ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ಅಪ್ಪ-ಅಮ್ಮ, ತಮ್ಮದು ಮುಸಲ್ಮಾನರ ಪಕ್ಷ ಎಂದು ಸ್ವತಃ ರಾಹುಲ್ ಹೇಳಿದ್ದಾರಲ್ಲ -ಪರಿಷತ್ ಮಾಜಿ ಸದಸ್ಯ

| Updated By: ಸಾಧು ಶ್ರೀನಾಥ್​

Updated on: Jan 27, 2022 | 1:47 PM

ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ಅಪ್ಪ-ಅಮ್ಮ. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಪಕ್ಷ ಎಂದು ಸ್ವತಃ ಕಾಂಗ್ರೆಸ್​ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ಹೇಳಿದ್ದಾರಲ್ಲ ಎಂದ ಮೇಲ್ಮನೆಯ ಬಿಜೆಪಿ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ

ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ಅಪ್ಪ-ಅಮ್ಮ, ತಮ್ಮದು ಮುಸಲ್ಮಾನರ ಪಕ್ಷ ಎಂದು ಸ್ವತಃ ರಾಹುಲ್ ಹೇಳಿದ್ದಾರಲ್ಲ -ಪರಿಷತ್ ಮಾಜಿ ಸದಸ್ಯ
ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ತಂದೆ ತಾಯಿ, ತಮ್ಮದು ಮುಸಲ್ಮಾನರ ಪಕ್ಷ ಎಂದು ರಾಹುಲ್ ಅವರೇ ಹೇಳಿದ್ದಾರಲ್ಲ- ಪರಿಷತ್ ಮಾಜಿ ಸದಸ್ಯ
Follow us on

ಬಾಗಲಕೋಟೆ: 1 ಮಗುವನ್ನ ಹೆತ್ತವರು ನಾವು ಟ್ಯಾಕ್ಸ್ ಕಟ್ಟಬೇಕು.. ಅದೇ 10 ಮಕ್ಕಳ ಹೆತ್ತವರು ಅದರ ಉಪಯೋಗ ತಗೆದುಕೊಳ್ಳಬೇಕು ಎಂದು ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ (former bjp mlc narayana sa bhandage ) ಕಾಂಗ್ರೆಸ್​ ಬಗ್ಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಈ ಬಗ್ಗೆ ಮಾತನಾಡಿದ ಮೇಲ್ಮನೆಯ ಬಿಜೆಪಿ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಕಾಂಗ್ರೆಸ್ಸಿಗರಿಗೆ (congress) ಮುಸಲ್ಮಾನರೇ ಅಪ್ಪ-ಅಮ್ಮ. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಪಕ್ಷ (congress) ಎಂದು ಸ್ವತಃ ಕಾಂಗ್ರೆಸ್​ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ಹೇಳಿದ್ದಾರಲ್ಲ. ಎಲ್ಲ ಸವಲತ್ತುಗಳನ್ನ ಮುಸಲ್ಮಾನರಿಗೆ ಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಹೇಳಿದ್ದರಲ್ಲ ಎಂದು ಹೇಳಿದರು. ಎರಡು ಮಕ್ಕಳನ್ನ ಹೆತ್ತವರು ನಾವು ಟ್ಯಾಕ್ಸ್ ಕಟ್ಟಬೇಕು. ಹತ್ತು ಮಕ್ಕಳನ್ನ ಹೆತ್ತವರು ಅದರ ಪ್ರಯೋಜನ ತಗೆದುಕೊಳ್ಳಬೇಕು ಎಂದು ಭಾಂಡಗೆ ಹೇಳಿದ್ದಾರೆ.

ಭಾರತ ಮಾತೆಯ ಬಗ್ಗೆ ಅವಮಾನ ಮಾಡಿದ ಉಸ್ಮಾನ್ ಗಣಿ ಹುಮನಾಬಾದ್ ವಿರುದ್ಧ ಹರಿಹಾಯ್ದ ಪರಿಷತ್ ಮಾಜಿ ಶಾಸಕ ನಾರಾಯಣ್ ಸಾ ಭಾಂಡಗೆ ಅವರು ಬಸವಣ್ಣನವರ ಬಗ್ಗೆ ಮಾತನಾಡಲು ಸೊಕ್ಕಾ ಈ ಮಕ್ಕಳಿಗೆ, ಹಿಡಿದು ಒದಿಬೇಕು ಇಂತಹವರಿಗೆ. ನಾನು ಇದ್ದಿದ್ರೆ ಮಾತ್ರ ಒದಿತಿದ್ದೆ. ಬಸವಣ್ಣನವರ ಬಗ್ಗೆ ಹೀನವಾಗಿ ಮಾತಾಡಿದ್ರೂ ಯಾವ ಮಠಾಧೀಶರು ಮಾತನಾಡಲಿಲ್ಲ. ನನಗೆ ಇದು ಆಶ್ಚರ್ಯ ಆಯಿತು. ಮಠಾಧೀಶರು ಸಹಿತ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಿದ್ದವರು ಹೇಗೆ ಸುಮ್ಮನೇ ಕೂತ್ರೋ ಗೊತ್ತಿಲ್ಲ. ಜಿಲ್ಲಾ ಪೊಲೀಸರು ಅವರನ್ನು ಗಡಿಪಾರು ಮಾಡ್ತೀವಿ ಅಂದ್ರು. ಇನ್ನೊಮ್ಮೆ ಅವನು ಬಾಯಿಂದ ಮಾತನಾಡದ ಹಾಗೆ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಮಾಜಿ ಶಾಸಕ ನಾರಾಯಣ್ ಸಾ ಹೇಳಿದರು.

ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ ಕೆಲ ದಿನಗಳ ಹಿಂದೆ ಭಾರತ ಮಾತಾಕಿ ಜೈ, ಗಾಯ್ ಮಾತಾಕಿ ಜೈ ಎಂದು ಅವಮಾನ ಮಾಡಿ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಮಾತಾಡಿದ್ದ. ಸದ್ಯಕ್ಕೆ ಗಣಿ ತಲೆ ಮರೆಸಿಕೊಂಡಿದ್ದಾನೆ.

ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾ ಮಹಿಳೆ ಬಂಧನ, ಹಿನ್ನೆಲೆ ಏನಿತ್ತು?
ಬೆಂಗಳೂರು: ಬಾಂಗ್ಲಾ ದೇಶದಿಂದ ಬಂದು, ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಮಹಿಳೆಯೊಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಭಾರತೀಯ ಪೌರತ್ವ ಪಡೆದಿದ್ದ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ರೋನಿ ಬೇಗಂ 2006 -2007 ರಲ್ಲಿ ಅಕ್ರಮವಾಗಿ ಗಡಿ ನುಸುಳಿ ಭಾರತದೊಳಕ್ಕೆ ಪ್ರವೇಶಿಸಿದ್ದಳು. ಮುಂದೆ.. ರೋನಿ ಬೇಗಂ 2015 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದಳು.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದ ಸದರಿ ವಿದೇಶಿ ಮಹಿಳೆ, ನೀತಿನ್ ಕುಮಾರ್ ಎಂಬಾತನನ್ನು ಮುಂಬೈನಲ್ಲಿ ವಿವಾಹವಾಗಿದ್ದಳು. ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ರೋನಿ ಬೇಗಂ ತನ್ನ ಹೆಸರು ಬದಲಿಸಿಕೊಂಡಿದ್ದಳು. ಪಾಯಲ್ ಗೋಷ್ ಎಂದು ಆಕೆಗೆ ಮರು ನಾಮಕರಣವಾಗಿತ್ತು. ನಕಲಿ ದಾಖಲೆ ಕೊಟ್ಟು ಭಾರತದ ಪ್ರಜೆಯಾಗಿ ದಾಖಲೆ ಮಾರ್ಪಾಡು ಮಾಡಿಕೊಂಡಿದ್ದಳು. ಬಾಂಗ್ಲಾಗೆ ಪ್ರಯಾಣ ಮಾಡುವಾಗ ಏರ್ ಪೋರ್ಟ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ.

ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಹೇಳಿಕೆ:
ರೋನಿ ಬೇಗಂ ಅಲಿಯಾಸ್ ಪಾಯಲ್ ಗೋಷ್ ಎರಡು ವರ್ಷಗಳ ಹಿಂದೆ ಢಾಕಾಗೆ ಹೋಗುವಾಗ ಕೋಲ್ಕತಾ ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದಿದ್ದಳು. ಇಮಿಗ್ರೇಷನ್ ಅಧಿಕಾರಿಗಳ ತಪಾಸಣೆ ವೇಳೆ ಬಾಂಗ್ಲಾ ನಿವಾಸಿ ಎಂಬುದು ಪತ್ತೆಯಾಗಿತ್ತು. ಬೆಂಗಳೂರಿನ ಎಫ್ ಆರ್ ಆರ್ ಓ ನೀಡಿದ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ರಚಿಸಿ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ಕಡೆ ಮೂರು ತಿಂಗಳ ಕಾಲ ಶೋಧ ನಡೆಸಿದ್ದೆವು. ಕೊನೆಗೂ ಬಾಂಗ್ಲಾ ಮಹಿಳೆಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗ ಸೃಷ್ಟಿಗೆ ನೆರವು ನೀಡಿದವರ ಪತ್ತೆಗಾಗಿ ನಮ್ಮ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ಹೇಳಿದ್ದಾರೆ.

ಮಹದೇಶ್ವರ ಬೆಟ್ಟದ ದೊಡ್ಡಾಣೆ ಗ್ರಾಮದಲ್ಲಿ ಜನರಿಗೆ ಜ್ವರ, ಕಾಡಿನಲ್ಲಿ ನಡೆಯಲಾಗದೆ ನರಳಾಟ, ವೈದ್ಯರನ್ನು ಕಳುಹಿಸಲು ಗ್ರಾಮಸ್ಥರ ಮೊರೆ

Published On - 1:26 pm, Thu, 27 January 22