ಬಾಗಲಕೋಟೆ: ಮೇಕೆದಾಟು ಯೋಜನೆ ಜಾರಿಗೆ ಯಾರ ಅಪ್ಪಣೆಯೂ ಬೇಕಿಲ್ಲ. ನಮ್ಮ ರಾಜ್ಯ, ನಮ್ಮ ನೀರಿಗೆ ಸಂಬಂಧಿಸಿ ಕೆಲಸ ಮಾಡಲು ಯಾರ ಅಪ್ಪಣೆಯೂ ಬೇಕಿಲ್ಲ. ಕಾನೂನಾತ್ಮಕವಾಗಿ ಮೇಕೆದಾಟು ಯೋಜನೆ (Mekedatu Project) ಜಾರಿ ಮಾಡುತ್ತೇವೆ. ಕುಡಿಯುವ ನೀರಿಗೆ ಬಳಸಿ, ವಿದ್ಯುತ್ ಉತ್ಪಾದನೆ ಮಾಡಿ ಬಳಿಕ ನೀರನ್ನು ನದಿಗೆ ಹರಿಬಿಡುತ್ತೇವೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈಗೆ(Annamalai) ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.
ಕೆ.ಅಣ್ಣಾಮಲೈ ಹೋರಾಟದಲ್ಲಿ ಯಾವುದೇ ಅರ್ಥ ಇಲ್ಲದ ಅರ್ಥಹೀನವಾದ ಹೋರಾಟ. ನ್ಯಾಯ ಸಮ್ಮತವಾಗಿ ಮೇಕೆದಾಟು ಯೋಜನೆ ಮಾಡುತ್ತೇವೆ ಎಂದು ಸಹ ಅವರು ಸ್ಪಷ್ಟಪಡಿಸಿದರು.
ಅಣ್ಣಾಮಲೈ ಅಲ್ಲಿನ ರಾಜಕೀಯ ಒತ್ತಡಕ್ಕೆ ಮಣಿದು ವಿರೋಧ ವ್ಯಕ್ತಪಡಿಸಿದ್ದಾರೆ: ಡಿ.ವಿ.ಸದಾನಂದ
ಅಣ್ಣಾಮಲೈರಿಂದ ಮೇಕೆದಾಟು ಡ್ಯಾಂ ನಿರ್ಮಾಣ ವಿರೋಧಕ್ಕೆ ಪ್ರತಿಕ್ರಿಯಿಸಿದ ಡಿ.ವಿ.ಸದಾನಂದ (DV Sadananda Gowda) ಗೌಡ, ಇಲ್ಲಿ ಅಧಿಕಾರಿಯಾಗಿದ್ದವರು ತಮಿಳುನಾಡಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಅವರು ಇಲ್ಲಿದ್ದಾಗ ನಾವು ಆದೇಶಿಸಿ ಕೆಲಸ ಮಾಡಿಸುತ್ತಿದ್ದೆವು. ಅಣ್ಣಾಮಲೈ ಅಲ್ಲಿನ ರಾಜಕೀಯ ಒತ್ತಡಕ್ಕೆ ಮಣಿದು ವಿರೋಧ ವ್ಯಕ್ತಪಡಿಸಿದ್ದಾರೆ. ಅಣ್ಣಾಮಲೈರನ್ನ ಮನವೊಲಿಸುವ ಕೆಲಸವನ್ನ ಮಾಡುತ್ತೇವೆ ಎಂದು ತಿಳಿಸಿದರು.
ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಮಾಡುತ್ತೇವೆ. ಮೇಕೆದಾಟು ಯೋಜನೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮೇಕೆದಾಟು ಯೋಜನೆ ಮಾಡುವುದರಿಂದ ನೀರು ಇನ್ನಷ್ಟು ಸಂಗ್ರಹ ಮಾಡಬಹುದು. 25 ಜನ ಸಂಸದರು ರಾಜ್ಯದ ಜನತೆ ಪರವಾಗಿ ಕೆಲಸ ಮಾಡುತ್ತೇವೆ. ಕುಡಿಯುವ ನೀರು ಪಡೆಯುವುದು ನಮ್ಮ ಹಕ್ಕು. ಮೇಕೆದಾಟು ಅಣೆಕಟ್ಟನ್ನ ಬಿಜೆಪಿ ಮಾಡಿಯೇ ಮಾಡುತ್ತದೆ. 25 ಜನ ಏನ್ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ಸಿಗರು ಕೇಳುತ್ತಾರೆ. ಕಾಂಗ್ರೆಸ್ ನಾಯಕರು ನಮ್ಮನ್ನ ಕೇಳಬೇಡಿ. ನನ್ನ ದೆಹಲಿಗೆ ಕಳುಹಿಸಿದ್ದು ರಾಜ್ಯದ ಜನರು. ನಾವು ರಾಜ್ಯದ ಜನರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಸಂಸದ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟರು.
ಕೇಂದ್ರದಲ್ಲಿ ನಡೆಯುತ್ತಿರುವ ವಿದ್ಯಾಮಾನದ ಬಗ್ಗೆ ಗೊಂದಲವಿದೆ. ನಿಜವಾದ ಸಂಗತಿ ತಿಳಿಸುವುದಕ್ಕೆ ನಾವು ಸೇರಿದ್ದೇವೆ. ಸಂಸತ್ ಭವನವನ್ನು ಶ್ರದ್ಧಾಕೇಂದ್ರ ಎಂದು ಕರೆಯುತ್ತೇವೆ. ಕೊರೊನಾ ತಡೆಗೆ ಸರ್ಕಾರ ಕೈಗೊಂಡ ನಿರ್ಧಾರ ಗೊತ್ತಿದೆ. ಭಯೋತ್ಪಾದನೆ ತಡೆ ಬಗ್ಗೆ ಕೂಡ ಚರ್ಚೆ ಮಾಡಬೇಕಿದೆ. ಪಾಕಿಸ್ತಾನ, ಚೀನಾ ದೇಶಗಳು ಸಾಕಷ್ಟು ತೊಂದರೆ ಕೊಡುತ್ತಿವೆ. ಆದರೆ ಸಂಸತ್ತನ್ನು ಅಪವಿತ್ರ ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡುತ್ತಿದೆ. ಅಧಿವೇಶನದಲ್ಲಿ ಚರ್ಚೆ ಮಾಡಲು ಕಾಂಗ್ರೆಸ್ ಬಿಡುತ್ತಿಲ್ಲ. ಪಲಾಯನವಾದ ಮಾಡಲು ಕಾಂಗ್ರೆಸ್ ರೆಡಿಯಾಗಿದೆ. ಪ್ರಶ್ನೋತ್ತರ ಕಲಾಪದಲ್ಲಿ ಹಲವು ಚರ್ಚೆಗಳು ನಡೆಯುತ್ತೆ. ಕ್ಷೇತ್ರಗಳ ಸಮಸ್ಯೆ ಬಗ್ಗೆ ಹಲವು ಪ್ರಶ್ನೆಗಳಿರುತ್ತೆ. ಪ್ರಶ್ನೋತ್ತರ ಕಲಾಪಕ್ಕೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ ಅಂತ ಕೇಂದ್ರದ ಮಾಜಿ ಸಚಿವ ಡಿವಿಎಸ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಉಪವಾಸ ಬೇಕಾದ್ರೂ ಮಾಡಲಿ, ಇಲ್ಲ ಊಟ ಮಾಡಲಿ; ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ: ಅಣ್ಣಾಮಲೈಗೆ ಸಿಎಂ ಬೊಮ್ಮಾಯಿ ಟಾಂಗ್