ಬಾಗಲಕೋಟೆ: ಹೆಸ್ಕಾಂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ನೂರಾರು ಪಕ್ಷಿಗಳು ಸಾವಿಗೀಡಾಗಿದ್ದು, ಮತ್ತಷ್ಟು ಪಕ್ಷಿಗಳು ರಸ್ತೆ ಬದಿ ವಿಲವಿಲ ಅಂತಾ ದಾರಿಹೋಕರಲ್ಲಿ ಪ್ರಾಣ ಭಿಕ್ಷೆ ಕೇಳುತ್ತಿವೆ. ಹೊಸ ವಿದ್ಯುತ್ ಲೇನ್ ಅಳವಡಿಸಲು ಮರ ಕಡಿದ ಹಿನ್ನೆಲೆ ಕಡಿದು ಹಾಕಿದ ಮರದಲ್ಲಿದ್ದ ನೂರಾರು ಪಕ್ಷಿಗಳು ದುರಂತ ಸಾವು ಕಂಡಿವೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಮಹಾಲಿಂಗಪುರದಲ್ಲಿ ಘಟನೆ ನಡೆದಿದೆ.
ಮಹಾಲಿಂಗಪುರದಲ್ಲಿ ಬಸ್ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ನೂರಾರು ಪಕ್ಷಿಗಳಿಗೆ ಆಶ್ರಯವಾಗಿತ್ತು. ಆದರೆ ಕಾರ್ಯನಿಮಿತ್ತ ಹೆಸ್ಕಾಂ ಸಿಬ್ಬಂದಿ ಮರ ಕಡಿದು ಹಾಕಿದ ಪರಿಣಾಮ ಈ ದುರಂತ ನಡೆದಿದೆ. ಮರದಲ್ಲಿ ನೂರಾರು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸ ಇದ್ದವು.
ಆದರೆ ಮರದಲ್ಲಿದ್ದ ನೂರಾರು ಪಕ್ಷಿಗಳು ಇದೀಗ ಮೃತಪಟ್ಟಿವೆ. ಹಲವು ಪಕ್ಷಿಗಳು ಜೀವನ್ಮರಣ ಹೋರಾಟ ನಡೆಸಿವೆ. ಮರ ಕಡಿಯುವ ಮುನ್ನ ಎಚ್ಚರಿಕೆ ವಹಿಸಿದ್ದರೆ ಪಕ್ಷಿಗಳ ಜೀವ ಉಳಿಸಬಹುದಿತ್ತು ಅನ್ನುತ್ತಿದ್ದಾರೆ ಸ್ಥಳೀಯರು.
ಹಾಸನದಲ್ಲಿ 30ಕ್ಕೂ ಹೆಚ್ಚು ಮಂಗಗಳನ್ನು ರಾತ್ರೋ ರಾತ್ರಿ ಕೊಂದು ಬಿಸಾಡಿ ಹೋಗಿರುವ ದುರುಳರು
(tree cutting hescom negligence hundreds of birds died in mahalingpur in bagalkot district)
Published On - 9:33 am, Fri, 30 July 21