ಬೀಳಗಿ ದೇವಸ್ಥಾನದಲ್ಲಿ ಇಂದು ಯೋಧ ಸಂತೋಷ ಬಾವಿಕಟ್ಟಿ ವಿಭಿನ್ನ ಮದುವೆ, ಯಾರೆಲ್ಲ ಬರುತ್ತಿದ್ದಾರೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Dec 14, 2023 | 10:30 AM

ಯೋಧ ಸಂತೋಷ ಬಾವಿಕಟ್ಟಿ ಬೀಳಗಿ ಮೂಲದ ಮಾಜಿ ಯೋಧರಿಂದ ಯುದ್ಧ ಬಾಧಿತರಿಗೆ ಸನ್ಮಾನ ಮಾಡಿಸಲಿದ್ದಾರೆ. ನನ್ನ ಮದುವೆಗೆ ಹುತಾತ್ಮ ಯೋಧರ ಪತ್ನಿಯರು, ಗಾಯಾಳು ವೀರಯೋಧರನ್ನು ಕರೆಸಿ ಸನ್ಮಾನಿಸುವ ಕನಸು ಕಂಡಿದ್ದೆ. ಆ ಪ್ರಕಾರ ಮದುವೆ ಮಾಡಿಕೊಳ್ಳುತ್ತಿದ್ದೇನೆ - ಯೋಧ ಸಂತೋಷ ಬಾವಿಕಟ್ಟಿ.

ಬೀಳಗಿ ದೇವಸ್ಥಾನದಲ್ಲಿ ಇಂದು ಯೋಧ ಸಂತೋಷ ಬಾವಿಕಟ್ಟಿ ವಿಭಿನ್ನ ಮದುವೆ, ಯಾರೆಲ್ಲ ಬರುತ್ತಿದ್ದಾರೆ ಗೊತ್ತಾ?
ಬೀಳಗಿ ದೇವಸ್ಥಾನದಲ್ಲಿ ಇಂದು ಯೋಧನ ವಿಭಿನ್ನ ಮದುವೆ
Follow us on

ಬಾಗಲಕೋಟೆ, ಡಿಸೆಂಬರ್​ 14: ಬೀಳಗಿ ಮೂಲದ ಭಾರತೀಯ ಸೇನಾ (Indian Army Soldier) ಯೋಧ ಇಲ್ಲಿನ ಸಿದ್ದೇಶ್ವರ ದೇವಸ್ಥಾನದಲ್ಲಿ (Bilagi, Bagalkot) ಇಂದು ಗುರುವಾರ ಮಧ್ಯಾಹ್ನ12 ಗಂಟೆಗೆ ವಿಶೇಷವಾಗಿ, ವಿಭಿನ್ನವಾಗಿ ಮದುವೆ (Wedding) ಮಾಡಿಕೊಳ್ಳುತ್ತಿದ್ದಾರೆ. ಆ ಯೋಧನ ಹೆಸರು ಸಂತೋಷ ಬಾವಿಕಟ್ಟಿ. ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹೊಂದಿರುವ ಯೋಧ. ದೇಶಭಕ್ತಿ ಹಾಗೂ ವಿವಿಧ ವಿಷಯದ ಬಗ್ಗೆ ರೀಲ್ಸ್ (Reels) ಮಾಡುವ ಮೂಲಕ ಹೆಸರುವಾಸಿಯಾಗಿರುವ ಯೋಧ ಈತ.

ತನ್ನ ಮದುವೆಯಲ್ಲಿ ಹುತಾತ್ಮ ಯೋಧರ ಪತ್ನಿಯರಿಗೆ ಹಾಗೂ ಗಾಯಾಳು ಯೋಧರಿಗೆ ಸನ್ಮಾನ ಮಾಡಲಿದ್ದಾರೆ. ಪುಲ್ವಾಮಾ, ಸಿಯಾಚಿನ್ ಹುತಾತ್ಮ ಯೋಧರ ಪತ್ನಿಯರಿಗೆ ವಿಶೇಷವಾಗಿ ಯೋಧ ಸನ್ಮಾನ ಮಾಡಲಿದ್ದಾರೆ.

ಸಿಯಾಚಿನ್ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಪತ್ನಿ ಮಹಾದೇವಿ ಕೊಪ್ಪದ, ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ,ಕಾರ್ಗಿಲ್ ಯುದ್ದದ ಗಾಯಾಳು ಯೋಧ ರಂಗಪ್ಪ ಆಲೂರು. ಪುಲ್ವಾಮಾ ಹುತಾತ್ಮ ಯೋಧ ಕಾಶಿರಾಯ ಬೊಮ್ಮನಹಳ್ಳಿ ಅವರ ಪತ್ನಿ ಸಂಗೀತಾ ಬೊಮ್ಮನಹಳ್ಳಿ ಸೇರಿದಂತೆ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಎಂಟು ಜನ ವೀರನಾರಿಯರಿಗೆ ಯೋಧ‌ ಸನ್ಮಾನ ಮಾಡಲಿದ್ದಾರೆ.

ಸಂತೋಷ ಬಾವಿಕಟ್ಟಿ ವಿಭಿನ್ನ ಮದುವೆ – ಸನ್ಮಾನ ಮಾಡುವುದು ಯಾರು ಗೊತ್ತಾ!?

ಯೋಧ ಸಂತೋಷ ಬಾವಿಕಟ್ಟಿ ಅವರು ಬೀಳಗಿ ಮೂಲದ ಮಾಜಿ ಯೋಧರಿಂದ ಯುದ್ಧಬಾಧಿತರಿಗೆ ಸನ್ಮಾನ ಮಾಡಿಸಲಿದ್ದಾರೆ. ನನ್ನ ಮದುವೆಗೆ ಹುತಾತ್ಮ ಯೋಧರ ಪತ್ನಿಯರು, ಗಾಯಾಳು ವೀರಯೋಧರನ್ನು ಕರೆಸಿ ಸನ್ಮಾನಿಸುವ ಕನಸು ಕಂಡಿದ್ದೆ. ಆ ಪ್ರಕಾರ ಮದುವೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಮದುವೆಗೆ ಬಂದು ಆಶೀರ್ವದಿಸಿ ಎಂದು ರೀಲ್ಸ್ ಮೂಲಕ ಆಹ್ವಾನ ನೀಡಿದ್ದಾರೆ ಯೋಧ ಸಂತೋಷ ಬಾವಿಕಟ್ಟಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:28 am, Thu, 14 December 23