ಪ್ರವಾಹದಿಂದ ನಲುಗಿಹೋಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಹಿಂಗಾರು ಬೆಳೆ

ಬಾಗಲಕೋಟೆ: ಈ ಬಾರಿ ಬಂದ ಪ್ರವಾಹಕ್ಕೆ ಇಲ್ಲಿನ ಜನರೆಲ್ಲ ಸಿಲುಕಿ ತತ್ತರಿಸಿ ಹೋಗಿದ್ದರು. ಬೆಳೆದಿದ್ದ ಬೆಳೆ ನೀರು ಪಾಲಾಗಿತ್ತು. ಈ ವರ್ಷ ಭೂತಾಯಿ ನಮಗೇನು ಕೊಡಲೇ ಇಲ್ಲ ಅಂತಾ ಕೂತಿದ್ದ ರೈತರಿಗೆ ಹಿಂಗಾರು ಬೆಳೆ ಭರವಸೆ ಮೂಡಿಸಿದೆ. ಕಣ್ಣು ಹಾಯಿಸಿದ ಕಡೆಎಲ್ಲಾ ಹಚ್ಚಹಸಿರ ದರ್ಶನ. ಹಸಿರು ಸೀರೆ ಉಟ್ಟಂತೆ ಕಾಣ್ತಿರೋ ಭೂತಾಯಿ. ಬೆಳೆದು ನಿಂತಿರೋ ಕಡಲೆ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಂಗಾಲಾಗಿದ್ದ ಅನ್ನದಾತನ ಬದುಕಿನಲ್ಲಿ ಭರವಸೆ ಮೂಡಿಸಿದೆ. ಬೆಳೆ ನೋಡಿ ಖುಷಿಯಲ್ಲಿರೋ ರೈತನಿಗೆ ಹೊಲ ಬಿಟ್ಟು […]

ಪ್ರವಾಹದಿಂದ ನಲುಗಿಹೋಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಹಿಂಗಾರು ಬೆಳೆ
ಸಾಧು ಶ್ರೀನಾಥ್​

Updated on: Jan 05, 2020 | 7:17 PM

ಬಾಗಲಕೋಟೆ: ಈ ಬಾರಿ ಬಂದ ಪ್ರವಾಹಕ್ಕೆ ಇಲ್ಲಿನ ಜನರೆಲ್ಲ ಸಿಲುಕಿ ತತ್ತರಿಸಿ ಹೋಗಿದ್ದರು. ಬೆಳೆದಿದ್ದ ಬೆಳೆ ನೀರು ಪಾಲಾಗಿತ್ತು. ಈ ವರ್ಷ ಭೂತಾಯಿ ನಮಗೇನು ಕೊಡಲೇ ಇಲ್ಲ ಅಂತಾ ಕೂತಿದ್ದ ರೈತರಿಗೆ ಹಿಂಗಾರು ಬೆಳೆ ಭರವಸೆ ಮೂಡಿಸಿದೆ.

ಕಣ್ಣು ಹಾಯಿಸಿದ ಕಡೆಎಲ್ಲಾ ಹಚ್ಚಹಸಿರ ದರ್ಶನ. ಹಸಿರು ಸೀರೆ ಉಟ್ಟಂತೆ ಕಾಣ್ತಿರೋ ಭೂತಾಯಿ. ಬೆಳೆದು ನಿಂತಿರೋ ಕಡಲೆ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಂಗಾಲಾಗಿದ್ದ ಅನ್ನದಾತನ ಬದುಕಿನಲ್ಲಿ ಭರವಸೆ ಮೂಡಿಸಿದೆ. ಬೆಳೆ ನೋಡಿ ಖುಷಿಯಲ್ಲಿರೋ ರೈತನಿಗೆ ಹೊಲ ಬಿಟ್ಟು ಹೋಗಲು ಮನಸ್ಸಾಗ್ತಿಲ್ಲ.

ರೈತರ ಕೈಹಿಡಿದ ಹಿಂಗಾರು ಬೆಳೆ:
ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ಬಾಗಲಕೋಟೆ ಜಿಲ್ಲೆ ನಲುಗಿ ಹೋಗಿತ್ತು. ಕೃಷ್ಣೆ, ಮಲಪ್ರಭೆ, ಘಟಪ್ರಭೆಯ ಅಬ್ಬರಕ್ಕೆ ಬೆಳೆಗಳೆಲ್ಲಾ ಕೊಚ್ಚಿ ಹೋಗಿದ್ದವು. ಈರುಳ್ಳಿ, ಮೆಕ್ಕೆಜೋಳ, ಶೇಂಗಾ ನೀರು ಪಾಲಾಗಿದ್ದವು. ಇದ್ರಿಂದ ರೈತರ ಬದುಕೇ ಬೀದಿಗೆ ಬಂದಿತ್ತು. ಆದ್ರೀಗ ಬೆನಕಟ್ಟಿ ಗ್ರಾಮದ ಸುತ್ತಮುತ್ತ ಹಿಂಗಾರು ರೈತರ ಕೈಹಿಡಿದಿದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಕಡಲೆ, ಜೋಳ ಹುಲುಸಾಗಿ ಬೆಳೆದಿದ್ದು ರೈತನ ಮೊಗದಲ್ಲಿ ನಗು ಅರಳುವಂತೆ ಮಾಡಿದೆ.

ಇನ್ನು ತೇವಾಂಶ ಹಾಗೂ ಚಳಿಯಿಂದಲೇ ಬೆಳೆಯುವ ಕಡಲೆ ರೈತರ ಕೈ ಹಿಡಿಯೋ ಲಕ್ಷಣ ಕಾಣ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಬರೋಬ್ಬರಿ 1 ಲಕ್ಷ ಹೆಕ್ಟೇರ್​ನಲ್ಲಿ ಕಡಲೆ ಬೆಳೆದಿದ್ದಾರೆ. ಆದ್ರೆ ಬೆಳೆ ಬೆಳೆಯುವಾಗ ಇರೋ ಬೆಲೆ ಬೆಳೆ ಕೈಗೆ ಬಂದಾಗ ಇರೋದಿಲ್ಲ ಅನ್ನೋದು ರೈತರ ಆತಂಕವಾಗಿದೆ. ಹೀಗಾಗಿ ಈ ಬಾರಿ ಖರೀದಿ ಕೇಂದ್ರ ತೆರೆಯಬೇಕು ಅಂತಾ ಆಗ್ರಹಿಸುತ್ತಿದ್ದಾರೆ. ಒಟ್ನಲ್ಲಿ ಪ್ರವಾಹದಿಂದ ನೊಂದು ಬೆಂದು ಹೋಗಿದ್ದ ರೈತರಿಗೆ ಹಿಂಗಾರು ಬೆಳೆ ಕೈಹಿಡಿದಿದೆ. ಆದ್ರೆ ಮಾರುಕಟ್ಟೆಯಲ್ಲಿ ಬೆಲೆಯೂ ಚೆನ್ನಾಗಿ ಸಿಕ್ರೆ ರೈತರ ಬದುಕು ಹಸನಾಗಲಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us