ಮತ್ತೆ ಪಂಚಮಸಾಲಿ ಮೂರನೆ ಪೀಠದ ಕಹಳೆ; ಸಮುದಾಯದ ಸ್ವಾಮೀಜಿಗಳ ಗೌಪ್ಯ ಸಭೆ

| Updated By: ganapathi bhat

Updated on: Oct 17, 2021 | 9:45 PM

ದೀಪಾವಳಿ ಬಳಿಕ ಕಟ್ಟಡಕ್ಕೆ ಶಂಕುಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಮದ್ಯಾಹ್ನ 1 ರಿಂದ ನಾಲ್ಕು ಗಂಟೆವರೆಗೆ ಮೂರು ತಾಸುಗಳ ಕಾಲ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಮತ್ತೆ ಪಂಚಮಸಾಲಿ ಮೂರನೆ ಪೀಠದ ಕಹಳೆ; ಸಮುದಾಯದ ಸ್ವಾಮೀಜಿಗಳ ಗೌಪ್ಯ ಸಭೆ
ಪಂಚಮಸಾಲಿ ಸಮಾಜ (ಪ್ರಾತಿನಿಧಿಕ ಚಿತ್ರ)
Follow us on

ಬಾಗಲಕೋಟೆ: ಪಂಚಮಸಾಲಿ ಮೂರನೇ ಪೀಠದ ವಿಚಾರವಾಗಿ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಿಂದ ಗೌಪ್ಯ ಸಭೆ ನಡೆಸಲಾಗಿದೆ ಎಂದು ಇಂದು (ಅಕ್ಟೋಬರ್ 17) ಮಾಹಿತಿ ಲಭ್ಯವಾಗಿದೆ. ಅಲಗೂರು ಪುನರ್ವಸತಿ ಕೇಂದ್ರದಲ್ಲಿ ಗೌಪ್ಯ ಸಭೆ ನಡೆಸಲಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಎಂಬಲ್ಲಿನ ಸಮುದಾಯದ ಮುಖಂಡರೊಬ್ಬರ ಮನೆಯಲ್ಲಿ ಸಭೆ ನಡೆಸಲಾಗಿದೆ.

ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ 20 ಪಂಚಮಸಾಲಿ ಸ್ವಾಮೀಜಿಗಳು ಸಭೆಯಲ್ಲಿ ಭಾಗಿ ಆಗಿದ್ದಾರೆ ಎಂದು ತಿಳಿದುಬಂದಿದೆ. ಪಂಚಮಸಾಲಿ ಮೂರನೇ ಪೀಠದ ಕಟ್ಟಡದ ಬಗ್ಗೆ ಚರ್ಚೆ ನಡೆಸಲಾಗಿದೆ. ದೀಪಾವಳಿ ಬಳಿಕ ಕಟ್ಟಡಕ್ಕೆ ಶಂಕುಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಮದ್ಯಾಹ್ನ 1 ರಿಂದ ನಾಲ್ಕು ಗಂಟೆವರೆಗೆ ಮೂರು ತಾಸುಗಳ ಕಾಲ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಜಮಖಂಡಿ ನಗರದಲ್ಲಿ ಸ್ವಾಮೀಜಿಗಳು ಹಾಗೂ ಮುಖಂಡರು ಎರಡು ಬಾರಿ ಸಭೆ ನಡೆಸಿದ್ದರು. ಜಮಖಂಡಿ ನಗರದಲ್ಲಿ ಇದು ಮೂರನೆ ಬಾರಿ ನಡೆದ ಪಂಚಮಸಾಲಿ ಸ್ವಾಮೀಜಿಗಳ ಸಭೆಯಾಗಿದೆ. ಬಬಲೇಶ್ವರ ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಹಿರೆಮಠದ ಸಂಗನಬಸವ ಸ್ವಾಮೀಜಿ, ಕುಂಚನೂರು ಸಿದ್ದಲಿಂಗದೇವರು, ಅಲಗೂರು ಲಕ್ಷ್ಮಣ ಮುತ್ಯಾ ಸ್ವಾಮೀಜಿ, ಗೋಕಾಕ್​ನ ಗುರುಬಸವ ಸ್ವಾಮೀಜಿ ಸೇರಿದಂತೆ 20 ಸ್ವಾಮೀಜಿಗಳು ಸಭೆಯಲ್ಲಿ ಭಾಗಿ ಆಗಿರುವ ಬಗ್ಗೆ ತಿಳಿದುಬಂದಿದೆ.

ಇದನ್ನೂ ಓದಿ: ಸಿಎಂ ಭರವಸೆ: ಪಂಚಮಸಾಲಿ ಮೀಸಲಾತಿ ಹೋರಾಟ ಮುಂದೂಡಲು ಜಯಮೃತ್ಯುಂಜಯ ಸ್ವಾಮೀಜಿ ನಿರ್ಧಾರ

ಇದನ್ನೂ ಓದಿ: ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಸರ್ಕಾರ ಮರೆತಿದೆ ಎಂದ ಜಯಮೃತ್ಯುಂಜಯ ಸ್ವಾಮೀಜಿ, ನೆನಪಿದೆ ಎಂದ ಮುರುಗೇಶ್ ನಿರಾಣಿ