Laughing Bhikkhus: ಆ ಮೂರು ಬಿಕ್ಷುಗಳು ಸದಾ ನಗುತ್ತಿದ್ದರು! ಒಬ್ಬ ಸತ್ತಾಗ, ಉಳಿದಿಬ್ಬರು ಜಗತ್ತಿಗೆ ನೀಡಿದ ಸಂದೇಶ ಏನು ಗೊತ್ತಾ!?

Bhikkhus Laughing Philosophy: ನಾನು ಯಾವತ್ತೂ ಕೊಳೆಯಾಗಿಲ್ಲ. ನನ್ನ ದೇಹ, ಮನಸ್ಸು ನಿರ್ಮಲವಾಗಿದೆ, ಜೀವನ ಪೂರ್ತಿ ನಗುನಗುತ್ತಲೇ ಇದ್ದೆ. ಆದ್ದರಿಂದ ನನಗೆ ವಸ್ತ್ರ ಬದಲಾಯಿಸುವ ಅವಶ್ಯಕತೆ ಇಲ್ಲ ಎಂದಿದ್ದ. ಇಷ್ಟೇ ಅಲ್ಲದೆ ಅಲ್ಲಿ ನೆರೆದವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಪಟಾಕಿ ಶಬ್ದದ ಸಂಭ್ರಮವನ್ನು ಕಂಡ ಜನರು...

Laughing Bhikkhus: ಆ ಮೂರು ಬಿಕ್ಷುಗಳು ಸದಾ ನಗುತ್ತಿದ್ದರು! ಒಬ್ಬ ಸತ್ತಾಗ, ಉಳಿದಿಬ್ಬರು ಜಗತ್ತಿಗೆ ನೀಡಿದ ಸಂದೇಶ ಏನು ಗೊತ್ತಾ!?
ಆ ಮೂರು ಬಿಕ್ಷುಗಳು ಸದಾ ನಗುತ್ತಿದ್ದರು! ಒಬ್ಬ ಸತ್ತಾಗ, ಉಳಿದಿಬ್ಬರು ಜಗತ್ತಿಗೆ ನೀಡಿದ ಸಂದೇಶ ಏನು ಗೊತ್ತಾ!?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 17, 2022 | 6:48 AM

ಹಿಂದಿನ ಚೀನಾದಲ್ಲಿ ಮೂರು ಜನ ನಗಿಸುವ ಬುದ್ಧರಿದ್ದರು. ಇವರನ್ನು ಜನರು ‘ಮೂರು ಜನ ನಗುವ ಬುದ್ಧರು’ ಎಂದು ಕರೆಯುತ್ತಿದ್ದರು. ಇವರ ಹೆಸರಾಗಲಿ, ಊರಾಗಲಿ, ಯಾರಿಗೂ ಗೊತ್ತಿಲ್ಲ. ಏಕೆಂದರೆ ಇವರು ಯಾವತ್ತೂ ತಮ್ಮ ಬಗ್ಗೆ ಯಾರೊಂದಿಗೂ ಏನನ್ನೂ ಹೇಳಿಲ್ಲ. ಏನು ಕೇಳಿದರೂ ಅವರ ನಗುವೆ ಉತ್ತರವಾಗಿತ್ತು. ಈ ಮೂರು ಜನ ಮಾಡುತ್ತಿದ್ದ ಕೆಲಸ ನಗುವುದು. ಯಾವುದೇ ಉಪದೇಶವಾಗಲಿ (motivational Story), ಮಾತಾಗಲಿ ಆಗಿರದೆ ಕೇವಲ ನಗು ಮಾತ್ರವಾಗಿತ್ತು. ನಿತ್ಯವೂ ಅವರು ಊರಿಂದೂರಿಗೆ ಸಂಚರಿಸುತ್ತಿದ್ದರು. ಊರಿನ ಮುಖ್ಯ ಭಾಗದಲ್ಲಿ ನಿಂತು ಜೋರು, ಜೋರಾಗಿ ನಗುತ್ತಿದ್ದರು. ಮೊದಮೊದಲು ಊರಿನವರು ಇವರನ್ನು ಹುಚ್ಚರಿರಬೇಕು ಎಂದುಕೊಂಡರು. ಏಕೆಂದರೆ ನೀವು ಯಾರು ಎಂದರೆ ನಗುತ್ತಿದ್ದರು, ಹೆಸರು, ಊರು ಕೇಳಿದರೆ ಅದಕ್ಕೂ ನಗುತ್ತಿದ್ದರು. ಮೊದಮೊದಲು ಜನ ಈ ಮೂರು ಜನರ ಬಗ್ಗೆ ಏನೇನೋ ಅಂದುಕೊಂಡಿದ್ದರು, ಅದ್ಯಾವುದೂ ಅಲ್ಲ ಎಂಬುದು ನಂತರ ತಿಳಿಯಿತು. ಇವರು ಯಾರಿಗೂ ತೊಂದರೆ ಕೊಡುವವರಲ್ಲ ತಮ್ಮಷ್ಟಕ್ಕೆ ನಕ್ಕು ಊರವರನ್ನು ನಗಿಸಿ ತಮ್ಮ ಪಾಡಿಗೆ ಹೊರಡುತ್ತಾರೆ ಎಂದುಕೊಂಡರು (Laughing Bhikkhus Philosophy).

ಇವರು ಬರುವ ವಿಷಯ ತಿಳಿಯುತ್ತಿದ್ದಂತೆಯೇ ಊರವರೆಲ್ಲ ಬಹಳ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಅವರ ಶುದ್ಧ, ನಿಷ್ಕಲ್ಮಶ, ಪ್ರೀತಿಯ ನಗುವಿನಿಂದ ತಮ್ಮ ದುಃಖ-ದುಮ್ಮಾನಗಳನ್ನು ಮರೆಯುತ್ತಿದ್ದರು. ಇವರು ನಗುತ್ತಿದ್ದರೆ, ಅವರೊಂದಿಗೆ ಇವರು, ಇವರೊಂದಿಗೆ ಅವರು, ಹೀಗೆ ಊರಿಗೆ ಊರೇ ನಗುವಿನ ಅಲೆಯಲ್ಲಿ ತೇಲಿರುವಾಗ ಮೂರು ಜನ ನಗುವ ಭಿಕ್ಷುಗಳು ಮುಂದಿನ ಊರಿಗೆ ಹೊರಡುತ್ತಿದ್ದರು. ಊರ ಜನರು ಇವರನ್ನು ಬಹಳ ಸಂತೋಷದಿಂದ ಬೀಳ್ಕೊಡುತ್ತಿದ್ದರು. ಊರಿಂದೂರಿಗೆ ಹೋಗಿ ಅಲ್ಲೆಲ್ಲ ನಗುವಿನ ವಾತಾವರಣವನ್ನು ಸೃಷ್ಟಿಸಿ ಎಲ್ಲರ ದುಃಖವನ್ನು ದೂರ ಮಾಡಿ ಸಂತೋಷದ ಹೊನಲನ್ನು ಹರಿಸುತ್ತಿದ್ದರು. ಕ್ರಮೇಣ ಈ ನಗುವಿನ ಬುದ್ದರು ಚೀನಾದ ತುಂಬಾ ಪ್ರಖ್ಯಾತರಾದರು. ಚೀನಾದ ಜನ ಇವರನ್ನು ತುಂಬಾ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು.

ಈ ನಗುವಿನ ಜ್ಞಾನವನ್ನು ಇವರಿಗಿಂತ ಹಿಂದಾಗಲಿ, ಇವರ ನಂತರವಾಗಲೀ, ಯಾರೋ ಪ್ರಚಾರ ಮಾಡಲಿಲ್ಲ. ಜೀವನವೇ ಒಂದು ನಗು ಇದು ಬಿಟ್ಟರೆ ಜೀವನದಲ್ಲಿ ಇನ್ನೇನು ಇಲ್ಲ ಎಂಬುದೇ ಇವರ ನಗುವಿನ ಸಾರವಾಗಿತ್ತು . ಇವರನ್ನು ನಗುವಿಗೆ ಇಂತಹದೇ ಕಾರಣವಾಗಲಿ, ಉದ್ದೇಶವಾಗಲಿ, ಇರಲಿಲ್ಲ ಜಗತ್ತನ್ನೆಲ್ಲಾ ತಿಳಿದುಕೊಂಡಿದ್ದೇವೆ, ಆಗುಹೋಗುಗಳೆಲ್ಲ ನಮಗೆ ತಿಳಿದಿದೆ, ಭಗವಂತನ ಇರುವಿಕೆಯನ್ನು ಕಂಡಿದ್ದೇವೆ ಎಂಬಂಥ ನಿಷ್ಕಲ್ಮಶವಾದ ತುಂಬು ಹೃದಯದ ನಗುವನ್ನು ಪಸರಿಸುತ್ತಿದ್ದರು. ಒಂದೇ ಒಂದು ಶಬ್ದವನ್ನು ಹೇಳದೆ ಇಡೀ ಚೀನಾವನ್ನು ನಗೆಗಡಲಲ್ಲಿ ಮುಳುಗಿಸುತ್ತಿದ್ದರು.

‘ನಾನು ಯಾವತ್ತೂ ಕೊಳೆಯಾಗಿಲ್ಲ. ನನ್ನ ದೇಹ, ಮನಸ್ಸು ನಿರ್ಮಲವಾಗಿದೆ!’ ಹೀಗೆ ಮೂರು ಜನ ನಗುವ ಭಿಕ್ಷುಗಳು ಇಡೀ ‘ಚೀನಾವನ್ನು’ ಸಂಚರಿಸಿ ನಗುವನ್ನು ಪಸರಿಸುತ್ತಲೇ ಅವರಿಗೆ ವಯಸ್ಸಾಯಿತು. ಅವರಲ್ಲಿ ಒಬ್ಬ ‘ಭಿಕ್ಷು’ ಕಾಲವಾದನು. ಇಡೀ ಊರೇ ದುಃಖದಲ್ಲಿ ಮುಳಗಿತು. ಇಷ್ಟಾಗಿಯೂ ಜನಗಳಲ್ಲಿ ಒಂದು ಕುತೂಹಲವಿತ್ತು. ಈ ಮೂರು ಭಿಕ್ಷುಗಳು ಯಾವತ್ತೂ ದುಃಖದಲ್ಲಿ ಇರುವುದನ್ನು ಯಾರೂ ನೋಡಿರಲಿಲ್ಲ. ಈ ಬಿಕ್ಷು ಮರಣ ಹೊಂದಿದ್ದರಿಂದ ಉಳಿದಿಬ್ಬರು ಭಿಕ್ಷುಗಳು ದುಃಖದಿಂದ ಅಳುತ್ತಾರೆ ಎಂದುಕೊಂಡಿದ್ದರು. ಕಾಲವಾದ ಬಿಕ್ಷುವನ್ನು ದರ್ಶನ ಮಾಡಲು ಊರಿಗೆ ಊರೇ ನೆರೆದಿತ್ತು. ಉಳಿದಿಬ್ಬರು ಬಿಕ್ಷು ಗಳು ಪಾರ್ಥಿವ ಶರೀರದ ಮುಂದೆ ಕುಳಿತು ಜೋರು ಜೋರಾಗಿ ನಗುತ್ತಿದ್ದರು.

ಅಲ್ಲಿ ಸೇರಿದ್ದ ಜನರಿಗೆ ನೋಡಿ ಆಶ್ಚರ್ಯವಾಯಿತು. ಆಗ ಅಲ್ಲಿನ ಹಿರಿಯರು ನಗುತ್ತಿದ್ದ ಭಿಕ್ಷುಗಳಿಗೆ ನಿಮ್ಮ ಜೊತೆಯಲ್ಲಿದ್ದವನು ಮರಣ ಹೊಂದಿದ್ದಾನೆ. ಈ ಸಮಯದಲ್ಲಿ ನೀವು ಈ ರೀತಿ ನಗಬಾರದು ಎಂದು ಬುದ್ದಿ ಹೇಳಿದರು. ಆಗ ಭಿಕ್ಷುಗಳು ಮೊದಲ ಬಾರಿಗೆ ಜನರೆದುರಿಗೆ ಮಾತನಾಡಿದರು. ಹೌದು ನಾವು ನಮ್ಮ ಗೆಳೆಯನು ಮರಣ ಹೊಂದಿದ್ದನ್ನು ನೋಡಿ ನಗುತ್ತೇವೆ. ಅವನು ನಮ್ಮಿಬ್ಬರಿಗಿಂತ ಮೊದಲು ಹೋಗಿ ಜಯಶಾಲಿಯಾಗಿದ್ದಾನೆ. ನಮ್ಮ ಮೂವರಲ್ಲಿ ಯಾರು ಮೊದಲು ಸಾಯುತ್ತಾರೆ ಎಂದು ಯೋಚಿಸುತ್ತಿದ್ದೆವು. ನಮ್ಮ ಸ್ನೇಹಿತ ನಮ್ಮನ್ನು ಸೋಲಿಸಿ ಗೆಲುವು ಸಾಧಿಸಿದ್ದಾನೆ. ನಾವೀಗ ನಗುತ್ತಿರುವುದು ನಮ್ಮ ಸೋಲು ಮತ್ತು ಇವನ ಗೆಲುಗಾಗಿ ನಗುತ್ತಿದ್ದೇನೆ.

ನಮ್ಮ ಮೂವರಲ್ಲಿ ಇವನು ಮೊದಲು ಹೋಗಿದ್ದಾನೆ. ಆದ್ದರಿಂದ ನಾವು ನಗುನಗುತ್ತಲೇ ಇವನಿಗೆ ವಿದಾಯವನ್ನು ಹೇಳುತ್ತೇವೆ. ಇದನ್ನು ಕೇಳಿದ ಊರಿನವರಿಗೆ ಆಶ್ಚರ್ಯವಾಯಿತು. ಅವರಿಬ್ಬರೂ ಹೇಳಿದಂತೆ ಸತ್ತವನ ಮುಖದ ಮೇಲೆ ನಗು ಮಾಸಿರಲಿಲ್ಲ. ಚೀನಾದಲ್ಲಿಯೂ ಶವಕ್ಕೆ ಸ್ನಾನ ಮಾಡಿಸಿ ಬೇರೆ ಬಟ್ಟೆ ಹಾಕುವ ಪದ್ಧತಿ ಇದೆ. ಸತ್ತ ಮೇಲೆ ನನ್ನ ಬಟ್ಟೆಯನ್ನು ತೆಗೆಯಬೇಡಿ ಎಂದು ಈ ಭಿಕ್ಷು ಹೇಳಿದ್ದನು.

ಕಾರಣವೇನೆಂದರೆ ನಾನು ಯಾವತ್ತೂ ಕೊಳೆಯಾಗಿಲ್ಲ. ನನ್ನ ದೇಹ, ಮನಸ್ಸು ನಿರ್ಮಲವಾಗಿದೆ, ಜೀವನ ಪೂರ್ತಿ ನಗುನಗುತ್ತಲೇ ಇದ್ದೆ. ಆದ್ದರಿಂದ ನನಗೆ ವಸ್ತ್ರ ಬದಲಾಯಿಸುವ ಅವಶ್ಯಕತೆ ಇಲ್ಲ ಎಂದಿದ್ದ. ಇಷ್ಟೇ ಅಲ್ಲದೆ ಅಲ್ಲಿ ನೆರೆದವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಸತ್ತ ಭಿಕ್ಷು ತಾನು ಧರಿಸಿದ ವಸ್ತ್ರದಲ್ಲಿ ಪಟಾಕಿಗಳನ್ನು ಇಟ್ಟುಕೊಂಡಿದ್ದನು. ಚಿತೆಗೆ ಅಗ್ನಿ ಸ್ಪರ್ಶಿಸಿದಾಗ ವಸ್ತ್ರದಲ್ಲಿದ್ದ ಪಟಾಕಿಗಳು ಸಿಡಿದು ಬಣ್ಣಬಣ್ಣದ ಬೆಳಕು ನಭದ ತುಂಬಾ ಹರಡಿ ಜೋರಾಗಿ ಶಬ್ದ ಮಾಡತೊಡಗಿದವು.

ಪಟಾಕಿ ಶಬ್ದದ ಸಂಭ್ರಮವನ್ನು ಕಂಡ ಜನರು… ಪಟಾಕಿ ಶಬ್ದದ ಸಂಭ್ರಮವನ್ನು ಕಂಡ ಜನರು ದುಃಖವನ್ನು ಮರೆತು ಜೋರಾಗಿ ನಗಲು ಶುರು ಮಾಡಿದರು. ಈ ರೀತಿಯಾಗಿ ಭಿಕ್ಷುವು ತನ್ನ ಸಾವಿನ ನಂತರವೂ ಜನಗಳ ಮುಖದಲ್ಲಿ ನಗುವನ್ನು ತರಿಸಿದನು. ಉಳಿದ ಇಬ್ಬರು ಭಿಕ್ಷುಗಳು, ಓ ಗೆಳೆಯ ನೀನು ಮರಣ ಹೊಂದಿದಿ. ಆದರೂ ನಿನ್ನ ನಗುವಿನಿಂದ ಮತ್ತೊಮ್ಮೆ ನಮ್ಮನ್ನು ಸೋಲಿಸಿದೆ, ನೀನು ಬಿಟ್ಟು ಹೋದ ಈ ನಗು ನಿನ್ನ ಕೊನೆಯ ನಗು. ಈ ನಗು ಜಗತ್ತಿನಲ್ಲಿ ಶಾಶ್ವತವಾಗಿರಲಿ ಎಂದು ಇಬ್ಬರು ಭಿಕ್ಷುಗಳು ಜೋರಾಗಿ ಮತ್ತಷ್ಟು ಜೋರಾಗಿ ನಗತೊಡಗಿದರು.

ಈ ನಗು ಮಮಕಾರವನ್ನು ಬಿಟ್ಟಂತಹ ನಗು ಮನಸ್ಸಿನ ಪ್ರಸನ್ನತೆಯಿಂದ ಬಂದ ನಗು, ಇದು ಸಹಜವಾಗಿ ಬಂದ ನಗು. ಹೀಗೆ ನಗುವುದು ಒಂದು ಧರ್ಮ. ಇನ್ನೊಬ್ಬರನ್ನು ನಗಿಸುವುದು ಶ್ರೇಷ್ಠ ಧರ್ಮ, ಇದಕ್ಕಿಂತ ಮಿಗಿಲಾಗಿ ಇನ್ನೊಬ್ಬರ ನಗುವನ್ನು ನೋಡಿ ತಾನು ನಗುವುದು ಅತಿಶಯದ ಧರ್ಮ. ನಾನು ನಾನೆಂಬ ಭಾವವಿಲ್ಲದ ನಗುವೆ ಶ್ರೇಷ್ಠ ನಗು.

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ! ನಗುವ ಕೇಳುತ ನಗುವುದತಿಶಯದ ಧರ್ಮ !! ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ! ಮಿಗೆ ನೀನು ಬೇಡಿಕೊಳೋ ಮಂಕುತಿಮ್ಮ !! ಬರಹ: ಆಶಾ ನಾಗಭೂಷಣ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?