7 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ 50 ಲಕ್ಷ ರೂ.ಗೆ ಡಿಮ್ಯಾಂಡ್, ಬಾಲಕಿಯ ಜೂಜುಕೋರ ಮಾವನ ಮೇಲೆಯೇ ಅನುಮಾನ

ತಿಪ್ಪಣ್ಣ ಕೊಡಗಾನೂರು, ಸುನಿತಾ ದಂಪತಿಯ ಪುತ್ರಿ ಕೃತಿಕಾ ಟ್ಯೂಷನ್‌ಗೆ ಹೋಗಿದ್ದ ವೇಳೆ ಅಪಹರಣಕಾರರು ಕಿಡ್ನ್ಯಾಪ್ ಮಾಡಿದ್ದಾರೆ. ಘಟನೆ ಸಂಬಂಧ ಕೃತಿಕಾ ಮಾವ ಅನಿಲ್ ಬಾಡಗಂಡಿಯ ಮೇಲೆ ಅನುಮಾನ ವ್ಯಕ್ತವಾಗಿದೆ.

7 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ 50 ಲಕ್ಷ ರೂ.ಗೆ ಡಿಮ್ಯಾಂಡ್, ಬಾಲಕಿಯ ಜೂಜುಕೋರ ಮಾವನ ಮೇಲೆಯೇ ಅನುಮಾನ
7 ವರ್ಷದ ಬಾಲಕಿ ಕಿಡ್ನ್ಯಾಪ್
Follow us
TV9 Web
| Updated By: ಆಯೇಷಾ ಬಾನು

Updated on:Oct 28, 2021 | 8:34 AM

ಬಾಗಲಕೋಟೆ: ಬಾಗಲಕೋಟೆಯ ನವನಗರದ 61ನೇ ಸೆಕ್ಟರ್‌ನಲ್ಲಿ ಬಾಲಕಿಯನ್ನ ಅಪಹರಿಸಿ, 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಲಾಗಿರುವ ಘಟನೆ ನಡೆದಿದೆ. ನಿನ್ನೆ ಟ್ಯೂಷನ್‌ಗೆ ಹೋಗಿದ್ದ 7 ವರ್ಷದ ಕೃತಿಕಾ ಕಿಡ್ನ್ಯಾಪ್ ಆದ ಬಾಲಕಿ. ಟ್ಯೂಷನ್‌ಗೆ ಹೋಗಿದ್ದ ಬಾಲಕಿಯನ್ನು ರಾತ್ರಿ 8 ಗಂಟೆಗೆ ಅಪಹರಣಕಾರರು ಕಿಡ್ನ್ಯಾಪ್ ಮಾಡಿರುವುದಾಗಿ ಮಾಹಿತಿ ಸಿಕ್ಕಿದೆ.

ತಿಪ್ಪಣ್ಣ ಕೊಡಗಾನೂರು, ಸುನಿತಾ ದಂಪತಿಯ ಪುತ್ರಿ ಕೃತಿಕಾ ಟ್ಯೂಷನ್‌ಗೆ ಹೋಗಿದ್ದ ವೇಳೆ ಅಪಹರಣಕಾರರು ಕಿಡ್ನ್ಯಾಪ್ ಮಾಡಿದ್ದಾರೆ. ಘಟನೆ ಸಂಬಂಧ ಕೃತಿಕಾ ಮಾವ ಅನಿಲ್ ಬಾಡಗಂಡಿಯ ಮೇಲೆ ಅನುಮಾನ ವ್ಯಕ್ತವಾಗಿದೆ. ಅನಿಲ್, ಬಿಹಾರದ ನಾಲ್ವರು ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾವನೇ ಕಿಡ್ನ್ಯಾಪ್ ಮಾಡಿರೋದಾಗಿ ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ. ಇತ್ತೀಚೆಗೆ ಅನಿಲ್ ಬಾಡಗಂಡಿ ಜೂಜಿನಿಂದ ಲಾಸ್ ಆಗಿದ್ದ. ಹೀಗಾಗಿ ಹಣಕ್ಕಾಗಿ ಮಾವನೇ ಕಿಡ್ನ್ಯಾಪ್ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸದ್ಯ ನವನಗರ ಠಾಣೆ ಪೊಲೀಸರು ಬಾಲಕಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಜೂಜುಕೋರ ಮಾವನಿಂದಲೇ ಬಾಲಕಿ ಕಿಡ್ನಾಪ್? ಟ್ಯೂಷನ್‌ಗೆ ಹೋಗಿ ಬರುವ ವೇಳೆ ಚಾಕಲೇಟ್ ಕೊಡುವ ನೆಪ ಮಾಡಿ ಕಾರಿನಲ್ಲಿ ಎಳೆದೊಯ್ದ ಅನಿಲ ಬಾಡಗಂಡಿ ಹಾಗೂ ನಾಲ್ವರು ಸಹಚರರು ಕಿಡ್ನಾಪ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅನಿಲ್ ಬಾಡಗಂಡಿ ಕ್ಯಾಸಿನೊ, ಇಸ್ಪಿಟ್ ದಾಸನಾಗಿದ್ದ. ಇತ್ತೀಚೆಗೆ ಸಾಕಷ್ಟು ಹಣ ಕಳೆದುಕೊಂಡು ಲಾಸ್ ಆಗಿದ್ದ. ಹೀಗಾಗಿ ಹಣ ಮಾಡಲು ಈ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಬಾಲಕಿ ಪೋಷಕರು, ಪೊಲೀಸರು ರಾತ್ರಿಯಿಡೀ ಹುಡುಕಾಡಿದ್ದಾರೆ. ಬಾಲಕಿ ತಾಯಿ ಹಾಗೂ ಸಹೋದರನನ್ನು ವಿಚಾರಿಸಿ ಠಾಣೆಯಿಂದ ಮನೆಗೆ ಕಳಿಸಿದ್ದಾರೆ. ಅಪಹರಣಗಾರರು ಬಾಲಕಿ ತಂದೆ ಜೊತೆ ಹಿಂದಿಯಲ್ಲಿ ಮಾತನಾಡಿದ್ದಾರಂತೆ. ಈ ವೇಳೆ ಮಗುವಿಗೆ ಏನಾದರೂ ಹೆಚ್ಚುಕಮ್ಮಿ ಆದರೆ ನಿಮ್ಮನ್ನು ಬಿಡೋದಿಲ್ಲ ಎಂದು ತಂದೆ ತಿಪ್ಪಣ್ಣ ವಾರ್ನಿಂಗ್ ಮಾಡಿದ್ದಾರೆ. ಇಲ್ಲ ಏನು ಮಾಡೋದಿಲ್ಲ ಐವತ್ತು ಲಕ್ಷ ತೆಗೆದುಕೊಂಡು ಬನ್ನಿ ಎಂದು ಪೊಲೀಸರಿಗೆ ಹೇಳದಂತೆ ಕಿಡ್ನಾಪರ್ಸ್ ಎಚ್ಚರಿಕೆ ನೀಡಿದ್ರಂತೆ.

ಇದನ್ನೂ ಓದಿ: Coconut Water: ತೆಂಗಿನ ನೀರಿನ ಆರೋಗ್ಯ ಪ್ರಯೋಜನಗಳನ್ನು ತಿಳಿದ್ರೆ ನಿಜವಾಗಿಯೂ ಆಶ್ಚರ್ಯವಾಗುತ್ತೆ

Published On - 8:19 am, Thu, 28 October 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್