ್ವರ್ ಹಾಗೂ ಕರೆಪ್ಪನ ಪತ್ನಿ ಮಧ್ಯೆ ಅನೈತಿಕ ಸಂಬಂಧ ಇರೋ ಸಂಶಯ ಇದೆ. ಇದು ಕರೆಪ್ಪನಿಗೂ ಗೊತ್ತಾಗಿತ್ತು. ಹೀಗಾಗಿಯೇ ಈಶ್ವರ್‌ನ ಮೇಲೆ ಕಿಡಿಕಾರುತ್ತಿದ್ದ ಕರೆಪ್ಪ, ಮೊನ್ನೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಅಟ್ಯಾಕ್ ಮಾಡಿದ್ದ. ಚಾಕು ಸಮೇತ ಬಂದವನು 19 ಬಾರಿ ಇರಿದು ಕೊಂದಿದ್ದ.
ಗೆಳೆಯನನ್ನ ಕೊಂದವನು ಜೈಲು ಸೇರಿದ್ರೆ, ಗೆಳೆಯನ ಪತ್ನಿ ಮೇಲೆ ಕಣ್ ಹಾಕಿದ್ದವನು ಯಮನ ಪಾದ ಸೇರಿದ್ದಾನೆ. ಮರ್ಡರ್ ಸಂಬಂಧ ಕೇಸ್ ದಾಖಲಿಸಿಕೊಂಡಿರೋ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಕರೆಪ್ಪ ಕಡಕೋಳನನ್ನು ಬಂಧಿಸಿದ್ದಾರೆ. -ರವಿ ಮೂಕಿ, ಟಿವಿ9, ಬಾಗಲಕೋಟೆ