ಬಾಗಲಕೋಟೆಯಲ್ಲಿ ಇ-ಆಫೀಸ್ ನಿರ್ಲಕ್ಷ್ಯ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ
ಬಾಗಲಕೋಟೆ ಜಿಲ್ಲೆಯ ಇ-ಆಫೀಸ್ ಕುರಿತು ತೀವ್ರ ನಿರ್ಲಕ್ಷ್ಯ ತೋರಿದ್ದಕ್ಕೆ ಆಕ್ರೋಶಗೊಂಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇ-ಆಫೀಸ್ ನಲ್ಲಿ ಬಾಗಲಕೋಟೆ ಹಿಂದಿದೆ. ಇ-ಆಫೀಸ್ ಅಂದರೆ ಏನು ಅಂತನಾದರೂ ಗೊತ್ತಾ ಎಂದು ತಹಶೀಲ್ದಾರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಬಾಗಲಕೋಟೆ, ನ.6: ಜಿಲ್ಲೆಯ ಇ-ಆಫೀಸ್ (E-Office) ಕುರಿತು ತೀವ್ರ ನಿರ್ಲಕ್ಷ್ಯ ತೋರಿದ್ದಕ್ಕೆ ಆಕ್ರೋಶಗೊಂಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda), ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇ-ಆಫೀಸ್ ನಲ್ಲಿ ಬಾಗಲಕೋಟೆ ಹಿಂದಿದೆ. ಇ-ಆಫೀಸ್ ಅಂದರೆ ಏನು ಅಂತನಾದರೂ ಗೊತ್ತಾ ಎಂದು ತಹಶೀಲ್ದಾರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಬಾಗಲಕೋಟೆ ಜಿಲ್ಲೆಯಲ್ಲಿ ಇ-ಆಫೀಸ್ ಯಾಕೆ ಆಗುತ್ತಿಲ್ಲ? ಎಂದು ಕೇಳಿದ ಕಂದಾಯ ಸಚಿವರು, ಅಚ್ಚರಿಯ ಕಾರಣಗಳನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು. ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ನಿಮಗೆ ಇಷ್ಟ ಬಂದಂತೆ ಕಡತ ಮೂವ್ ಮಾಡವುದು, ಬಿಡುವುದು ನಿಮ್ಮ ಕೈಯಲ್ಲಿ ಇರಬೇಕು ಎಂದು ದೂರಿದರು.
ಆಡಳಿತದಲ್ಲಿ ಪಾರದರ್ಶಕತೆ ಬರಬಾರದು, ಎಲ್ಲ ಜನಗಳ ಜುಟ್ಟು ನಿಮ್ಮ ಕೈಯಲ್ಲಿ ಇರಬೇಕು, ನೀವು ಏನು ಮಾಡುತ್ತೀರಿ, ನಿಮ್ಮ ಶಿರಸ್ತೇದಾರ ಏನು ಮಾಡುತ್ತಾರೆ, ಎಫ್ಡಿಎ ಏನು ಮಾಡುತ್ತಾರೆ ಅಂತ ಗೊತ್ತಾಗಬಾರದು. ಯಾವ ಫೈಲ್ ಇರಬೇಕು, ಯಾವ ಫೈಲ್ ಕಳಿಯಬೇಕು ಅಂತ ಯಾರಿಗೂ ಗೊತ್ತಾಗಬಾರದು. ಭ್ರಷ್ಟಾಚಾರ, ಶ್ವೇಚ್ಛಾಚಾರ ನಡೆಯಬೇಕು. ಈ ದುರಾಧಿಕಾರ ನಿಮ್ಮಲ್ಲಿ ಇರಬೇಕು. ಈ ಎಲ್ಲ ಕಾರಣಗಳಿಂದ ಇ-ಆಫೀಸ್ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ನಾನು ಹೇಳಿದ್ದರಲ್ಲಿ ಯಾವುದಾದರೂ ತಪ್ಪಿದ್ದರೆ ಹೇಳಿ ಎಂದಾಗ ಎಲ್ಲಾ ಅಧಿಕಾರಿಗಳು ಮೌನಕ್ಕೆ ಶರಣಾದರು. ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾನಭವನದಲ್ಲಿ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ