AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chennaveer Kanavi Death: ಬಾಳುವುದೆಂದರೆ, ಕೊಡುವುದೆಂದರೆ, ಕೊಂಬುದೆಂದರೆ, ಮಾಗುವುದೆಂದರೆ..

Tribute To Chennaveera Kanavi ‘ನಿಸರ್ಗ, ಮನುಷ್ಯಲೋಕ, ಅನುಭಾವದ ಸೆಳೆತ ಎಲ್ಲವನ್ನೂ ಒಳಗೊಳ್ಳುವ ಕಣವಿಯವರ ಕಾವ್ಯವು ಪರಂಪರೆಯ ಕಾವ್ಯದ ತಿಳಿವಳಿಕೆ, ಭಾಷೆ, ಲಯಗಳಲ್ಲಿ ಬೇರುಬಿಟ್ಟಿದೆ. ಹೊಸ ಕಾವ್ಯದ ತಿಳಿವಳಿಕೆಯಲ್ಲಿ ಮೈಪಡೆದು ಹೂಬಿಟ್ಟಿದೆ. ಹಲವು ಕಾವ್ಯ ಮಾರ್ಗಗಳಿಂದ ಹೊಸ ಅರಿವು ಪಡೆದಿದೆ. ಕನ್ನಡ ಕಾವ್ಯದ ನಿಬಿಡಾರಣ್ಯದಲ್ಲಿ ತನ್ನದೇ ಕಂಪು ಸೂಸಿದೆ.’ ಡಾ. ವಿಕ್ರಮ ವಿಸಾಜಿ

Chennaveer Kanavi Death: ಬಾಳುವುದೆಂದರೆ, ಕೊಡುವುದೆಂದರೆ, ಕೊಂಬುದೆಂದರೆ, ಮಾಗುವುದೆಂದರೆ..
ಡಾ. ಚೆನ್ನವೀರ ಕಣವಿ ಮತ್ತು ಡಾ. ವಿಕ್ರಮ ವಿಸಾಜಿ
ಶ್ರೀದೇವಿ ಕಳಸದ
|

Updated on:Feb 16, 2022 | 10:47 AM

Share

ಚೆನ್ನವೀರ ಕಣವಿ | Chennaveera Kanavi : ಜೀವನ ಮೌಲ್ಯಗಳನ್ನು ಕಳೆದ ಏಳು ದಶಕಗಳಿಂದ ತಮ್ಮ ಕಾವ್ಯದಲ್ಲಿ ಗಂಭೀರವಾದ ಶೋಧನೆಗೆ ಒಳಪಡಿಸಿದವರು ಚೆನ್ನವೀರ ಕಣವಿ. ಕನ್ನಡ ಕಾವ್ಯದ ನೂರಾರು ತೊರೆಗಳಲ್ಲಿ ಒಂದು ತಿಳಿಜಲದ, ಆರೋಗ್ಯಪೂರ್ಣ, ಮಾನವೀಯ ಜಗತ್ತಿನ ವೈವಿಧ್ಯವನ್ನು ಕಾಣಿಸುವ ಕಾವ್ಯ ಇವರದು. ನೋವು, ಸಂಕಟಗಳ ತೆರೆ ಸರಿಸಿ ಹೊಸಬಾಳಿನ, ಹೊಸಕನಸಿನ ಹಾದಿಗಳ ಹುಡುಕಾಟ ಇವರ ಕಾವ್ಯಕ್ಕೆ ಪ್ರಿಯವಾದ ಕೆಲಸ. ದೇಶದ ಬಿಡುಗಡೆಯ ಕನಸು, ನಾಡಿನ ಏಕೀಕರಣದ ಕನಸು, ಬಡವರ ಏಳಿಗೆಯ ಕನಸು, ಸಂಸ್ಕೃತಿ ಬಾಳುವೆಯ ಕನಸು – ಹೀಗೆ ಹತ್ತು ಹಲವು ಕನಸುಗಳನ್ನು ಕನ್ನಡಿಗರಿಗೆ ಕಾಣಿಸಿದ ಕಾವ್ಯವಿದು. ಕಣವಿಯವರ ಇಂಥ ಕನಸುಗಳು ಕಾವ್ಯ ಪರಂಪರೆಯ ಕಸುವಿಗೆ ಶಕ್ತಿ ತುಂಬಿವೆ. ಬಾಳುವುದೆಂದರೆ ಏನು? ಕೊಡುವುದೆಂದರೆ ಏನು? ಕೊಂಬುದೆಂದರೆ ಏನು? ಮಾಗುವುದೆಂದರೆ ಏನು? ಇಂಥ ಹಲವು ಪ್ರಶ್ನೆಗಳ ಚಿಂತನಶೀಲ ಲೋಕ ತೆರೆದಿಟ್ಟಿದೆ. ಡಾ. ವಿಕ್ರಮ ವಿಸಾಜಿ, ಲೇಖಕ, ಅನುವಾದಕ

*

ಚೆನ್ನವೀರ ಕಣವಿಯವರು ಬರವಣಿಗೆ ಆರಂಭಿಸಿದ್ದು ಹದಿನೆಂಟು-ಹತ್ತೊಂಬತ್ತರ ತಾರುಣ್ಯದಲ್ಲಿ. ಅದಕ್ಕಿಂತ ಹಿಂದೆಯೇ ಅವರ ಬರವಣಿಗೆ ಆರಂಭವಾಗಿದ್ದರೂ ಕಾವ್ಯವಾಚನ, ಚರ್ಚೆ, ಪ್ರಕಟಣೆಗೆ ತೆರೆದುಕೊಂಡದ್ದು ಮಾತ್ರ ತಾರುಣ್ಯದಲ್ಲಿ. ಅವರ ಮೊದಲ ಕವನ ಸಂಕಲನ ‘ಕಾವ್ಯಾಕ್ಷಿ’ ದ. ರಾ. ಬೇಂದ್ರೆಯವರ ಮುನ್ನುಡಿಯೊಂದಿಗೆ 1949ರಲ್ಲಿ ಪ್ರಕಟವಾಯಿತು. ಅದು ನವೋದಯದ ದಟ್ಟ ಪ್ರಭಾವದ ಕಾಲ. ಕಣವಿಯವರ ಕಾವ್ಯ ವ್ಯಕ್ತಿತ್ವಕ್ಕೆ ಈ ವಾತಾವರಣ ಸಹಜವಾಗಿಯೆ ಪ್ರಿಯವಾಯಿತು.

ಮಮತೆಯಲ್ಲಿ ಮೂರ್ತಿಗೊಂಡ ಸಮತೆಯಲ್ಲಿ ಸ್ಫೂರ್ತಿಗೊಂಡ ದಿವ್ಯತೇಜದಲ್ಲಿ ತಾಯೆ, ಕಾವ್ಯ ಮೊಳೆಯಿತು (ತಾಯೆ ನಿನ್ನ ಮಡಿಲೊಳು-ಕಾವ್ಯಾಕ್ಷಿ)

ನಾಡಿನ ಹೊಸ ವಾತಾವರಣ, ಹೊಸ ಆಶಯ ಕಾವ್ಯದ ವಾತಾವರಣದಲ್ಲಿ ಬಂದು ಕೂಡಿತು. ಪ್ರೀತಿ, ಕರುಣೆ, ಸಮಾನತೆ ಕವಿಯ ದನಿಗೆ ಬಂದು ಸೇರಿತು. ಕಾಲದ ಸದ್ದುಗಳನ್ನು ಕಣವಿಯವರ ಕಾವ್ಯ ಯಾವಾಗಲೂ ಗ್ರಹಿಸಿದೆ. ಅದರ ಅಗತ್ಯ ಮತ್ತು ಬದಲಾವಣೆಗಳನ್ನು ನಿರುದ್ವಿಗ್ನವಾಗಿ ನಿರೂಪಿಸಿದೆ. ನಾಡನ್ನು ಕಟ್ಟುವ, ಸಂಬಂಧಗಳನ್ನು ಬೆಸೆಯುವ ಹಾಡುಗಳ ಕಟ್ಟೋಣವೆ ಕಾವ್ಯದ ನಿಲುವಾಗಿದೆ. ಕೆಟ್ಟ ಆಲೋಚನೆಗಳಿಂದ ದೂರ ನಿಲ್ಲುವ ಶಪಥವನ್ನೂ ತೊಟ್ಟಿದೆ.

ಇದನ್ನೂ ಓದಿ : Chennaveera Kanavi Death: ಚೆಂಬೆಳಕಿನ‌ ಖ್ಯಾತಿಯ ನಾಡೋಜ ಚೆನ್ನವೀರ ಕಣವಿ ಅಸ್ತಂಗತ

ಅಲ್ಲ ಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ (ಬಿನ್ನಹ : ಕಾವ್ಯಾಕ್ಷಿ)

ಕೆಡಕನ್ನು ಮೆಟ್ಟಿ ನಿಲ್ಲುವ ದಾರಿಗಳಲ್ಲಿ ಇದೂ ಒಂದು. ಆಗತಾನೆ ರೂಪುಗೊಳ್ಳುತಿದ್ದ ತರುಣಕಾವ್ಯದ ಮನಸ್ಸು ಕೇಳಲು ಕಾಣಲು ಬರೆಯಲು ಹಂಬಲಿಸಿದ್ದು ಬದುಕಿನ ಒಳಿತನ್ನು. ಇದರರ್ಥ ಇದಕ್ಕೆ ಕಷ್ಟ, ಬಡತನ, ಅವಮಾನ ಗೊತ್ತಿಲ್ಲವೆಂದಲ್ಲ. ಆದರೆ ಇವುಗಳನ್ನು ಮೀರುವ, ಎಲ್ಲ ಸಣ್ಣತನಗಳಾಚೆ ಕಣ್ಣು ಹಾಯಿಸುವ ತುಡಿತವೊಂದು ಸದಾ ಮುನ್ನೆಲೆಯಲ್ಲಿದೆ. ತಮ್ಮ ಆರಂಭದ ಪದ್ಯಗಳಲ್ಲೆ ಮನುಷ್ಯನ ಮಾಗುವಿಕೆಯ ಸ್ತರಗಳನ್ನು ಕಾವ್ಯ ಮೀಟಲೆತ್ನಿಸಿದೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Poetry : ಅವಿತಕವಿತೆ ; ‘ರಶಿಯಾದ ಕುಡುಗೋಲಿಗೆ ಕೇರಳದ ತೆಂಗಿನಕಾಯಿ ಸೀಳಿದರೆ ಸಿಹಿನೀರ ಬುಗ್ಗೆ’

Published On - 10:43 am, Wed, 16 February 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ