ಮೀಸಲಾತಿ ತೆಗೆಯಿರಿ ಎನ್ನುವ ವಿಡಿಯೋ ವೈರಲ್: ಕರ್ನಾಟಕದಲ್ಲಿ ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕ

| Updated By: ರಮೇಶ್ ಬಿ. ಜವಳಗೇರಾ

Updated on: Oct 25, 2023 | 12:43 PM

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಮೀಸಲಾತಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಆ ವಿಡಿಯೋ ಫುಲ್ ವೈರಲ್ ಆಗಿದೆ. ಇದರಿಂದ ದಲಿಪರ ಸಂಘಟನೆಗಳು ಸಿಡಿದೆದ್ದಿವೆ. ಅಲ್ಲದೇ ರಾತ್ರೋರಾತ್ರಿ ಶಾಸಕರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿವೆ. ಅಷ್ಟಕ್ಕೂ ಆ ವಿಡಿಯೋನಲ್ಲಿ ಏನಿದೆ? ಎನ್ನುವ ವಿವರ ಇಲ್ಲಿದೆ.

ಮೀಸಲಾತಿ ತೆಗೆಯಿರಿ ಎನ್ನುವ ವಿಡಿಯೋ ವೈರಲ್: ಕರ್ನಾಟಕದಲ್ಲಿ ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕ
ಜಮಖಂಡಿ ಶಾಸಕ ಜಗದೀಶ್
Follow us on

ಬಾಲಕೋಟೆ, (ಅಕ್ಟೋಬರ್ 25): ಜಮಖಂಡಿ(jamakhandi) ಬಿಜೆಪಿ ಶಾಸಕ ಜಗದೀಶ್ (Jagadeesh Gudagunti) ಅವರು ಕಾರ್ಯಕ್ರಮವೊಂದರಲ್ಲಿ ಮೀಸಲಾತಿ ತೆಗೆಯಿರಿ ಎನ್ನುವ ಅರ್ಥದಲ್ಲಿ ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಅದು ಭಾರೀ ವಿವಾದಕ್ಕೆ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಮೀಸಲಾತಿ ತೆಗೆಯಿರಿ, ಎಲ್ಲರೂ ಟಾಪ್ ಕ್ಲಾಸ್​ನಲ್ಲಿ ಬಂದುಬಿಡುತ್ತಾರೆ ಎಂದು ಹೇಳಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದಲಿತ ಸಂಘಟನೆಗಳು ಶಾಸಕ ಜಗದೀಶ್ ಮನೆಗೆ ಮುತ್ತಿಗೆಗೆ ಯತ್ನಿಸಿದವು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾವಗವಹಿಸಿದ್ದ ಜಗದೀಶ್, ಕುಲಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ. ಕುಲಕುಲವೆಂದು ಬಡಿದಾಡದಿರಿ, ಕುಲದ‌ ನೆಲೆಯನ್ನೇನಾದ್ರೂ ಬಲ್ಲಿರಾ? ಹಾಗೇ ನೋಡಿದರೆ ಕುಲ ಎನ್ನುವುದು ಇಲ್ಲವೇ ಇಲ್ಲ. ಏನಾದ್ರು ಸಿಗುತ್ತೆ ಅಂತ ಮೀಸಲಾತಿ ಸಂಬಂಧ ಬಡಿದಾಟ ನಡೆಯುತ್ತಿದೆ. ಮೀಸಲಾತಿ ತೆಗೆಯಿರಿ, ಎಲ್ಲರೂ ಟಾಪ್ ಕ್ಲಾಸ್​ನಲ್ಲಿ ಬಂದುಬಿಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಂಬಿದ ಕಾರ್ಯಕ್ರಮದಲ್ಲಿ ನರ್ಸ್​ಗಳ ಸೌಂದರ್ಯವನ್ನು ಹಾಡಿಹೊಗಳಿದ ಶಾಸಕ​ ರಾಜು ಕಾಗೆ, ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಕ್ಷಮೆ

ಬಿಜೆಪಿ ಶಾಸಕ ಜಗದೀಶ್ ಈ ಹೇಳಿಕೆಯನ್ನು ಖಂಡಿಸಿದ ದಲಿತಪರ ಸಂಘಟನೆ, ರಾತ್ರೋರಾತ್ರಿ ಜಮಖಂಡಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ., ಅಲ್ಲದೇ ಶಾಸಕ ಜಗದೀಶ್ ಮನೆಗೆ ಮುತ್ತಿಗೆಗೆ ಯತ್ನಿಸಿವೆ. ಇದರಿಂದ ಮುಖಂಡರು-ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ವಿಡಿಯೋದಲ್ಲಿ ಶಾಸಕ ಹೇಳಿದ್ದೇನು?

ಕನಕದಾಸದ “ಕುಲಕುಲವೆಂದು ಬಡಿದಾಡದಿರಿ, ಕುಲದ‌ ನೆಲೆಯನ್ನೇನಾದ್ರೂ ಬಲ್ಲಿರಾ?ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಕುಲ ಎನ್ನುವುದು ಇಲ್ಲವೇ ಇಲ್ಲ..ಈ ರಿಸರ್ವೇಶನ್ ಮಾಡಿ ಬಿಟ್ಟಿದ್ದಾರೆ ನೋಡ್ರಿ..ಈ ರಿಸರ್ವೇಶನ್ ಸಂಬಂಧ ನಾವು ಹೊಡೆದಾಡಾಕತ್ತಿವಿ.. ಏನಾದ್ರು ಸಿಗುತ್ತೆ ಅಂತ..ಜೇರಗಡತ್ತ (ಒಂದು ವೇಳೆ) ರಿಸರ್ವೇಶನ್ ತೆಗೆದದರೆ ಎಲ್ಲರೂ ಟಾಪ್ ಕ್ಲಾಸ್’ನಲ್ಲಿ ಬಂದುಬಿಡ್ತಾರ ನಾವು ಟಾಪ್ ನೀವು ಟಾಪ್ ಅಂತ ಹೇಳಿ..ಇರ್ಲಿ ಅದೊಂದು ಅದ ಏನೋ ಸೀಮಿತ ಆಗಿದೆ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೀಡಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ