ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ನಕ್ಕರಗುಂದಿ ಗ್ರಾಮದಲ್ಲಿ ನನ್ನ 40 ರೂಪಾಯಿ ತೆಗೆದುಕೊಂಡಿದ್ದೀಯಾ ಎಂದು ಅತ್ತೆ ಭೀಮವ್ವ ಗುಳ್ಳಣ್ಣವರು ಸೊಸೆ ರಂಗವ್ವ ಗುಳ್ಳಣ್ಣವರ ಮೇಲೆ ಆರೋಪ ಮಾಡಿದ್ದಾಳೆ. ಸೊಸೆ ನಾನು ತೆಗೆದುಕೊಂಡಿಲ್ಲವೆಂದು ಹೇಳಿದ್ದಾಳೆ. ಆದರೂ ನಂಬದ ಅತ್ತೆ, ಸೊಸೆಯ ಜಗಳ ತಾರಕಕ್ಕೇರಿದೆ. ಪತ್ನಿ ಹಾಗೂ ತಾಯಿ ಜಗಳದಿಂದ ಕೋಪಗೊಂಡ ಮಗ ಮಳಿಯಪ್ಪ ಜಗಳ ಬಿಡಿಸುವ ವೇಳೆ ಪತ್ನಿ ಕಪಾಳಕ್ಕೆ ಪತಿ ಹೊಡೆದಿದ್ದಾನೆ. ಮೊದಲೇ ಅಸ್ತಮಾ, ಬಿ.ಪಿಯಿಂದ ಬಳಲುತ್ತಿದ್ದ ಪತ್ನಿ, ಒಂದೇ ಹೊಡೆತಕ್ಕೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಇನ್ನು 12ವರ್ಷದ ಹಿಂದೆ ತನ್ನ ಸೋದರ ಮಾವನ ಮಗಳನ್ನೇ ಮದುವೆಯಾಗಿದ್ದ ಮಳಿಯಪ್ಪ ಹಮಾಲಿ ಕೆಲಸ ಮಾಡುತ್ತಿದ್ದ, ಕೇವಲ 40 ರೂಪಾಯಿ ಜಗಳ ಒಂದು ಜೀವವನ್ನೇ ಬಲಿ ತೆಗೆದುಕೊಂಡಿದ್ದು, ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರದ ಎಪಿಎಂಸಿ ಆಂತರಿಕ ಲೆಕ್ಕ ಪರಿಶೋಧಕ ಲೋಕಾಯುಕ್ತ ಬಲೆಗೆ
ವಿಜಯಪುರ: ಎಪಿಎಂಸಿಯಲ್ಲಿ ಲೆಕ್ಕಪರಿಶೋಧಕನಾಗಿದ್ದ ಶಂಕರಯ್ಯ ಹಿರೇಮಠ ಎನ್ನುವ ವ್ಯಕ್ತಿ ಎಪಿಎಂಸಿಯಲ್ಲಿ ವ್ಯಾಪಾರ ಮಾಡಲು ಟ್ರೇಡಿಂಗ್ ಲೈಸೆನ್ಸ್ ನೀಡಲು 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ರೇಡ್ ಮಾಡಿದ್ದು, ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ದಾಳಿ ವೇಳೆ ಹೆಚ್ಚುವರಿಯಾಗಿ ಪತ್ತೆಯಾದ 39 ಸಾವಿರ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:ವಿಜಯಪುರ: ಪಾಲಿಕೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ; ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯ
ಕೊಪ್ಪಳದಲ್ಲಿ ಪೊಲೀಸ್ ಕಣ್ಗಾವಲಿನಲ್ಲಿಯೇ ನಡಿಯುತ್ತಿದೆಯಾ ಜೂಜಾಟ
ಕೊಪ್ಪಳ: ಜಿಲ್ಲೆಯಲ್ಲಿ ಅಂದರ್ ಬಾಹರ್ ದರ್ಬಾರ್ ಜೋರಾಗಿ ನಡಿಯುತ್ತಿದೆ. 112 ಹಾಗೂ ಡಿವೈಎಸ್ಪಿಗೂ ಡೋಂಟ್ ಕೇರ್ ಎನ್ನುತ್ತಿರುವ ಜೂಜುಕೊರರು. ಡಿವೈಎಸ್ಪಿ ಮುಂದೇನೆ ಇಸ್ಪೀಟ್ ಆಡಸ್ತಿನಿ ಎಂದು ಅವಾಜ್ ಹಾಕಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕೊಪ್ಪಳ ಪೊಲೀಸರ ಮೇಲೆ ನಂಬಿಕೆ ಇಲ್ಲದಂತೆ ಮಾಡುತ್ತಿದೆ ಈ ಒಂದು ಆಡಿಯೋ, ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಂದರ್ ಬಾಹರ್ ಗ್ರಾಮದ ಹೊರವಲಯ, ಗುಡ್ಡ ಗಾಡು ಪ್ರದೇಶವೇ ಜೂಜೂಕೊರರ ಹಾಟ್ ಸ್ಪಾಟ್ ಆಗಿದೆ. ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಇಬ್ಬರು ಇಸ್ಪೀಟ್ ಜೂಜೂಕೊರರ ನಡುವಿನ ವಾಗ್ವಾದದಲ್ಲಿ ಡಿವೈಎಸ್ಪಿ ಹಾಗೂ 112 ಪೊಲೀಸರ ಹೆಸರು ಪ್ರಸ್ತಾಪವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Fri, 2 December 22